ಇಬ್ಬರು ಪತ್ರಕರ್ತರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿರುವ ಅಸ್ಸಾಂ ಪೊಲೀಸರ ಕ್ರಮ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸಿರುವ ದಾಳಿ ಹಾಗೂ ನ್ಯಾಯಾಂಗಕ್ಕೆ ವಿರುದ್ಧವಾದುದು. ‘ದಿ ವೈರ್’ ಪತ್ರಿಕೆಯ ಸಿದ್ಧಾರ್ಥ್ ವರದರಾಜನ್ ಹಾಗೂ ಕರಣ್ ಥಾಪರ್ ಅವರಿಗೆ ಸಮನ್ಸ್ ನೀಡಿರುವ ಪೊಲೀಸರು, ದೇಶದ್ರೋಹಕ್ಕೆ ಸಂಬಂಧಿಸಿದ, ‘ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 152’ರ (ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ) ಅನ್ವಯ ಪ್ರಕರಣ ದಾಖಲಿಸಿದ್ದಾರೆ. ಈ ಇಬ್ಬರು ಪತ್ರಕರ್ತರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಅಸ್ಸಾಂ ಪೊಲೀಸರಿಗೆ ಸುಪ್ರೀಂ ಕೋರ್ಟ್ ಆಗಸ್ಟ್ 12ರಂದು ಆದೇಶ ನೀಡಿತ್ತು. ಅದೇ ದಿನ, ಪತ್ರಕರ್ತರ ವಿರುದ್ಧ ಹೊಸದಾಗಿ ಎಫ್ಐಆರ್ ದಾಖಲಿಸಿರುವ ಪೊಲೀಸರು, ಸಮನ್ಸ್ ಜಾರಿಗೊಳಿಸಿದ್ದಾರೆ. ಎಫ್ಐಆರ್ನ ಪ್ರತಿ ಅಥವಾ ಅಪರಾಧಕ್ಕೆ ಸಂಬಂಧಿಸಿದ ಯಾವುದೇ ವಿವರಗಳನ್ನು ಸಮನ್ಸ್ ಒಳಗೊಂಡಿಲ್ಲ. ಪತ್ರಕರ್ತರಿಗೆ ಸಮನ್ಸ್ ನೀಡುವ ಮೂಲಕ, ಅವರಿಗೆ ತಿಳಿಸದ ಅಪರಾಧಗಳಿಗಾಗಿ ಬಂಧನದ ಬೆದರಿಕೆ ಒಡ್ಡುವ ರೂಪದಲ್ಲಿರುವ ಈ ಪ್ರಕರಣ ಅತಾರ್ಕಿಕವಾದುದು, ಆತಂಕ ಹುಟ್ಟಿಸುವಂತಹದ್ದು ಹಾಗೂ ಕಾನೂನಿನ ಸಿಂಧುತ್ವ ಹೊಂದಿಲ್ಲದೆ ಇರುವುದಾಗಿದೆ.

‘ದಿ ವೈರ್’ನಲ್ಲಿ ಪ್ರಕಟಗೊಂಡ ವರದಿಯೊಂದರಲ್ಲಿ, ‘ಆಪರೇಷನ್ ಸಿಂಧೂರ’ ಕಾರ್ಯಾ ಚರಣೆಯಲ್ಲಿ ಭಾರತೀಯ ವಾಯುಪಡೆ ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂದು ಉಲ್ಲೇಖಿಸಲಾಗಿತ್ತು. ಇಂಡೊನೇಷ್ಯಾದಲ್ಲಿ ನಡೆದ ವಿಚಾರ ಸಂಕಿರಣವೊಂದಕ್ಕೆ ಸಂಬಂಧಿಸಿದ ವರದಿಯಲ್ಲಿನ ಉಲ್ಲೇಖ, ಪತ್ರಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ನೆಪವಾಗಿದೆ. ವರದಿ ಮಾಡುವ ಹಾಗೂ ಸಾರ್ವಜನಿಕ ಹಿತಾಸಕ್ತಿ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವ ಹಕ್ಕು ಪತ್ರಕರ್ತರಿಗಿದ್ದು, ಆ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಸ್ತರಣೆಯಂತಿರುವ ಪತ್ರಕರ್ತರ ಹಕ್ಕುಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವಾಗಿವೆ. ಆದರೆ, ಸರ್ಕಾರದ ನೀತಿಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವಂತೆ ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆಗಳ ಮೇಲೆ ನಿರಂತರವಾಗಿ ಒತ್ತಡ ಹೇರಲಾಗುತ್ತಿದೆ. ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ದಲ್ಲಿ ಭಾರತ 151ನೇ ಸ್ಥಾನದಲ್ಲಿದೆ. ಈ ಸ್ಥಾನ, ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಎದುರಾಗಿರುವ ಅಪಾಯ ನೈಜವಾದುದು ಎನ್ನುವುದನ್ನು ಸಂಕೇತಿಸುವಂತಿದೆ. ‘ದಿ ವೈರ್’ ಪತ್ರಕರ್ತರ ಮೇಲೆ ದಾಖಲಾಗಿರುವ ಪ್ರಕರಣಗಳು ಹಾಗೂ ದೇಶದ ಬೇರೆ ಭಾಗಗಳಲ್ಲಿ ದಾಖಲಾಗಿರುವ ಇಂತಹುದೇ ಪ್ರಕರಣಗಳು ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಸ್ಥಾನ ಉತ್ತಮಗೊಳ್ಳುವ ಯಾವುದೇ ಸಾಧ್ಯತೆ ಇಲ್ಲದಿರುವುದರ ಸೂಚನೆಯಾಗಿದೆ.

ಪತ್ರಕರ್ತರ ಮೇಲೆ ಸೆಕ್ಷನ್ 152 ಅನ್ನು ಬಳಸಿ ಪ್ರಕರಣ ದಾಖಲಿಸಿರುವುದು, ಪೊಲೀಸರು ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿರುವ ಮತ್ತೊಂದು ಉದಾಹರಣೆಯಾಗಿದೆ. ಬಿಎನ್ಎಸ್ ಸೆಕ್ಷನ್ 152, ದೇಶದ್ರೋಹಕ್ಕೆ ಸಂಬಂಧಿಸಿದ ‘ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ’ ನ
ವೇಷಧಾರಿಯಾಗಿದೆ. ಈ ವಿಧಿಯ ಅನ್ವಯ ಯಾವುದೇ ಎಫ್ಐಆರ್ ದಾಖಲಿಸದಂತೆ ಸುಪ್ರೀಂ ಕೋರ್ಟ್ 2022ರಲ್ಲಿ ನಿರ್ದೇಶನ ನೀಡಿದೆ. ಅದಕ್ಕೆ ಪರ್ಯಾಯವಾಗಿ ಮತ್ತಷ್ಟು ಕಠಿಣ ಹಾಗೂ ವ್ಯಾಪಕವಾದ ಸೆಕ್ಷನ್ 152 ಅನ್ನು ಸರ್ಕಾರ ಬಳಸುತ್ತಿದೆ. ಹೊಸ ಕಾನೂನಿನ ಬಳಕೆಗೆ ಸಂಬಂಧಿಸಿದ ಅರ್ಜಿಯೊಂದು ಕೋರ್ಟ್ ಪರಿಶೀಲನೆಯಲ್ಲಿರುವ ಸಂದರ್ಭದಲ್ಲೇ, ಪತ್ರಕರ್ತರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. ‘ದಿ ವೈರ್’ ಪತ್ರಕರ್ತರು ಮಾತ್ರವಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಟೀಕಿಸಿದ ಮತ್ತೊಬ್ಬ ಪತ್ರಕರ್ತನ ಮೇಲೆಯೂ ಸೆಕ್ಷನ್ 152ರ ಅನ್ವಯ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪತ್ರಕರ್ತರ ವಿರುದ್ಧ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಿರುವುದು ಅಧಿಕಾರದ ಸ್ಪಷ್ಟ ದುರುಪಯೋಗ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದಾಗಿ ‘ದಿ ವೈರ್’ ಪತ್ರಕರ್ತರು ಬಂಧನಕ್ಕೆ ಒಳಗಾಗುವುದರಿಂದ ರಕ್ಷಣೆ ಪಡೆದಿದ್ದಾರೆ. ದೇಶದ್ರೋಹ ಪ್ರಕರಣದ ಬಳಕೆಯ ಕುರಿತಾದ ತನ್ನ ನಿರ್ದೇಶನ ಉಲ್ಲಂಘನೆಯಾಗದಂತೆ ಹಾಗೂ ಹಳೆಯ ಕಾನೂನು ಹೊಸ ರೂಪಾಂತರಗಳೊಂದಿಗೆ ನುಸುಳದಂತೆ ಸುಪ್ರೀಂ ಕೋರ್ಟ್ ನೋಡಿಕೊಳ್ಳಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.