‘ಲೇ ಪಮ್ಮು, ಇವತ್ತು ನಿಂಗೊಂದು ಸರ್‌ಪ್ರೈಜ್ ಗಿಫ್ಟ್ ತಂದಿದೀನಿ ಕಣೆ, ವೆರಿ ಸ್ಪೆಷಲ್... ನಿನಗಾಗಿ’ ಎಂದ ತೆಪರೇಸಿ.

ಮಡದಿ ಪಮ್ಮಿಗೆ ಆಶ್ಚರ್ಯ, ‘ಹೌದಾ? ಡ್ರಾಮಾ ಅಲ್ಲ ತಾನೆ? ಏನ್ ತಂದಿದೀರಿ?’

‘ನೋಡು ಇದೇ ಬ್ಯಾಡ ಅನ್ನೋದು. ನಾ ತಂದಿರೋ ಗಿಫ್ಟು ನಿನ್ ಫ್ರೆಂಡ್ಸ್ ಹತ್ರ ಇರೋಕೆ ಸಾಧ್ಯವೇ ಇಲ್ಲ’.

‘ಹೌದಾ? ಅಂಥದೇನಪ ಅದು, ಫಾರಿನ್ ಪರ್ಫ್ಯೂಮಾ?’

‘ಏಯ್, ಅದೆಲ್ಲ ಜುಜುಬಿ’.

‘ಮತ್ತೆ ಸೀರೆನಾ? ಕಾಂಜೀವರಂ?’

‘ಕಾಂಜೀನೂ ಅಲ್ಲ, ಪೀಂಜೀನೂ ಅಲ್ಲ’.

‘ಮತ್ತೇನಪ್ಪ ಬಳೆ, ನೆಕ್ಲೇಸ್?’

‘ಹ್ಞಾಂ... ಈವರೆಗೆ ಯಾರೂ ಹಾಕಿರದ ಸ್ಪೆಷಲ್ ಡಿಸೈನ್ ನೆಕ್ಲೇಸ್ ತಂದಿದೀನಿ’.

‘ಹೌದಾ? ಚಿನ್ನದ್ದಾ... ಏನ್ರಿ ಲಾಟ್ರಿ ಗೀಟ್ರಿ ಹೊಡೀತಾ?’

‘ಇದಕ್ಯಾಕೆ ಲಾಟ್ರಿ ಹೊಡೀಬೇಕು ಬಿಡೆ, ನೀನು ಯಾವಾಗ್ಲೂ ಕೇಳ್ತಿದ್ಯೆಲ್ಲ, ನನ್ ಫ್ರೆಂಡ್ಸ್ ಹತ್ರ ಅಂಥ ನೆಕ್ಲೇಸ್ ಇದೆ, ಇಂಥ ಬಳೆ ಇದೆ, ನೀವೇನೂ ಕೊಡ್ಸಲ್ಲ ಅಂತ’.

‘ಹೌದೂರೀ, ನನ್ ಫ್ರೆಂಡ್ಸ್ ಹತ್ರ ಇರೋ ಒಡವೆ ಡಿಸೈನು ಎಲ್ಲೂ ಸಿಗಲ್ಲ, ಕೆಲವರತ್ರ ಲಿಮಿಟೆಡ್ ಎಡಿಶನ್ಸ್ ಅದಾವೆ ಗೊತ್ತಾ?’

‘ಆದ್ರೆ ನಾನು ತಂದಿರೋದು ಓನ್ಲಿ ಒನ್ ಎಡಿಶನ್, ಬೇರೆಲ್ಲೂ ಸಿಗಲ್ಲ’.

‘ಮತ್ತೆ ಎಲ್ಲಿ ತೋರಿಸ್ರಿ ನೋಡಾಣ, ಎಷ್ಟಾತು ನೆಕ್ಲೇಸ್‌ಗೆ?’

‘ದುಡ್ಡು ಮುಖ್ಯ ಅಲ್ಲ, ಆದ್ರೆ ನಾನು ತಂದಿರೋದು ಡಿಫರೆಂಟ್ ನೆಕ್ಲೇಸ್. ಹೆಸರೇನು ಗೊತ್ತಾ? ಒಲಿಂಪಿಕ್ ನೆಕ್ಲೇಸ್!’

‘ಒಲಿಂಪಿಕ್ ನೆಕ್ಲೇಸಾ? ಎಲ್ಲಿ ತೋರ್ಸಿ ನೋಡಾಣ’.

ತೆಪರೇಸಿ ಮೆಲ್ಲಗೆ ಬಾಕ್ಸ್ ತೆರೆದು ನೆಕ್ಲೇಸ್ ತೆಗೆದಿಟ್ಟ. ಅದನ್ನು ನೋಡಿ ಪಮ್ಮಿ ಮುಖ ಒಂಥರಾ ಮಾಡಿದಳು. ‘ಏನ್ರಿ ಇದು ಹಿಂಗಿದೆ?’

‘ಅದು ಹಂಗೇ ಇರೋದು, ಹೊಸ ಟ್ರೆಂಡ್. ಐದು ಕಂಚು, ಒಂದು ಬೆಳ್ಳಿ ಪದಕದ ನೆಕ್ಲೇಸ್’.

‘ಮತ್ತೆ ಚಿನ್ನ?’

‘ಚಿನ್ನ ನಮ್ಮೋರು ಗೆಲ್ಲಲಿಲ್ಲ, ನಾನೇನ್ ಮಾಡ್ಲಿ?’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.