ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ 10–3–1970

Last Updated 9 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಖಾಸಗಿಯವರಿಗೆ ಮಂಡ್ಯ ಕಾಗದ ಕಾರ್ಖಾನೆ: ಪರಿಶೀಲನೆಯಲ್ಲಿ
ಬೆಂಗಳೂರು, ಮಾರ್ಚ್‌ 9:
ಆರಂಭವಾದ ಅಂದಿನಿಂದ ನಷ್ಟದಲ್ಲಿ ನಡೆಯುತ್ತಿರುವ ಮಂಡ್ಯ ನ್ಯಾಷನಲ್ ಕಾಗದ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಿಕೊಡುವ ವಿಚಾರವನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಕೈಗಾರಿಕಾ ಸಚಿವ ಎಂ. ರಾಜಶೇಖರ ಮೂರ್ತಿ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

‌ಗಡಿ ವಿವಾದ: ಪಾಟೀಲ್‌ಗೆ ಪ್ರಧಾನಿ ಪತ್ರ
ಬೆಂಗಳೂರು, ಮಾರ್ಚ್‌ 9
: ಮೈಸೂರು–ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಈಚೆಗೆ ದೆಹಲಿಯಿಂದ ಅಧಿಕಾರಿಗಳು ತಂದ ಸೂಚನೆಗಳು ‘ಬರೇ ತಾತ್ಕಾಲಿಕವಾದವು’ ಎಂದು ಪ್ರಧಾನಿಯವರು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಈ ಪ್ರಶ್ನೆಯ ಬಗ್ಗೆ ಚರ್ಚಿಸಲು ದೆಹಲಿಗೆ ಬರುವಂತೆ ಶ್ರೀಮತಿ ಇಂದಿರಾ ಗಾಂಧಿಯವರು ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ್ದಾರೆ. ನಿನ್ನೆ ಬೆಂಗಳೂರಿಗೆ ತಲುಪಿದ ಈ ಪತ್ರಕ್ಕೆ ಒಂದೆರಡು ದಿನಗಳಲ್ಲಿ ಶ್ರೀ ಪಾಟೀಲರು ಉತ್ತರ ಬರೆಯಲಿದ್ದಾರೆ.

ಮಹಾಜನ್ ಶಿಫಾರಸು ಶೀಘ್ರ ಜಾರಿಗೆ ಚವಾಣರಿಗೆ ರಾಜ್ಯ ಶಾಸಕರ ಪ್ರಬಲ ಒತ್ತಾಯ

ನವದೆಹಲಿ, ಮಾರ್ಚ್‌ 9: ಮೈಸೂರು– ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಮಹಾಜನ್ ಆಯೋಗದ ಶಿಫಾರಸುಗಳನ್ನು ಶೀಘ್ರವೇ ಜಾರಿಗೆ ತರಬೇಕೆಂದು ಮೈಸೂರು ರಾಜ್ಯದ 16 ಮಂದಿ ಶಾಸಕರ ನಿಯೋಗವು ಇಂದು ಮಧ್ಯಾಹ್ನ ಪ್ರಬಲವಾಗಿ ವಾದಿಸಿದ್ದನ್ನು ಕೇಂದ್ರ ಗೃಹಮಂತ್ರಿ ಶ್ರೀ ವೈ.ಬಿ. ಚವಾಣ್ ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT