ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಶನಿವಾರ, 12-9-1970

Last Updated 11 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ರಾಷ್ಟ್ರಪತಿ ಆಜ್ಞೆ ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಮಾಜಿ ರಾಜರ ಅರ್ಜಿ

ನವದೆಹಲಿ, ಸೆ. 11 – ತಮ್ಮ ಮಾನ್ಯತೆ ರದ್ದುಪಡಿಸಿದ ರಾಷ್ಟ್ರಪತಿ ಆಜ್ಞೆ ‘ಏಕಪಕ್ಷೀಯ, ಸ್ವೇಚ್ಛಾ ವರ್ತನೆಯ ಹಾಗೂ ದುರುದ್ದೇಶಪೂರಿತ’ ಎಂದು ಆರೋಪಿಸಿ, ಐವರು ಮಾಜಿ ರಾಜರು ರಾಷ್ಟ್ರಪತಿ ಆಜ್ಞೆಯನ್ನು ಪ್ರಶ್ನಿಸಿ ಇಂದು ಸುಪ್ರೀಂ ಕೋರ್ಟಿಗೆ ರಿಟ್‌ ಅರ್ಜಿಗಳನ್ನು ಸಲ್ಲಿಸಿದರು.

ಅರ್ಜಿದಾರರಾದ ಗ್ವಾಲಿಯರ್‌, ಉದಯಪುರ, ನಭಾ, ನಾಲಘರ್‌ ಮತ್ತು ಕಛ್‌ನ ಮಾಜಿ ದೊರೆಗಳು, ರಾಷ್ಟ್ರಪತಿ ಆಜ್ಞೆ ಜಾರಿಗೆ ಬರದಂತೆ ತಡೆಯಲು ಕೇಳಿದ್ದಾರೆ ಮತ್ತು ಸಂಸ್ಥಾನಗಳ ವಿಲೀನ ಒಪ್ಪಂದದ ಷರತ್ತುಗಳ ಅನುಸಾರ ತಾವು ರಾಜಧನ ಮತ್ತು ವಿಶೇಷ ಸವಲತ್ತು ಪಡೆಯಲು ಅರ್ಹರೆಂದು ಘೋಷಿಸಬೇಕೆಂದು ತಮ್ಮ ಅರ್ಜಿಗಳಲ್ಲಿ ನ್ಯಾಯಾಲಯವನ್ನು ಪ್ರಾರ್ಥಿಸಿದ್ದಾರೆ.

ನಾಯಕ್‌– ಪಾಟೀಲ್‌ ಭೇಟಿಗೆ ಗಿರಿ ಸಲಹೆ

ಪುಣೆ, ಸೆ. 11– ಮಹಾರಾಷ್ಟ್ರ– ಮೈಸೂರು ಗಡಿ ವಿವಾದ ಪರಿಹಾರಕ್ಕೆ ರಾಷ್ಟ್ರಪತಿ ವಿ.ವಿ.ಗಿರಿ ಅವರು ಬಹು ಸುಲಭವಾದ ಪರಿಹಾರ ಸೂತ್ರ ಒಂದನ್ನು ಇಂದು ಪ್ರಕಟಿಸಿದರು.

ಅದೇನೆಂದರೆ: ಪರಸ್ಪರ ಒಮ್ಮತದ ತೀರ್ಮಾನಕ್ಕೆ ಬರಲು ಅನುಕೂಲವಾಗುವಂತೆ ಎರಡೂ ರಾಜ್ಯಗಳ ಮುಖ್ಯಮಂತ್ರಿ
ಗಳನ್ನು ಕೊಠಡಿಯೊಂದರಲ್ಲಿ ಒಟ್ಟಿಗೆ ಕೂಡಿ ಹಾಕುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT