ಮಂಗಳವಾರ, ಏಪ್ರಿಲ್ 7, 2020
19 °C

50 ವರ್ಷಗಳ ಹಿಂದೆ | ಶುಕ್ರವಾರ 6–3–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾವೇರಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ: ವಿಧಾನಸಭೆಗೆ ವೀರೇಂದ್ರ ಪಾಟೀಲ್‌ ಭರವಸೆ
ಬೆಂಗಳೂರು, ಮಾರ್ಚ್‌ 5–
ಕಾವೇರಿ ಬಯಲಿನಲ್ಲಿ ಕೆಲಸ ಮುಂದುವರಿಯುತ್ತಿರುವ ನೀರಾವರಿ ಯೋಜನೆಗಳನ್ನು ಸರ್ಕಾರ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಕಾತರಗೊಂಡಿದ್ದ ವಿಧಾನಸಭೆಗೆ ಇಂದು ಭರವಸೆ ನೀಡಿದರು. 

ಯೋಜನಾ ಆಯೋಗದ ಮಂಜೂರಾತಿಯಿಲ್ಲದ ಯೋಜನೆಗಳ ಕಾರ್ಯವನ್ನು ನಿಲ್ಲಿಸುವ ಭರವಸೆ ಕೇಳಿ ಕೇಂದ್ರ ಕಳುಹಿಸಿದ ಸೂಚನೆಯ ಸಂಬಂಧ ಈ ಹೇಳಿಕೆ ನೀಡಿದ್ದಾರೆ.

ಆಸ್ತಿ ತೆರಿಗೆ, ಮಾರಾಟ ತೆರಿಗೆ ಸ್ವರೂಪದಲ್ಲಿ ಸ್ವಲ್ಪ ಮಾರ್ಪಾಡು: ಅರ್ಥ ಸಚಿವ ಹೆಗಡೆ ಭರವಸೆ
ಬೆಂಗಳೂರು, ಮಾರ್ಚ್‌ 5–
ನಗರ ಪ್ರದೇಶಗಳ ಆಸ್ತಿಯ ಮೇಲೆ ಬಜೆಟ್‌ನಲ್ಲಿ ತಾವು ವಿಧಿಸಲು ಉದ್ದೇಶಿಸಿರುವ ತೆರಿಗೆಯ ಸ್ವರೂಪದಲ್ಲಿ ಕೆಲವೊಂದು ಬದಲಾವಣೆ ಮಾಡಲು ತಾವು ಉದ್ದೇಶಿಸಿರುವುದಾಗಿ ಅರ್ಥ ಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು ವಿಧಾನಸಭೆಯಲ್ಲಿ ಪ್ರಕಟಿಸಿದರು.

‘ಕೇಂದ್ರ ಬಜೆಟ್‌ನಿಂದ ಆಗಿರುವ ಪರಿಣಾಮ ಹಾಗೂ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಬೆಳಕಿನಲ್ಲಿ ಆಸ್ತಿ ತೆರಿಗೆಯಲ್ಲಿ ಸ್ವಲ್ಪಮಟ್ಟಿಗೆ ಮಾರ್ಪಾಟು ಮಾಡಲು ನಾನು ಸಿದ್ಧನಿದ್ದೇನೆ’ ಎಂದು ಸಚಿವರು ತಿಳಿಸಿದರು. 

ನೀರಾವರಿ ಯೋಜನೆ ಜತೆ ಪ್ರವಾಹ ಹತೋಟಿಗೂ ರಾಜ್ಯ ಸರ್ಕಾರದ ಸಲಹೆ
ಬೆಂಗಳೂರು, ಮಾರ್ಚ್‌ 5–
ದೊಡ್ಡ ಮತ್ತು ಮಧ್ಯಮ ಪ್ರಮಾಣದ ನೀರಾವರಿ ಯೋಜನೆಗಳೊಡನೆ ಪ್ರವಾಹ ಹತೋಟಿ ಯೋಜನೆಗಳನ್ನು 4ನೇ ಯೋಜನೆಯಲ್ಲಿ ಸೇರಿಸಿಕೊಳ್ಳಬೇಕೆಂದು ಸರ್ಕಾರ ಸಲಹೆ ಮಾಡಿದೆ ಎಂದು ನೀರಾವರಿ ಶಾಖೆಯ ಉಪ ಸಚಿವ ಶ್ರೀ ಡಿ. ಪರಮೇಶ್ವರಪ್ಪ ಅವರು ವಿಧಾನಪರಿಷತ್ತಿನಲ್ಲಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)