ದೇವನೂರ ಮಹಾದೇವ ಅವರು ಆರ್ಎಸ್ಎಸ್ಗೆ ಎಳೆತನದಲ್ಲಿಯೇ ಬುದ್ಧಿ ಸ್ಥಗಿತಗೊಂಡು ದೇಹ ಮಾತ್ರ ದಡೂತಿಯಾಗಿದೆ ಎಂದು ವ್ಯಂಗ್ಯಭರಿತ ಲೇಖನ ಬರೆದಿದ್ದಾರೆ. ಆರ್ಎಸ್ಎಸ್ ವಿರೋಧಿಸುವವರಿಗೆ ನಾನು ಹೇಳಬಯಸುವುದಿಷ್ಟೆ: ನೀವು ಇತಿಹಾಸದ ಕಡೆ ಗಮನಹರಿಸಿ. ಈ ದೇಶದಲ್ಲಿ ಬ್ರಿಟಿಷರು ಬಂದು ಹಿಂದೂ ಮುಸ್ಲಿಮರ ನಡುವೆ ದ್ವೇಷದ ಬೀಜ ಬಿತ್ತಿದರು. ಗಾಂಧೀಜಿ ಮತ್ತು ಸಮಾಜವಾದಿಗಳು ಅದಕ್ಕೆ ನೀರೆರೆದು ಬೆಳೆಸಿದರು; ಕೆಲವರು ಈಗಲೂ ಬೆಳೆಸುತ್ತಲೇ ಇದ್ದಾರೆ.

ದೇಶದಲ್ಲಿ ಕಾಂಗ್ರೆಸ್ ಮತ್ತು ಗಾಂಧೀಜಿ ಅವರ ಮುಸ್ಲಿಂ ಓಲೈಕೆ ಜಾಸ್ತಿಯಾಗಿ, ಹಿಂದೂಗಳಿಗೆ ಅಭದ್ರತೆ ಕಾಡುತ್ತಿರುವುದನ್ನು ಮನಗಂಡು, ಕೇಶವ ಬಲಿರಾಮ ಹೆಡ್ಗೇವಾರ್ ನೇತೃತ್ವದಲ್ಲಿ ಆರ್ಎಸ್ಎಸ್ ಸ್ಥಾಪನೆಯಾಯಿತು. ಇನ್ನೊಂದೆಡೆ, ಮುಸ್ಲಿಮರ ಪ್ರತ್ಯೇಕ ಮತದಾನದ ಪ್ರತಿಪಾದನೆಯನ್ನು ಬೆಂಬಲಿಸಿದ ಗಾಂಧೀಜಿ, ದಲಿತರ ಪ್ರತ್ಯೇಕ ಕಾಯ್ದೆಯನ್ನು ವಿರೋಧಿಸಿದರು. ಗಾಂಧೀಜಿ ಮತ್ತು ಕಾಂಗ್ರೆಸ್ ಎಂದೂ ದಲಿತ ಪರ ಇರಲಿಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ. ಬಂಡಾಯ ಸಾಹಿತಿಯಾದ ದೇವನೂರರು, ಅಂಬೇಡ್ಕರ್ ಹೃದಯದ ಅಂತರಾಳದ ಮಾತುಗಳನ್ನು ಸ್ಮರಿಸಲಿ. ಜಾತ್ಯತೀತ ನಾಯಕರು, ಗಾಂಧಿ ಹಾಗೂ ಕಾಂಗ್ರೆಸ್ ಅಸ್ಪೃಶ್ಯರಿಗೆ ಏನು ಮಾಡಿವೆ ಎಂದು ಒಮ್ಮೆ ಅವರು ಆತ್ಮನಿರೀಕ್ಷೆ ಮಾಡಿಕೊಳ್ಳಲಿ.

ಲೇಖಕ: ಕೆಪಿಎಸ್ಸಿ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.