ಬೆಕ್ಕಣ್ಣ ಘನ ಗಂಭೀರವಾಗಿ ಕೂತು ವಿಡಿಯೊ ವೀಕ್ಷಿಸುತ್ತಿತ್ತು.

‘ಫ್ಯಾಷನ್ ಶೋ ವಿಡಿಯೊ, ಮೊನ್ನೆ ಹೈದರಾಬಾದಿನಲ್ಲಿ ಮುಕ್ತಾಯವಾಯಿತಲ್ಲ, ವಿಶ್ವಸುಂದರಿ ಸ್ಪರ್ಧೆ ಅವುಗಳ ವಿಡಿಯೊ ನೋಡಾಕೆ ಹತ್ತೀನಿ’ ಎಂದಿತು.

‘ಓಹೋ… ನೀನೂ ಕ್ಯಾಟ್ ಫ್ಯಾಷನ್ ಶೋಗಳಲ್ಲಿ, ಸೌಂದರ್ಯ ಸ್ಪರ್ಧೆಗಳಲ್ಲಿ
ಭಾಗವಹಿಸತೀಯೇನು’ ಎಂದು ನಕ್ಕೆ.

‘ನನಗ ಅಂಥ ಭ್ರಮೆ ಏನಿಲ್ಲ. ಅದೆಲ್ಲ ನಿಮಗೆ’ ಎಂದು ಗುರುಗುಟ್ಟಿದ ಬೆಕ್ಕಣ್ಣ.

‘ಇಂಥಲ್ಲೆಲ್ಲ ಸುಂದರಿಯರು ಕ್ಯಾಟ್ವಾಕ್ ಮಾಡಿದ್ರು ಅಂತಾರಲ್ಲ… ಕ್ಯಾಟ್ ಅಂದ್ರ ನಾವು. ಬೆಕ್ಕುಗಳ ಹೆಸರಿನಲ್ಲಿ ಇವರೇನು ವಾಕ್ ಮಾಡ್ತಾರಪ್ಪ ಅಂತ ನೋಡತಿದ್ದೆ’ ಎಂದಿತು.

‘ಓ… ಅದಾ… ನೀವು ಬೆಕ್ಕುಗಳು ಒಂದು ಸಣ್ಣ ಜಾಗದಾಗೂ ಸದ್ದಿಲ್ಲದೆ, ಆರಾಮಾಗಿ ಘನತೆಯಿಂದ ತೆಲಿ ಎತ್ತಿ ನಡೀತೀರಿ. ಅದೇ ಥರಾ ಹಂಗೆ ಕಿರಿದಾದ ಪ್ಯಾಸೇಜಿನಲ್ಲಿ ಆ ಸುಂದರಿಯರು ಸೊಂಟ ಬಳುಕಿಸಿ ನಡೀತಾರಲ್ಲ, ಅದಕ್ಕೇ ಕ್ಯಾಟ್ ವಾಕ್ ಅನ್ನೂ ಹೆಸರು’ ಎಂದು ನಾನು ವಿವರಿಸಿದೆ.

‘ಈ ಫ್ಯಾಷನ್ ಶೋಗಳು ಶುರುವಾಗೋದಕ್ಕಿಂತ ಮುಂಚೆನೇ ಥಿಯೇಟರು, ಸೇತುವೆ, ಹಡಗು ಇಂಥಲ್ಲಿ ಬೆಕ್ಕುಗಳು ಹೋಗೂ ಅಷ್ಟೇ ಸಣ್ಣ ಪ್ಯಾಸೇಜ್ ಇರತಾವೆ. ಅಂಥಲ್ಲಿ ಹೋಗೂದಕ್ಕೆ ಕ್ಯಾಟ್ವಾಕ್ ಅಂತ ಕರೀತಿದ್ದರಂತೆ. ನೀ ಜರಾ ಕ್ಯಾಟ್ವಾಕ್ ಪದದ ಮೂಲ ಎಲ್ಲೈತಂತ ಓದು!’ ಎಂದು ಬೆಕ್ಕಣ್ಣ ನನ್ನ ಮೂತಿಗೆ ತಿವಿಯಿತು.

‘ನನ್ನ ಪ್ರಕಾರ ಈ ಸಲ ನಿಜವಾದ ಕ್ಯಾಟ್ವಾಕ್ ಮಾಡಿದ್ದು ಒಬ್ಬಾಕಿ ಮಾತ್ರ’ ಎಂದು ಮುಗುಮ್ಮಾಗಿ ಹೇಳಿತು.

‘ಹೌದಾ… ಯಾರಲೇ ಅದು?’ ಎಂದೆ.

‘ಹೈದರಾಬಾದಿಗೆ ಬಂದಿದ್ದ ಮಿಸ್ ಇಂಗ್ಲೆಂಡ್ ಮಿಲ್ಲಾ ಮ್ಯಾಗಿ ನಮ್ಮನ್ನು ಮಾರಾಟದ ವಸ್ತುಗಳ ಹಂಗೆ ಕೆಟ್ಟದಾಗಿ ನಡೆಸಿಕೊಂಡರು ಅಂತ ಸ್ಪರ್ಧೆ ಯಿಂದ ದಿಟ್ಟತನದಿಂದ ಹೊರನಡೆದಳಲ್ಲ… ಆಕಿಯದು ನಿಜವಾದ ಕ್ಯಾಟ್ವಾಕ್! ನಾವು ಬೆಕ್ಕುಗಳು ನಮ್ಮ ಘನತೆ, ಸ್ವಾಭಿಮಾನಕ್ಕೆ ಧಕ್ಕೆ ಬಂದ್ರೆ ಒದ್ದು ಹೊರಹೋಗತೀವಿ. ಹಂಗೆ ಅವಳೊಬ್ಬಳೇ ನಿಜವಾದ ಕ್ಯಾಟ್ವಾಕ್ ಮಾಡಿದಾಕಿ’ ಎಂದು ಬಲು ಮೆಚ್ಚಿಗೆಯಿಂದ ನುಡಿಯಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.