ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಸೋಮವಾರ 13–4–1970

Last Updated 12 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಜಾತೀಯತೆ, ಹಣದ ಆಮಿಷದ ವಿರುದ್ಧ ವ್ಯಾಪಕ ಹೋರಾಟ ಅತ್ಯವಶ್ಯ: ಚುನಾವಣಾ ಆಯೋಗದ ಎಚ್ಚರಿಕೆ

ನವದೆಹಲಿ, ಏ. 12– ಕೆಲವರು ನಿರ್ದಿಷ್ಟ ಉಮೇದುವಾರರಿಗೆ ಬೆಂಬಲ ಕೊಡುವಂತೆ ದೀನದಲಿತರು ಮತ್ತು ಕೆಳ ಜಾತಿಗಳ ಮತದಾರರನ್ನು ಪ್ರಬಲರಾದ ಮೇಲು ಜಾತಿಯವರು ಬೆದರಿಸುವುದರಿಂದ ಚುನಾವಣೆಗಳಲ್ಲಿ ಜಾತೀಯತೆಯ ದುಷ್ಪರಿಣಾಮಗಳ ಪಾತ್ರ ಕರಾಳವಾಗಿರುತ್ತದೆ.

1968– 69ರ ಮಧ್ಯಂತರ ಚುನಾವಣೆಗಳ ಬಗೆಗೆ ಚುನಾವಣಾ ಆಯೋಗವು ಸಮೀಕ್ಷೆ ನಡೆಸಿ ವರದಿ ನೀಡಿದೆ. ಮತದಾರರಿಗೆ ಲಂಚ ಕೊಡುವುದೂ ಸೇರಿ ಭ್ರಷ್ಟಾಚಾರಗಳಲ್ಲಿ ತೊಡಗಲು ಕೆಲವರು ಅಭ್ಯರ್ಥಿಗಳು ‘ದೊಡ್ಡ ಹಣವಂತರನ್ನು’ ಬಳಸಿಕೊಳ್ಳುವುದು ಎದುರಿಸಬೇಕಾಗಿರುವ ಇನ್ನೊಂದು ಪಿಡುಗು ಎಂದು ಹೇಳಿದೆ.

ಚಂದ್ರನಿಂದ ಅರ್ಧದಷ್ಟು ದೂರದಲ್ಲಿ ಅಪೊಲೊ– 13 ಯಾತ್ರಿಗಳಿಗೆ ವಿರಾಮ

ಹ್ಯೂಸ್ಟನ್‌, ಏ. 12– ಶನಿವಾರ ರಾತ್ರಿ ಹಾರಿಸಲಾದ ಅಪೊಲೊ– 13 ಬಾಹ್ಯಾಂತರಿಕ್ಷ ನೌಕೆ ಈಗ ಭೂಮಿಯಿಂದ ಅರವತ್ತೆರಡು ಸಾವಿರ ಮೈಲಿ ದೂರದಲ್ಲಿದ್ದು ಸೆಕೆಂಡಿಗೆ 2,100 ಮೀಟರ್‌ ವೇಗದಲ್ಲಿ ಚಂದ್ರಗ್ರಹದತ್ತ ಯಾನ ಮಾಡುತ್ತಿದೆ.

ಮೂವರು ಗಗನಯಾತ್ರಿಗಳು ಇಂದು ಹತ್ತು ಗಂಟೆ ಕಾಲ ವಿಶ್ರಾಂತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT