ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಗುರುವಾರ, 12–3–1970

Last Updated 11 ಮಾರ್ಚ್ 2020, 19:33 IST
ಅಕ್ಷರ ಗಾತ್ರ

ರಾಜ್ಯ ಸಚಿವರ ಔಷಧಿ ವೆಚ್ಚ 3 ವರ್ಷದಲ್ಲಿ 31,000 ರೂ.
ಬೆಂಗಳೂರು, ಮಾರ್ಚ್‌ 11:
ರಾಜ್ಯದ ಮಂತ್ರಿಮಂಡಲದ ಸದಸ್ಯರಿಗೆ 1967ನೇ ಏಪ್ರಿಲ್‌ನಿಂದ ಈವರೆಗೆ ಔಷಧಿಗಳಿಗಾಗಿ ಖರ್ಚು ಮಾಡಿರುವ ಹಣ ಸುಮಾರು 31,000 ರೂ.ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು, ಪ್ರತೀ ಮಂತ್ರಿಗಾಗಿ ಆಗಿರುವ ವೆಚ್ಚವನ್ನು ಇಂದು ವಿಧಾನಸಭೆಯಲ್ಲಿ ಶ್ರೀ ಟಿ.ಪಿ. ಬೋರಯ್ಯ ಅವರಿಗೆ ತಿಳಿಸಿದರು.

ಅವುಗಳಲ್ಲಿ ಅತಿ ಹೆಚ್ಚೆಂದರೆ ಸಾರಿಗೆ ಸಚಿವರ ವೆಚ್ಚ 9,972 ರೂ., ದ್ವಿತೀಯ ಮತ್ತು ತೃತೀಯ ಸ್ಥಾನಗಳಲ್ಲಿ ಸಹಕಾರ ಸಚಿವರು (4,470 ರೂ.) ಮತ್ತು ಮುಖ್ಯಮಂತ್ರಿಗಳಿದ್ದಾರೆ (2,658 ರೂ.).

ಕಂದಾಯ ಮಂತ್ರಿಗಳದ್ದು ಕಡಿಮೆ ವೆಚ್ಚ 25 ರೂ. ಮೂವರು ಸಚಿವರು– ಕೈಗಾರಿಕಾ ಸಚಿವ, ಸಮಾಜಕಲ್ಯಾಣ ಮಂತ್ರಿ ಮತ್ತು ಪೌರಾಡಳಿತ ರಾಜ್ಯ ಸಚಿವರು ಮಾಡಿದ ವೆಚ್ಚ ‘ಏನೂ ಇಲ್ಲ’.

ಅನುದಾನ ಪಡೆಯದ ಖಾಸಗಿ ಶಾಲೆಗಳ ಶಿಕ್ಷಣ ಶುಲ್ಕದ ಮೇಲೂ ಮಿತಿ
ಬೆಂಗಳೂರು, ಮಾರ್ಚ್‌ 11:
ಸರ್ಕಾರದಿಂದ ಅನುದಾನ ಪಡೆಯದಿರುವ ಶಾಲೆಗಳು ವಸೂಲು ಮಾಡುತ್ತಿರುವ ಶಿಕ್ಷಣ ಶುಲ್ಕದ ಪ್ರಮಾಣದ ಮೇಲೂ ಒಂದು ನಿರ್ದಿಷ್ಟ ಮಿತಿ ವಿಧಿಸಲು ಸರ್ಕಾರ ನಿರ್ಧರಿಸಿದೆ.

‘ಕೆಲವು ಖಾಸಗಿ ಶಾಲೆಗಳು ವ್ಯಾಪಾರಿ ಸಂಸ್ಥೆಗಳಾಗಿವೆ. ಅಂಥ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT