ಬುಧವಾರ, ಜುಲೈ 28, 2021
20 °C
ಬುಧವಾರ, 15–7–1970

50 ವರ್ಷಗಳ ಹಿಂದೆ | ಪ್ರಧಾನಿಗೆ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಿಗೆ ಮುಖ್ಯಮಂತ್ರಿ ಪತ್ರ
ಬೆಂಗಳೂರು, ಜುಲೈ 14–
ರಾಜ್ಯದಲ್ಲಿ ಪ್ರಧಾನಿ ಪ್ರವಾಸ ಮಾಡುವ ಮುನ್ನ ರಾಜ್ಯದ ಮುಖ್ಯಮಂತ್ರಿಯೊಡನೆ ಸಮಾಲೋಚನೆ ನಡೆಸುವ ಸಂಪ್ರದಾಯವನ್ನು ಅನುಸರಿಸದಿರುವ ಬಗ್ಗೆ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್‌ ಅವರು ತಮಗೆ ಉಂಟಾಗಿರುವ ‘ನಿಜವಾದ ನಿರಾಶೆ ಹಾಗೂ ಅಸಂತೋಷವನ್ನು’ ಪ್ರಧಾನಿ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಮುರ್ನಾಳ್‌ ಆಡಳಿತ ಕಾಂಗ್ರೆಸ್ಸಿಗೆ
ಬೆಂಗಳೂರು, ಜುಲೈ 14–
ಬಾಗಲಕೋಟೆಯಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಸಂಸ್ಥಾ ಕಾಂಗ್ರೆಸ್‌ ಸದಸ್ಯ ಶ್ರೀ ಬಿ.ಟಿ.ಮುರ್ನಾಳ್‌ ಅವರು ಆಡಳಿತ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದಾರೆ.

ಕಾಂಗ್ರೆಸ್‌ ಎರಡು ಪಕ್ಷಗಳಾಗಿ ಒಡೆದ ನಂತರ ರಾಜ್ಯದಲ್ಲಿ ಆಡಳಿತ ಕಾಂಗ್ರೆಸ್ಸಿಗೆ ಸೇರುತ್ತಿರುವ ಪ್ರಥಮ ಸಂಸ್ಥಾ ಕಾಂಗ್ರೆಸ್‌ ಶಾಸಕರಿವರು.

ಶ್ರೀ ಮುರ್ನಾಳ್‌ ಅವರು ಸಂಸ್ಥಾ ಕಾಂಗ್ರೆಸ್‌ ಅಧ್ಯಕ್ಷ ಶ್ರೀ ನಿಜಲಿಂಗಪ್ಪ ಅವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದರು. ಬಾಗಲಕೋಟೆಯಿಂದ ಗೆದ್ದಿದ್ದ ಶ್ರೀ ಮುರ್ನಾಳ್‌ ಅವರು ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಶ್ರೀ ನಿಜಲಿಂಗಪ್ಪ ಅವರು ಆರಿಸಿ ಬರಲು ಅವಕಾಶ ಮಾಡಿಕೊಟ್ಟಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು