ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ ಬಿಡಿ!

ಅಕ್ಷರ ಗಾತ್ರ

ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೂ ಉಚಿತ ಬಸ್‌ ಪಾಸ್‌ ಕೊಡುವಂತೆ ಒತ್ತಾಯಿಸಿ ಪ್ರತಿಭಟನೆಗೆ ಇಳಿದಿರುವ ವಿದ್ಯಾರ್ಥಿಗಳು ಮತ್ತು ಸಂಘಟನೆಗಳವರಿಗೆ ಸರ್ಕಾರಿ ಶಾಲೆಗಳೇಕೆ ಬೇಡವಾದವು?

‘ಸರ್ಕಾರಿ ಶಾಲೆಗಳು ಬೇಡ’ ಎಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿಯಾದರೂ ಖಾಸಗಿ ಶಾಲೆಗಳಿಗೆ ಹೋಗುತ್ತೇವೆ. ಆದರೆ ಸರ್ಕಾರದ ಸೌಲಭ್ಯಗಳೆಲ್ಲವೂಬೇಕು ಎಂಬುದು ಎಂಥ ನೀತಿ? ಇದಕ್ಕೆ ಸರ್ಕಾರ ಮಣಿಯಬಾರದು. ಜಾತಿ- ಧರ್ಮಗಳನ್ನು ಪರಿಗಣಿಸದೆ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡಮಕ್ಕಳಿಗೆ ಮಾತ್ರ ಉಚಿತ ಬಸ್ ಪಾಸ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಸರ್ಕಾರ ಕೊಡಬೇಕು. ಸರ್ಕಾರಕ್ಕೂ ಕೆಲವು ಸಿದ್ಧಾಂತಗಳಿರುತ್ತವೆ. ಅವನ್ನೆಲ್ಲ ಬಿಟ್ಟು, ಕೇಳಿದ್ದನ್ನೆಲ್ಲಾ ಕೊಡಲು ಸಾಧ್ಯವೇ? ಉಚಿತ ಬಸ್ ಪಾಸ್‌ಗೋಸ್ಕರ ಪ್ರತಿಭಟನೆ ನಡೆಸುವುದನ್ನು ಬಿಟ್ಟು, ಸರ್ಕಾರಿ ಶಾಲಾ ಕಾಲೇಜುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಘಟನೆಗಳು ಚಿಂತಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT