ಚರ್ಚೆ | SSLC: ಗುಣಮಟ್ಟದ ಶಿಕ್ಷಣ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿ
SSLC |ಕನ್ನಡ ಮಾಧ್ಯಮ ಮತ್ತು ಕನ್ನಡ ಭಾಷಾ ವಿಷಯದಲ್ಲಿ ಹೆಚ್ಚು ಮಕ್ಕಳು ಅನುತ್ತೀರ್ಣ ಕುರಿತು ಎರಡು ಅಭಿಪ್ರಾಯಗಳು
ಎಸ್.ಜಿ. ಸಿದ್ಧರಾಮಯ್ಯ
Published : 17 ಮೇ 2025, 0:30 IST
Last Updated : 17 ಮೇ 2025, 0:30 IST
ಫಾಲೋ ಮಾಡಿ
Comments
ಸರ್ಕಾರವು 2016ರ ಜೂನ್ 13ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ, ಸರ್ಕಾರಿ ಶಾಲೆಗಳ ಸಬಲೀಕರಣ ವರದಿಗಾಗಿ ಸಮಿತಿಯನ್ನು ರಚಿಸಿತ್ತು. ಆ ಸಮಿತಿಯು ಇಡೀ ರಾಜ್ಯದ ಒಳನಾಡಿನ ಗಡಿಭಾಗಗಳ ಸರ್ಕಾರಿ ಶಾಲೆಗಳನ್ನು ತನ್ನ ಅಧ್ಯಯನದ ಕಕ್ಷೆಗೆ ಒಳಗು ಮಾಡಿಕೊಂಡು ವರದಿಯನ್ನು ತಯಾರಿಸಿ 2017ರಲ್ಲಿ ಸರ್ಕಾರಕ್ಕೆ ಅದನ್ನು ಒಪ್ಪಿಸಿದೆ. ಅಲ್ಲಿನ ಶಿಫಾರಸುಗಳು ಇಂದಿಗೂ ಹೆಚ್ಚು ಪ್ರಸ್ತುತವಿದ್ದು, ಅವುಗಳನ್ನು ಸಂವಿಧಾನಾತ್ಮಕವಾಗಿ ಜಾರಿಗೆ ತರುವ ಅಗತ್ಯವಿದೆ