ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ| ಕೇಂದ್ರಕ್ಕೆ ಕೆಂಗಲ್, ಕೃಷ್ಣಪ್ಪ?

Last Updated 16 ಜೂನ್ 2020, 1:35 IST
ಅಕ್ಷರ ಗಾತ್ರ

ಕೇಂದ್ರಕ್ಕೆ ಕೆಂಗಲ್, ಕೃಷ್ಣಪ್ಪ? ಮಂಗಳವಾರ 16-6-1970

ನವದೆಹಲಿ, ಜೂನ್‌ 15– ಕೇಂದ್ರ ಸಂಪುಟದ ಪುನರ್‌ರಚನೆ ಬಗೆಗೆ ಪ್ರಧಾನಿ ಇಂದಿರಾ ಗಾಂಧಿಯವರು ಇನ್ನು
ನಾಲ್ಕೈದು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆಂದು ತಿಳಿದುಬಂದಿದೆ.

ಈ ಬಾರಿಯ ಪುನರ್‌ರಚನೆಯಲ್ಲಿ ದಕ್ಷಿಣ ಭಾರತಕ್ಕೆ, ಅದರಲ್ಲೂ ಮೈಸೂರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಅಪೇಕ್ಷೆ
ಪ್ರಧಾನಿಗಿದೆಯೆಂದು ತಿಳಿದುಬಂದಿದೆ.

ಮೈಸೂರಿನ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಜೊತೆಗೆ ಲೋಕಸಭೆ ಸದಸ್ಯ ಶ್ರೀ ಎಂ.ವಿ. ಕೃಷ್ಣಪ್ಪನವರನ್ನೂ ಸ್ಟೇಟ್ ಸಚಿವರಾಗಿ ನೇಮಕ ಮಾಡುವ ಸೂಚನೆಗಳಿವೆ.

ನೇಮಕವಾಗಲಿದ್ದಾರೆಂದು ಕೇಳಿ ಬರುತ್ತಿರುವ ಅನೇಕ ಉಪಸಚಿವರುಗಳ ಹೆಸರಿನಲ್ಲಿ ‘ಯಂಗ್ ಟರ್ಕ್’ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಚಂದ್ರಜಿತ್ ಯಾದವ್‌ರವರ ಹೆಸರೂ ಸೇರಿದೆ.

ಚೀನಾದೊಡನೆ ಸದ್ಯಕ್ಕೆ ಬಾಂಧವ್ಯ ಸುಧಾರಣೆ ಲಕ್ಷಣಗಳಿಲ್ಲ: ಸ್ವರಣ್

ನವದೆಹಲಿ, ಜೂನ್ 15– ರಾಷ್ಟ್ರದ ಪರಮಾಧಿಕಾರ ಮತ್ತು ಸಮಗ್ರತೆಯನ್ನು ಕಾಪಾಡುವ ಮೂಲಭೂತ ತತ್ವಗಳ ಚೌಕಟ್ಟಿನಲ್ಲಿ ಚೀನಾದೊಡನೆ ಶಾಂತಿ ಸಂಬಂಧ ಸಾಧ್ಯವಿದ್ದರೆ ಭಾರತ ಅದಕ್ಕೆ ಪ್ರಯತ್ನಿಸದಿರದೆಂದು ರಕ್ಷಣಾ ಸಚಿವ ಶ್ರೀ ಸ್ವರಣ್ ಸಿಂಗ್ ಇಂದು ಘೋಷಿಸಿದರು.

ಎಐಸಿಸಿ (ಆಡಳಿತ) ಅಧಿವೇಶನದಲ್ಲಿ ವಿದೇಶಾಂಗ ನೀತಿ ನಿರ್ಣಯ ಮಂಡಿಸಿ ಮಾತನಾಡಿದ ಶ್ರೀ ಸ್ವರಣ್ ಸಿಂಗ್ ಅವರು, ಆದರೆ ಉಭಯ ದೇಶಗಳ ನಡುವಣ ಬಾಂಧವ್ಯ ಸುಧಾರಿಸತೊಡಗುವ ಲಕ್ಷಣಗಳಿನ್ನೂ ಕಂಡುಬಂದಿಲ್ಲವೆಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT