ರಾಜ್ಯದ ಒಂಬತ್ತು ಡೀಮ್ಡ್ ವೈದ್ಯಕೀಯ ವಿಶ್ವವಿದ್ಯಾಲಯಗಳು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಬೇಕಾದ ಸೀಟುಗಳನ್ನು ಇತರರಿಗೆ ಮಾರಾಟ ಮಾಡಿಕೊಂಡಿರುವುದು ನಾಚಿಕೆಗೇಡಿನ ವಿಷಯ. ಆಡಳಿತ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಜಿ.ಪರಮೇಶ್ವರ್, ಸಚಿವ ಎಂ.ಬಿ.ಪಾಟೀಲ, ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ ಅವರ ನೇತೃತ್ವದ ಕಾಲೇಜುಗಳೂ ಇದರಲ್ಲಿ ಸೇರಿರುವುದು ವಿಷಾದನೀಯ.

ಸೀಟು ಕೊಡದ ಕಾಲೇಜುಗಳಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ನೋಟಿಸ್ ಜಾರಿಗೊಳಿಸಿದ್ದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಉದ್ಧಟತನ ತೋರಿದ ಡೀಮ್ಡ್ ವಿಶ್ವವಿದ್ಯಾಲಯಗಳ ಧೋರಣೆ ಅಕ್ಷಮ್ಯ. ಕೆಲವು ಕಾಲೇಜುಗಳು ಸರ್ಕಾರದ ಭಾಗವೇ ಆಗಿರುವವರಿಗೆ ಸೇರಿದ್ದೂ ಇದಕ್ಕೆ ಕಾರಣ. ಕಾಲೇಜು ಆರಂಭಕ್ಕೆ ನಿರಾಕ್ಷೇಪಣಾ ಪತ್ರ ನೀಡುವಾಗಲೇ ಶೇ 25ರಷ್ಟು ಸೀಟುಗಳನ್ನು ಸರ್ಕಾರಕ್ಕೆ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಷರತ್ತುಗಳಿಗೆ ಎಲ್ಲ ಕಾಲೇಜುಗಳ ಆಡಳಿತ ಮಂಡಳಿಗಳೂ ಒಪ್ಪಿಕೊಂಡಿವೆ.

ಆದರೂ ಸೀಟುಗಳನ್ನು ನೀಡದೆ ಆಡಳಿತ ಮಂಡಳಿ ಕೋಟಾದಡಿ ಮಾರಾಟ ಮಾಡಿರುವುದು ಸರ್ಕಾರಕ್ಕೆ ಮಾಡಿದ ದ್ರೋಹ. ಕೆಲವೇ ಕೆಲವು ಡೀಮ್ಡ್ ವಿಶ್ವವಿದ್ಯಾಲಯಗಳು ಶೇ 3ರಿಂದ ಶೇ 4ರಷ್ಟು ಸೀಟುಗಳನ್ನು ಬಿಟ್ಟುಕೊಟ್ಟಿವೆ. ಆದರೆ ಶುಲ್ಕವನ್ನು ಮಾತ್ರ ಪೂರ್ಣ ಪ್ರಮಾಣದಲ್ಲಿ ಪಡೆದಿವೆ. ಇದು ಕೂಡ ರಾಜ್ಯದ ಜನತೆಗೆ ಮಾಡಿದ ಮೋಸ. ಯಾವ ಕಾರಣಕ್ಕೂ ಇದು ಸಮರ್ಥನೀಯ ಅಲ್ಲ.

ಜನಸಾಮಾನ್ಯರು ಸರ್ಕಾರದ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುವಂತಹ ವಿದ್ಯಮಾನ. ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಸೀಟುಗಳನ್ನು ಮಾರಾಟ ಮಾಡುವ ದಂಧೆ ಮಾಡಿಕೊಂಡಿರುವುದು ಹಾಗೂ ಅದನ್ನು ನಿಯಂತ್ರಿಸಲು ವೈದ್ಯಕೀಯ ಶಿಕ್ಷಣ ಇಲಾಖೆ ಪರದಾಡುತ್ತಿರುವುದಂತೂ ಶೋಚನೀಯ. 2006ರಿಂದಲೂ ಈ ದಂಧೆ ನಡೆಯುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಿರುವುದನ್ನು ನೋಡಿದರೆ ಕಳ್ಳನ ಕೈಯಲ್ಲಿಯೇ ಗಂಟನ್ನು ನೀಡಿದಂತಾಗಿದೆ.

ವೈದ್ಯಕೀಯ, ದಂತವೈದ್ಯಕೀಯ ಸ್ನಾತಕ ಮತ್ತು ಸ್ನಾತಕೋತ್ತರ ಸೀಟುಗಳನ್ನು ಸರ್ಕಾರಕ್ಕೆ ನೀಡಲೇಬೇಕು ಎಂಬ ನಿಯಮ ಉಲ್ಲಂಘನೆ ಮಾಡಿರುವುದು ದೊಡ್ಡ ಲೋಪ. ರಾಜ್ಯದಲ್ಲಿ ವೃತ್ತಿಪರ ಶಿಕ್ಷಣ ಸಂಸ್ಥೆಗಳು ಪ್ರಭಾವಿ ರಾಜಕಾರಣಿಗಳು ಮತ್ತು ಮಠಾಧೀಶರ ಕೈಯಲ್ಲಿಯೇ ಇವೆ. ರಾಜಕಾರಣಿಗಳು ತಾವೇ ನಿಯಮಗಳನ್ನು ರೂಪಿಸಿ ಅದನ್ನು ಮುರಿಯುತ್ತಿದ್ದಾರೆ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ.

ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು. ಒಟ್ಟಾರೆ 1042 ಸೀಟುಗಳನ್ನು ನೀಡದೆ ವಂಚನೆ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಹೇಳಿದೆ. ಇನ್ನು ಮುಂದೆ ಪ್ರವೇಶ ನೀಡುವಾಗ ಆಡಳಿತ ಮಂಡಳಿ ಸೀಟು ಖೋತಾ ಮಾಡಿ ಅದನ್ನು ಸರ್ಕಾರದ ಸೀಟಾಗಿ ಪರಿವರ್ತಿಸಿ ಅರ್ಹರಿಗೆ ನೀಡಬೇಕು. ಇಲ್ಲವಾದರೆ ಕಾಲೇಜುಗಳಿಗೆ ನೀಡಿದ ಮಾನ್ಯತೆಯನ್ನು ರದ್ದು ಮಾಡಬೇಕು. ಹಾಗೆ ಮಾಡಿದರೆ ಮಾತ್ರ ಸರ್ಕಾರ ಜೀವಂತವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.