ಭಾನುವಾರ, ಮೇ 22, 2022
29 °C

ಚುರುಮುರಿ| ಬ್ಲ್ಯಾಕ್‌ ಪೇಂಟು

ಸುಧೀಂದ್ರ Updated:

ಅಕ್ಷರ ಗಾತ್ರ : | |

Prajavani

ಕಾಲಿಂಗ್ ಬೆಲ್ ಸದ್ದಿಗೆ, ಪೇಂಟರ್ ಶಿವ ಬಂದ ಅಂದ್ಕೊಂಡು ಬಾಗಿಲು ತೆಗೆದೆ. ಪೇಪರ್ ಬಿಲ್ ಹಿಡ್ಕೊಂಡು ರಂಗಸ್ವಾಮಿ ಬಂದಿದ್ರು. ‘ಗೇಟು ತುಕ್ಕು ಹಿಡಿತಾ ಇದೆ, ಬೇಗ ಪೇಂಟ್ ಮಾಡ್ಸಿ ಸಾರ್. ಒಂದಿವ್ಸ ಈ ಗೇಟಿನ ಕಂಬಿ ನನ್ಕಾಲ್ಮೇಲೆ ಬೀಳತ್ತೆ’ ಅಂದ್ರು.

‘ಪೇಂಟರ್ ಬೆಳಗ್ಗೇನೇ ಬರ‍್ತೀನಿ ಅಂದಿದ್ದ’ ಎಂದೆ. ‘ಇಷ್ಟು ಸಣ್ಕೆಲ್ಸಕ್ಕೆಲ್ಲಾ ಅವ್ರೆಲ್ಲಿ ಬರ‍್ತಾರೆ. ಅಂಗಡೀಂದ ಪೇಂಟು, ಬ್ರಶ್ಶು ತಂದು ನೀವೇ ಹೊಡೀಬಾರ‍್ದಾ? ನಮ್ಮನೆ ಕಿಟ್ಕಿ ಬಾಗ್ಲಿಗೆಲ್ಲಾ ನಾನೇ ಪೇಂಟ್ ಹೊಡ್ಯೋದು’ ಎಂದು ರಂಗಸ್ವಾಮಿ ಐಡಿಯಾ ಕೊಟ್ರು.

ಹಾರ್ಡ್‌ವೇರ್ ಅಂಗಡಿಗೆ ಹೋದೆ. ‘ಸಣ್ಣದೊಂದು ಕಪ್ಪು ಬಣ್ಣದ ಪೇಂಟ್ ಡಬ್ಬ, ಬ್ರಶ್ಶು’ ಕೊಡಪ್ಪಾ ಅಂದೆ. ‘ಕಪ್ಪು ಬಣ್ಣ ಸ್ಟಾಕ್ ಇಲ್ಲ, ಬೇರೆ ಯಾವ್ದಾದ್ರೂ ಡಾರ್ಕ್ ಕಲರ್ ಕೊಡ್ಲಾ?’ ಎಂದ. ‘ಕರಿ ಬಣ್ಣನೇನಾದ್ರೂ ವಾಸ್ತು ಲಿಸ್ಟಿಗೆ ಸೇರಿಸಿದಾರೇನಪ್ಪಾ?’ ಅಂದ ಕೂಡ್ಲೇ, ಅಂಗ್ಡಿ ಓನರ್ ‘ಏನೋ ಗೊತ್ತಿಲ್ಲ ಸಾರ್. ನಾಲ್ಕು ದಿನದಿಂದ ಮಾರ್ಕೆಟ್ಟಲ್ಲಿ ಸ್ಟಾಕಿಲ್ಲ. ಬಂದ ಕೂಡ್ಲೇ ಖಾಲಿಯಾಗ್ತಿದೆಯಂತೆ’ ಅಂದ.

‘ಸರಿ, ಡಾರ್ಕ್ ನೇವಿ ಬ್ಲೂನೇ ಕೊಡು. ದೂರದಿಂದ ಅದು ಕರಿ ಕಲರ್ ಥರಾನೇ ಕಾಣ್ಸತ್ತೆ’ ಎಂದೆ. ಪೇಪರ್‌ಗೆ ಸುತ್ತಿಕೊಟ್ಟ. ಮನೇಗೆ ಬಂದವ್ನು ಪೇಂಟ್ ಡಬ್ಬ, ಬ್ರಶ್ ಹಿಡ್ಕೊಂಡು, ನೆಲದ ಮೇಲೆ ಬಣ್ಣ ಬೀಳದೇ ಇರ‍್ಲಿ ಅಂತ ಗೇಟಿನ ಕೆಳಗೆ ಹಿಂದಿನ ದಿನದ ಪೇಪರ್ ಹರಡಿಕೊಂಡೆ.

ಆ ಪೇಪರಲ್ಲಿ ಸುದ್ದಿಯೊಂದು ಕಣ್ಣಿಗೆ ಬಿತ್ತು. ‘ಪರಮೇಶ್ ಮುಖಕ್ಕೆ ಕಪ್ಪು ಬಣ್ಣ ಹಚ್ದೋರಿಗೆ ಒಂದು ಲಕ್ಷ ರೂಪಾಯಿ ಬಹುಮಾನ– ಕಾರ್ಪೊ ರೇಟರ್ ಘೋಷಣೆ’. ಕುತೂಹಲದಿಂದ ಅದೇ ಪೇಪರ್ ತಿರುವಿ ಹಾಕಿದೆ. ‘ಕಾರ್ಪೊರೇಟರ್ ಮೂತಿಗೆ ಕರಿ ಪೇಂಟ್ ಹಾಕೋರಿಗೆ ಎರಡು ಲಕ್ಷ ರೂಪಾಯಿ’ ಅನ್ನೋ ಸುದ್ದಿ ಕಾಣಿಸ್ತು.

ಮಾರ್ಕೆಟ್ಟಲ್ಲಿ ಬ್ಲ್ಯಾಕ್ ಕಲರ್ ಪೇಂಟು ಬ್ಲ್ಯಾಕಲ್ಲೇಕೆ ಓಡ್ತಿದೇಂತ ಗೊತ್ತಾಯ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು