ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಶುರುವಾಗಿ ಎರಡು ವರ್ಷಗಳು ಕಳೆದಿವೆ. ಆದರೆ, ರಾಜ್ಯದ ಪರಿಸ್ಥಿತಿ ಈಗಲೂ ಶಾಂತವಾಗಿಲ್ಲ, ಅಲ್ಲಿನ ಜನಜೀವನ ಸಹಜವಾಗಿಲ್ಲ. ಮೈತೇಯಿ ಸಮುದಾಯದವರನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸುವ ಬಗ್ಗೆ ಪರಿಗಣಿಸುವಂತೆ ಹೈಕೋರ್ಟ್ ಅಲ್ಲಿನ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದನ್ನು ವಿರೋಧಿಸಿ ಕುಕಿ ಸಮುದಾಯದವರು ಆಯೋಜಿಸಿದ್ದ ಜಾಥಾ ವೇಳೆ ಆರಂಭವಾದ ಹಿಂಸಾಚಾರ ವಿವಿಧೆಡೆ ಹರಡಿತು. ನಂತರದ ದಿನಗಳಲ್ಲಿ ಇಡೀ ರಾಜ್ಯವು ಹಿಂಸೆಗೆ ಸಿಲುಕಿ ನಲುಗಿದೆ. ಮಣಿಪುರ ರಾಜ್ಯವು ಈಗ ಸಮುದಾಯಗಳ ನೆಲೆಯಲ್ಲಿ ಭೌತಿಕವಾಗಿಯೂ ಒಡೆದುಹೋದಂತಿದೆ. ಒಂದು ಸಮುದಾಯಕ್ಕೆ ಸೇರಿದ ಜನರಿಗೆ ಇನ್ನೊಂದು ಸಮುದಾಯದ ಜನ ಇರುವ ಪ್ರದೇಶವನ್ನು ಪ್ರವೇಶಿಸಲು ಅಲ್ಲಿ ಅವಕಾಶ ಕೊಡುತ್ತಿಲ್ಲ. ಅಲ್ಲಿನ ಜನರ ಕೈಯಲ್ಲಿ ಈಗ ಶಸ್ತ್ರಾಸ್ತ್ರಗಳು ಇವೆ, ಸರ್ಕಾರದ ಶಸ್ತ್ರಾಗಾರಗಳಿಂದ ಲೂಟಿ ಮಾಡಿದ ಬಂದೂಕು ಮತ್ತು ಗುಂಡುಗಳು ಅಲ್ಲಿ ಜನರಿಗೆ ಮುಕ್ತವಾಗಿ ಸಿಗುತ್ತಿವೆ. ರಾಜ್ಯದಲ್ಲಿ ನಿತ್ಯದ ಜನಜೀವನಕ್ಕೆ ಧಕ್ಕೆ ಆಗಿದೆ. ಹಿಂಸಾಚಾರಕ್ಕೆ ತುತ್ತಾಗಿ 250ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಂದಾಜು 60,000 ಜನ ಶಿಬಿರಗಳಲ್ಲಿ ವಾಸ ಮಾಡುತ್ತಿದ್ದಾರೆ.

ರಾಜ್ಯದ ಪರಿಸ್ಥಿತಿಯನ್ನು ಹತೋಟಿಗೆ ತರಲು ರಾಜ್ಯ ಸರ್ಕಾರಕ್ಕೆ ಹಾಗೂ ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಆಗಿದ್ದ ಎನ್.ಬಿರೇನ್ ಸಿಂಗ್ ಅವರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಬದಲು, ಅದು ಇನ್ನಷ್ಟು ಹದಗೆಡುವಂತೆ ಮಾಡಿದ್ದರು. ಅವರು ಮೈತೇಯಿ ಸಮುದಾಯಕ್ಕೆ ಸೇರಿದವರು. ರಾಜ್ಯದ ಪಾಲಿಗೆ ನಿಷ್ಪಕ್ಷಪಾತ ನಾಯಕನಂತೆ ವರ್ತಿಸುವ ಬದಲು ಅವರು ಮೈತೇಯಿ ಸಮುದಾಯದ ನಾಯಕನಂತೆ ವರ್ತಿಸಿದರು, ಆ ರೀತಿಯಲ್ಲೇ ಮಾತುಗಳನ್ನು ಆಡಿದರು. ಅವರು ಬಹಳಷ್ಟು ಹಾನಿ ಉಂಟುಮಾಡಿದ ನಂತರದಲ್ಲಿ ಕೇಂದ್ರ ಸರ್ಕಾರವು ಫೆಬ್ರುವರಿಯಲ್ಲಿ ಅವರು ರಾಜೀನಾಮೆ ಸಲ್ಲಿಸುವಂತೆ ಮಾಡಿತು. ರಾಷ್ಟ್ರಪತಿ ಆಡಳಿತ ಜಾರಿಗೆ ಬಂದ ನಂತರದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬ ಆಶಾವಾದ ಇತ್ತು. ಆದರೆ ಅಂತಹ ಕ್ರಮಗಳು ಆಗಿಲ್ಲ. ದೆಹಲಿಯಲ್ಲಿ ಮಾತುಕತೆ ನಡೆಯಿತಾದರೂ ಅದು ಎಲ್ಲರನ್ನೂ ಪ್ರತಿನಿಧಿಸಲಿಲ್ಲ ಎಂದು ಹೇಳಲಾಗಿದೆ. ಎರಡೂ ಬದಿಯವರು ತಮ್ಮ ನಿಲುವುಗಳಿಗೆ ಅಂಟಿಕೊಂಡಿದ್ದರು. ಹೀಗಾಗಿ, ಮಾತುಕತೆಯ ಮೂಲಕ ಯಾವ ಪ್ರಗತಿಯೂ ಆಗಲಿಲ್ಲ. ತಮಗೆ ಪ್ರತ್ಯೇಕ ಆಡಳಿತಾತ್ಮಕ ಪ್ರದೇಶವನ್ನು ನೀಡಬೇಕು ಎಂದು ಕುಕಿ ಸಮುದಾಯದವರು ಆಗ್ರಹಿಸುತ್ತಿದ್ದಾರೆ. ಈ ಆಗ್ರಹಕ್ಕೆ ಮೈತೇಯಿ ಸಮುದಾಯದ ಪ್ರಬಲ ವಿರೋಧ ಇದೆ. ರಾಜ್ಯಪಾಲ ಎ.ಕೆ. ಭಲ್ಲಾ ಅವರಿಗೆ ಮಣಿಪುರದ ಪರಿಸ್ಥಿತಿ ಚೆನ್ನಾಗಿ ಅರ್ಥವಾಗುತ್ತದೆ ಎನ್ನಲಾಗಿದೆ. ಆದರೆ ಅವರಿಂದ ಕೂಡ ನಿರೀಕ್ಷಿತ ಫಲ ಸಿಕ್ಕಿಲ್ಲ.

ಕೇಂದ್ರ ಸರ್ಕಾರವು ನಿರ್ಲಕ್ಷ್ಯದ ಧೋರಣೆಯನ್ನು ಅನುಸರಿಸುತ್ತಿದೆ. ಹಿಂಸೆಗೆ ತುತ್ತಾಗಿರುವ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ವರ್ಷಗಳಿಂದ ಭೇಟಿ ನೀಡಿಲ್ಲ. ರಾಜ್ಯದ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಸಂಸತ್ತಿನಲ್ಲಿ ಹೆಚ್ಚು ಸಮಯ ನೀಡಿಲ್ಲ. ಕುಕಿ ಮತ್ತು ಮೈತೇಯಿ ಸಮುದಾಯದವರನ್ನು ಒಂದೆಡೆ ಸೇರಿಸಿ, ಅವರ ನಡುವಿನ ವೈಮನಸ್ಸನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳದೇ ಇದ್ದರೆ ಮಣಿಪುರದ ಪಾಲಿಗೆ ಶಾಂತಿ ಮತ್ತು ಸಹಜ ಬದುಕು ಮರೀಚಿಕೆಯಂತೆ ಆಗುತ್ತದೆ. ರಾಜ್ಯದಲ್ಲಿ ಹಿಂಸಾಕೃತ್ಯಗಳು ಆಗಾಗ ನಡೆಯುತ್ತಲೇ ಇವೆ. ಅಲ್ಲಿ ಎಲ್ಲೆಡೆ ಬಿಗುವಿನ ಹಾಗೂ ಅನುಮಾನದ ವಾತಾವರಣ ಇದೆ. ಆಗಿರುವ ನಷ್ಟಕ್ಕೆ ಯಾರೂ ಹೊಣೆ ಹೊರುತ್ತಿಲ್ಲ. ಗಾಯಗಳಿಗೆ ಔಷಧಿ ನೀಡುವ ಕೆಲಸವನ್ನು ಯಾರೂ ಮಾಡುತ್ತಿಲ್ಲ. ಹಿಂಸಾಚಾರ ಭುಗಿಲೆದ್ದ ದಿನದ ವಾರ್ಷಿಕದಂದು ಕುಕಿ ಮತ್ತು ಮೈತೇಯಿ ಸಮುದಾಯಗಳು ನೆಲಸಿರುವ ಪ್ರದೇಶಗಳಲ್ಲಿ ಸಂಪೂರ್ಣ ಬಂದ್ ನಡೆದಿದ್ದನ್ನು ಕಂಡರೆ, ಪರಿಸ್ಥಿತಿಯ ಬಗ್ಗೆ ಅಲ್ಲಿನ ಜನರಲ್ಲಿ ಯಾವ ಬಗೆಯ ಭಾವ ಮೂಡಿರಬಹುದು ಎಂಬುದು ಅರಿವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.