ಸೋಮವಾರ, ಮಾರ್ಚ್ 8, 2021
26 °C

ಭಾನುವಾರ, 9–2–1969

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿರ್ದಿಷ್ಟ ಅವಧಿಯೊಳಗೆ ಗಡಿ ವಿವಾದ ಇತ್ಯರ್ಥಕ್ಕೆ ಬಾಲ್ ಠಕ್ರೆ ಮನವಿ

ಮುಂಬೈ, ಫೆ. 8– ಮಹಾರಾಷ್ಟ್ರ ಮತ್ತು ಮೈಸೂರು ನಡುವಣ ಗಡಿ ವಿವಾದವನ್ನು ‘ನಿರ್ದಿಷ್ಟ ಅವಧಿ’ ಒಳಗೆ ಇತ್ಯರ್ಥಗೊಳಿಸಬೇಕೆಂದು ಶಿವಸೇನ ಮುಖ್ಯಸ್ಥರಾದ ಶ್ರೀ ಬಾಲ್ ಠಕ್ರೆ ಅವರು ಉಪ ಪ್ರಧಾನಮಂತ್ರಿ ಶ್ರೀ ಮುರಾರಜಿ ದೇಸಾಯ್ ಅವರಿಗೆ ಬರೆದಿರುವ ಪತ್ರವೊಂದರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವಿದ್ಯಾರ್ಥಿಗಳಲ್ಲಿ ಸರಿಯಾದ ಮೌಲ್ಯಗಳ ನಿರೂಪಣೆಗೆ ಕರೆ

ಬೆಳಗಾವಿ, ಫೆ. 8– ವಿದ್ಯಾರ್ಥಿಗಳು ಶಿಸ್ತಿನಿಂದ ಕೂಡಿ, ಸತ್ಯದಲ್ಲಿ ನಿಷ್ಠೆಯುಳ್ಳವರಾಗಿ ಬಾಳುವಂತೆ ಮಾಡಲು ಅವರಲ್ಲಿ ಸರಿಯಾದ ಮೌಲ್ಯಗಳನ್ನು ರೂಪಿಸುವುದು ಅಗತ್ಯವೆಂದು ಕೇಂದ್ರದ ಉಪಪ್ರಧಾನಿ ಶ್ರೀ ಮುರಾರ್ಜಿ ದೇಸಾಯಿ ಅವರು ಇಂದು ಇಲ್ಲಿ ಒತ್ತಿ ಹೇಳಿದರು.

ಉಪಪ್ರಧಾನಿಗಳು ಕರ್ನಾಟಕ ಲಿಬರಲ್ ಎಜುಕೇಷನ್ ಸೊಸೈಟಿಯ ಸುವರ್ಣ ಮಹೋತ್ಸವವನ್ನು ಉದ್ಘಾಟಿಸುತ್ತಾ, ನಮ್ಮ ತರುಣ ತರುಣಿಯರು ಸರಿ ತಪ್ಪುಗಳ ತಾರತಮ್ಯವನ್ನು ಅರಿಯುವಂತೆ ಮಾಡುವುದೇ ಶಿಕ್ಷಣದ ಉದ್ದೇಶ ಎಂದರು.

‘ವಿವೇಕ’ ಎಂದರೇನೆಂಬುದನ್ನು ಅವರು ಅರ್ಥಮಾಡಿಕೊಳ್ಳುವಂತೆ ಮಾಡಬೇಕೆಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು