ಈ ಬಾರಿಯ ಸ್ವಾತಂತ್ರ್ಯೋತ್ಸವದ ಭಾಷಣ, ರಾಷ್ಟ್ರದ 125 ಕೋಟಿ ಜನರ ದನಿಯನ್ನು ಪ್ರತಿನಿಧಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಹಂಬಲವಾಗಿತ್ತು, ಇದಕ್ಕಾಗಿ ಜನರಿಂದ ಸಲಹೆಗಳನ್ನು ಅವರು ಆಹ್ವಾನಿಸಿದ್ದರು ಎಂಬುದು ವಿಶೇಷ. ಹೀಗಿದ್ದೂ 93 ನಿಮಿಷಗಳ ಸುದೀರ್ಘ ಭಾಷಣದಲ್ಲಿ ತಮ್ಮ ಸರ್ಕಾರದ ಸಾಧನೆಯನ್ನು ಹೇಳಿಕೊಳ್ಳುವುದಕ್ಕೇ ಮೋದಿಯವರು ಬಹಳಷ್ಟು ಸಮಯ ವಿನಿಯೋಗಿಸಿದರು ಎಂಬುದು ವಿಪರ್ಯಾಸ.

ಆಕರ್ಷಕ ನುಡಿಗಟ್ಟುಗಳಲ್ಲಿ ವಿಚಾರಗಳನ್ನು ಮಂಡಿಸುವ ಅವರ ಎಂದಿನ ಶೈಲಿ ಬದಲಾಗಿಲ್ಲ. ಆದರೆ ‘ಸ್ವರಾಜ್ಯವನ್ನು ಸುರಾಜ್ಯವಾಗಿಸುವ ಹೊಣೆಗಾರಿಕೆ’ ಕುರಿತ ಪ್ರಧಾನಿ ಮಾತು ಬರೀ ಶಬ್ದಾಡಂಬರವಾಗಬಾರದು ಎಂಬಂತಹ ಜನರ ಕಾಳಜಿ ನಿರ್ಲಕ್ಷಿಸುವಂತಹದ್ದಲ್ಲ.

ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಬಲೂಚಿಸ್ತಾನ, ಗಿಲ್ಗಿಟ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿರುವುದು ಈವರೆಗೆ ಭಾರತ ಅನುಸರಿಸಿಕೊಂಡು ಬಂದ ವಿಧಾನಕ್ಕೆ ವಿರುದ್ಧವಾದದ್ದು ಎಂಬುದು ಎದ್ದುಕಾಣಿಸುವ ಅಂಶ.

ಕಳೆದ ವಾರ ಕಾಶ್ಮೀರ ಕುರಿತಾದ ಸರ್ವಪಕ್ಷಗಳ ಸಭೆಯಲ್ಲೂ ಭಾರತದ ವಿದೇಶಾಂಗ ನೀತಿ ಬದಲಾವಣೆ ಬಗ್ಗೆ ಇಂಗಿತ ವ್ಯಕ್ತವಾಗಿತ್ತು. ಇದಕ್ಕೆ ಅನುಗುಣವಾಗಿ ಪಾಕಿಸ್ತಾನದ ಜೊತೆಗೆ ಭಾರತ ತೊಡಗಿಕೊಳ್ಳುವ ರೀತಿಯಲ್ಲಿನ ಹೊಸ ರೀತಿ ಈ ಭಾಷಣದಲ್ಲಿ ವ್ಯಕ್ತವಾಗಿದೆ.

ಪಾಕಿಸ್ತಾನದ ಗಲಭೆಪೀಡಿತ ಪ್ರದೇಶಗಳ ಬಗ್ಗೆ ಭಾರತ ಪ್ರಧಾನಿಯ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಉಲ್ಲೇಖವಾಗುತ್ತಿರುವುದು ಇದೇ ಮೊದಲು. ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪ್ರಧಾನಿ ಇತ್ತೀಚೆಗೆ ಪ್ರಚೋದನಕಾರಿಯಾಗಿ ಮಾತನಾಡಿದ್ದುದನ್ನೂ ಈ ಸಂದರ್ಭದಲ್ಲಿ ಸ್ಮರಿಸಬಹುದು.

‘ನಮ್ಮ ಮೇಲೆ ದಾಳಿ ಮಾಡುವ ಭಯೋತ್ಪಾದಕರನ್ನು ಪಾಕಿಸ್ತಾನ ವೈಭವೀಕರಿಸುತ್ತದೆ. ಆದರೆ 2014ರಲ್ಲಿ ಪೆಶಾವರದಲ್ಲಿ ಭಯೋತ್ಪಾದನಾ ದಾಳಿಯಲ್ಲಿ ಮಕ್ಕಳು ಸತ್ತಾಗ ಭಾರತ ಕಣ್ಣೀರು ಸುರಿಸಿದೆ’ ಎಂದು ಪಾಕಿಸ್ತಾನದ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ.

ಭಾರತದಲ್ಲಿನ ಭಯೋತ್ಪಾದಕರನ್ನು ಪಾಕಿಸ್ತಾನ ವೈಭವೀಕರಿಸುತ್ತಿದೆ ಎಂಬಂಥ ಪ್ರಧಾನಿಯವರ ಮಾತು, ಕಾಶ್ಮೀರದಲ್ಲಿನ ಹಿಂಸಾಚಾರಗಳಿಗೆ ಕಾರಣವಾದ ಕಾಶ್ಮೀರಿ ಉಗ್ರ ಬುರ್ಹಾನ್ ವಾನಿ ಹತ್ಯೆಗೆ ಸಂಬಂಧಿಸಿತ್ತು ಎಂಬುದು ಸ್ಪಷ್ಟ. ಹಾಗೆಯೇ ಈ ಮಾತುಗಳಲ್ಲಿ ಭಾರತದ ಮಾನವೀಯತೆಯನ್ನೂ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಭಯೋತ್ಪಾದನೆ ವಿರುದ್ಧ ಭಾರತದ ಕಠಿಣ ಕ್ರಮಗಳು ಹಾಗೂ ಪಾಕಿಸ್ತಾನದಲ್ಲಿರುವ ಜನರಿಂದ ತಮ್ಮ ಮೇಲೆ ನಡೆಯುವ ಆಕ್ರಮಣವನ್ನು ದೊಡ್ಡದಾಗಿ ಬಿಂಬಿಸಿದ್ದುದಕ್ಕಾಗಿ ಸ್ವತಃ ಬಲೋಚ್ ಜನರೂ ತಮಗೆ ಧನ್ಯವಾದ ಹೇಳಿದ್ದಾರೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.

ಇತರ ರಾಷ್ಟ್ರಗಳ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವ ಮೊದಲು ತಮ್ಮದೇ ಹಿತ್ತಲನ್ನು ಮೊದಲು ನೋಡಿಕೊಳ್ಳಬೇಕು ಎಂದು ಹೆಸರು ಹೇಳದೆ ಪಾಕಿಸ್ತಾನಕ್ಕೆ ಪ್ರಧಾನಿ ತಿರುಗೇಟು ನೀಡಿದ್ದಾರೆ. ಭಯೋತ್ಪಾದನೆ ಅಥವಾ ಮಾವೊವಾದವನ್ನು ಭಾರತ ಸಹಿಸುವುದಿಲ್ಲ ಎಂದಿದ್ದಾರೆ.

ಗೋರಕ್ಷಕರ ತಂಡಗಳಿಂದ ರಾಷ್ಟ್ರದ ವಿವಿಧೆಡೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಹಿನ್ನೆಲೆಯಲ್ಲಿ ಸಾಮಾಜಿಕ ಸೌಹಾರ್ದಕ್ಕೆ ಪ್ರಧಾನಿ ಮನವಿ ಮಾಡಿದ್ದಾರೆ. ‘ವೈವಿಧ್ಯದಲ್ಲಿ ಏಕತೆ’ ಬಗೆಗೂ ಅವರು ಮಾತನಾಡಿದ್ದಾರೆ. ಆದರೆ ರಾಷ್ಟ್ರದಾದ್ಯಂತ ವ್ಯಕ್ತವಾಗುತ್ತಿರುವ ಕೋಮುವಾದದ ಕರಾಳ ಎಳೆಗಳನ್ನು ನಿರ್ವಹಿಸಲು ತಾವು ಕೈಗೊಳ್ಳಲು ಉದ್ದೇಶಿಸಿರುವ ದಿಕ್ಕನ್ನು ಸೂಚಿಸಿಲ್ಲ.

ಹಾಗೆಯೇ 2017ರಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿರುವ ಉತ್ತರಪ್ರದೇಶ ಹಾಗೂ ಪಂಜಾಬ್ ಜನರ ಬೆಂಬಲ ಗಳಿಸುವ ಗುರಿ ಇಟ್ಟಕೊಂಡಿರುವಂತೆ ತೋರುವ ವಿಚಾರಗಳನ್ನೂ ಪ್ರಧಾನಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

ದೇಶಭಕ್ತಿ ಉದ್ದೀಪಿಸುವ ಯತ್ನದ ಅಂಗವಾಗಿ ಭಯೋತ್ಪಾದಕರನ್ನು ವೈಭವೀಕರಿಸುವ ಪಾಕಿಸ್ತಾನದ ಮೇಲೆ ತೀವ್ರ ಟೀಕೆಗಳನ್ನು ಮಾಡುತ್ತಲೇ ಸಿಖ್ ಗುರುಗಳ ತ್ಯಾಗವನ್ನೂ ಅವರು ಸ್ಮರಿಸಿದ್ದಾರೆ. ಸಿಖ್ ಗುರು ಗುರುಗೋವಿಂದ್ ಸಿಂಗ್ ಅವರ 350ನೇ ಜನ್ಮ ದಿನಾಚರಣೆಯನ್ನು ರಾಷ್ಟ್ರ ಮರೆಯುವುದಾದರೂ ಹೇಗೆ ಎಂದಿರುವ ಮೋದಿಯವರು ಜನ್ಮದಿನಾಚರಣೆಯನ್ನು ವೈಭವದಿಂದ ಆಚರಿಸುವ ಯೋಜನೆ ಮುಂದಿಟ್ಟಿದ್ದಾರೆ.

ಜೊತೆಗೆ ರಾಷ್ಟ್ರದಾದ್ಯಂತ ಕಬ್ಬು ಬೆಳೆಗಾರರ ಸಮಸ್ಯೆಗಳನ್ನೂ ಪ್ರಧಾನಿ ಪ್ರಸ್ತಾಪಿಸಿದ್ದಾರೆ. ಆದರೆ ವಿಶೇಷವಾಗಿ ಉತ್ತರಪ್ರದೇಶ ಕೃಷಿಕರು ಅನುಭವಿಸುವ ಸಾಲದ ಹೊರೆ ಬಗ್ಗೆ ಗಮನ ಸೆಳೆದಿದ್ದಾರೆ.

ಈ ಹೊರೆ ಇಳಿಸುವುದಕ್ಕಾಗಿ ಶೇ 99.5ರಷ್ಟು ಬಾಕಿ ಹಣವನ್ನು ಈ ಕಬ್ಬು ಬೆಳೆಗಾರರಿಗೆ ಕೇಂದ್ರ ನೀಡಿದೆ ಎಂದು ಪ್ರಧಾನಿ ಪ್ರತಿಪಾದಿಸಿಕೊಂಡಿದ್ದಾರೆ. ಆದರೆ ಇದಕ್ಕೆ ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಅವರು ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವುದನ್ನು ಗಮನಿಸಬೇಕು ‘ಮೊರಾದಾಬಾದ್ನ ಕಬ್ಬು ಬೆಳೆಗಾರರ ಸಂಘದಲ್ಲಿ ವಿಚಾರಿಸಿದೆ.

ಶೇ 50ಕ್ಕೂ ಹೆಚ್ಚು ಹಣಪಾವತಿ ಬಾಕಿ ಇದೆ. ತಾವು ಮಾತನಾಡುತ್ತಿರುವುದು ಏನು ಎಂಬ ಬಗ್ಗೆ ಪ್ರಧಾನಿಗೆ ಅರಿವಿದೆಯೇ?’ ಎಂದು ಅವರು ಕೇಳಿದ್ದಾರೆ. ಹಾಗೆಯೇ ನ್ಯಾಯಮೂರ್ತಿಗಳ ನೇಮಕಾತಿ ವಿಳಂಬದ ಬಿಕ್ಕಟ್ಟನ್ನು ಪ್ರಸ್ತಾಪಿಸದ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೂ ನಿರಾಶೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರದೊಳಗಿನ ಹಲವು ಸಮಸ್ಯೆಗಳ ಬಗ್ಗೆ ಪ್ರಧಾನಿಯವರ ಜಾಣಮೌನಕ್ಕೆ ಇವನ್ನು ಸಂಕೇತವಾಗಿ ಪರಿಭಾವಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.