ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳು ಜೀವರಕ್ಷಕ ಔಷಧಗಳ ಕೊರತೆ ಎದುರಿಸುತ್ತಿರುವುದು, ಆಡಳಿತಾತ್ಮಕ ವೈಫಲ್ಯಕ್ಕೆ ನಿದರ್ಶನವಾಗಿರುವಂತೆ ಜನಸಾಮಾನ್ಯರ ಆರೋಗ್ಯದ ಹಕ್ಕಿನ ನಿರಾಕರಣೆಯೂ ಆಗಿದೆ. ಜ್ವರ, ಸಾಮಾನ್ಯ ನೋವು ನಿವಾಕರಗಳು, ಐವಿ ದ್ರಾವಣ ಹಾಗೂ ಆ್ಯಂಟಿಬಯೋಟಿಕ್ ರೀತಿಯ ನಿತ್ಯ ಬಳಕೆಯ ಔಷಧಗಳು ಅನೇಕ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲ. ರಾಜ್ಯ ಔಷಧ ಉಗ್ರಾಣದಲ್ಲಿ (ವೇರ್ ಹೌಸ್) ಔಷಧಗಳ ಕೊರತೆ ತೀವ್ರಗೊಂಡು, ಸರ್ಕಾರಿ ಆರೋಗ್ಯ ಸಂಸ್ಥೆಗಳಿಗೆ ಬೇಡಿಕೆಗೆ ತಕ್ಕಷ್ಟು ಔಷಧಗಳು ಪೂರೈಕೆಯಾಗುತ್ತಿಲ್ಲ. ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ಹಳೇ ಮೈಸೂರು ಭಾಗ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಔಷಧಗಳ ತೀವ್ರ ಕೊರತೆ ಇದೆ. 800ಕ್ಕೂ ಹೆಚ್ಚು ಮಾದರಿಯ ಔಷಧಗಳ ಸಂಗ್ರಹ ಜಿಲ್ಲಾ ಔಷಧ ಉಗ್ರಾಣಗಳಲ್ಲಿ ಇರುವುದು ಅಗತ್ಯ. ಆದರೆ, ಕೆಲವು ಜಿಲ್ಲೆಗಳಲ್ಲಿ 120ರಿಂದ 180 ಮಾದರಿಯ ಔಷಧಗಳ ದಾಸ್ತಾನಷ್ಟೇ ಲಭ್ಯವಿದೆ. ಔಷಧಗಳ ಕೊರತೆಯ ಕಾರಣದಿಂದಾಗಿಯೇ ಕೆಲವು ಆಸ್ಪತ್ರೆಗಳಲ್ಲಿ ತುರ್ತಾಗಿ ನಡೆಸಬೇಕಾಗಿದ್ದ ಶಸ್ತ್ರಚಿಕಿತ್ಸೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಹೊಲಿಗೆ, ಬ್ಯಾಂಡೇಜ್ ಸಾಮಗ್ರಿಗಳ ಕೊರತೆಯನ್ನೂ ಆಸ್ಪತ್ರೆಗಳು ಎದುರಿಸುತ್ತಿವೆ. ಸರ್ಕಾರದ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಹೊಣೆಗೇಡಿತನದಿಂದ ಉಂಟಾಗಿರುವ ಔಷಧಗಳ ಅಲಭ್ಯತೆಯಿಂದ ರೋಗಿಗಳು ಪಡಿಪಾಟಲು ಅನುಭವಿಸುವಂತಾಗಿದೆ.

ತುರ್ತು ಅಗತ್ಯ ಆಧರಿಸಿ ರೋಗಿಗಳ ಸಂಬಂಧಿಕರು ಖಾಸಗಿ ಮಳಿಗೆಗಳಿಂದ ಹಣ ತೆತ್ತು ಔಷಧ ಖರೀದಿಸುವ ಸ್ಥಿತಿ ಉದ್ಭವಿಸಿದೆ. ಸರ್ಕಾರಿ ಆಸ್ಪತ್ರೆಗಳ ವೈದ್ಯರು ಔಷಧಗಳನ್ನು ಹೊರಗೆ ಖರೀದಿಸುವಂತೆ ರೋಗಿಗಳಿಗೆ ಸಲಹೆ ನೀಡುತ್ತಿದ್ದಾರೆ. ಪತ್ರಿಕಾ ವರದಿಯ ನಂತರ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿಆರ್ಕೆ) ಯೋಜನೆಯಡಿ ಸ್ಥಳೀಯವಾಗಿ ಔಷಧ ಖರೀದಿಸಿ ತೊಂದರೆ ನೀಗಿಸುವ ಪ್ರಯತ್ನ ಕೆಲವು ಜಿಲ್ಲೆಗಳಲ್ಲಿ ನಡೆದಿದೆ. ಔಷಧಗಳ ಕೊರತೆ ನಿವಾರಣೆಗೆ ಸಂಬಂಧಿಸಿದಂತೆ 496 ಔಷಧಗಳ ಖರೀದಿ ಪ್ರಕ್ರಿಯೆ ನಡೆದಿದೆ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಹೇಳಿದೆ. ಸರ್ಕಾರಿ ಆಸ್ಪತ್ರೆಗೆ ಭೇಟಿ ಬರುವವರು ಹೊರಗಿನಿಂದ ಔಷಧ ಗಳನ್ನು ಖರೀದಿಸಬೇಕಾದ ಅಗತ್ಯವಿಲ್ಲ; ಆಸ್ಪತ್ರೆಯ ಆವರಣದಲ್ಲಿ ಔಷಧಗಳನ್ನು ಮಾರಾಟ ಮಾಡುವ ಫಾರ್ಮಸಿಗಳು ಇರಬಾರದು ಎಂದು ಅನೇಕ ಸಂದರ್ಭ
ಗಳಲ್ಲಿ ಪ್ರತಿಪಾದಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ತಮ್ಮ ಈ ವಾದವನ್ನು ಮುಂದಿಟ್ಟೇ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧ ಕೇಂದ್ರಗಳು ಕಾರ್ಯ ನಿರ್ವಹಿಸುವುದನ್ನು ವಿರೋಧಿಸಿದ್ದರು. ಆದರೆ, ಈಗ ಅವರ ಮಾತಿಗೆ ತದ್ವಿರುದ್ಧವಾಗಿ ಖಾಸಗಿ ಮಳಿಗೆಗಳಲ್ಲಿ ಔಷಧಗಳನ್ನು ಖರೀದಿಸುವಂತೆ ಹೇಳುವ ಪರಿಸ್ಥಿತಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೂಪುಗೊಂಡಿದೆ. ಬಿಕ್ಕಟ್ಟು ತಲೆದೋರಿದ ನಂತರ ಎಚ್ಚತ್ತಿರುವ ಸಚಿವರು, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ದಾಸ್ತಾನು ಖಚಿತಪಡಿಸಿಕೊಳ್ಳುವ ಜತೆಗೆ, ಯಾವುದೇ ಔಷಧ ಕೊರತೆಯಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತಮ್ಮ ಸೂಚನೆ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳುವುದರ ಜೊತೆಗೆ, ಔಷಧಗಳ ಖರೀದಿಗೆ ಅನುದಾನದ ಕೊರತೆ ಎದುರಾಗದಂತೆಯೂ ಸಚಿವರು ಗಮನಹರಿಸಬೇಕಾಗಿದೆ.

ಕುಡಿಯುವ ನೀರು, ಶಿಕ್ಷಣ, ವಸತಿಯಂತೆ ಆರೋಗ್ಯವೂ ನಾಗರಿಕರಿಗೆ ಸರ್ಕಾರ ಒದಗಿಸಬೇಕಾದ ಅಗತ್ಯ ಮೂಲ ಸೌಕರ್ಯಗಳಲ್ಲೊಂದು. ಬಡವರು ಹಾಗೂ ಜನಸಾಮಾನ್ಯರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿರುತ್ತಾರೆ. ಆರ್ಥಿಕವಾಗಿ ದುರ್ಬಲರಾದವರು ಔಷಧಗಳ ಕೊರತೆಯಿಂದ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುವ ಸ್ಥಿತಿ ಸೃಷ್ಟಿಯಾಗುವುದು ಯಾವುದೇ ಜನಪರ ಸರ್ಕಾರಕ್ಕೆ ಶೋಭೆ ತರುವಂತಹದ್ದಲ್ಲ. ಔಷಧ ಖರೀದಿ ಪ್ರಕ್ರಿಯೆಯನ್ನು ಸರಳಗೊಳಿಸಿ, ಸ್ಥಳೀಯ ಖರೀದಿಗೆ ಹೆಚ್ಚಿನ ಅಧಿಕಾರ ನೀಡುವುದು ಮತ್ತು ಔಷಧಗಳ ಸಂಗ್ರಹದ ವಿವರಗಳನ್ನು ಡಿಜಿಟಲೈಸ್ಗೊಳಿಸುವ ಮೂಲಕ ವೈದ್ಯಕೀಯ ವ್ಯವಸ್ಥೆಯನ್ನು ಸರ್ಕಾರ ಬಲಗೊಳಿಸಬೇಕಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಜನರು ತೊಂದರೆ ಅನುಭವಿಸುವಂತಾಗುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವೀಕಾರಾರ್ಹವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.