ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ ಆಗಸ್ಟ್‌ 25 1970

Last Updated 24 ಆಗಸ್ಟ್ 2020, 15:29 IST
ಅಕ್ಷರ ಗಾತ್ರ

ಯುರೋಪ್‌ ಕಾನ್ವೆಂಟ್‌ಗಳಲ್ಲಿ ಭಾರತದ ಹುಡುಗಿಯರ ನೇಮಕಕ್ಕೆ ತಾತ್ಕಾಲಿಕ ತಡೆ

ವ್ಯಾಟಿಕನ್‌ ಸಿಟಿ, ಆ. 24– ಯುರೋಪಿನ ಕಾನ್ವೆಂಟುಗಳಲ್ಲಿ ಸನ್ಯಾಸಿನಿಯರನ್ನಾಗಿ ನೇಮಿಸಲು ಭಾರತದಿಂದ ಬಡಹುಡುಗಿಯರನ್ನು ಕರೆಸಿಕೊಳ್ಳುವ ಪದ್ಧತಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆಯೆಂದು ವ್ಯಾಟಿಕನ್‌ ಭಾನುವಾರ ರಾತ್ರಿ ಪ್ರಕಟಿಸಿತು.

ಯುರೋಪಿನ ಕಾನ್ವೆಂಟ್‌ಗಳಲ್ಲಿ ಸನ್ಯಾಸಿನಿಯರನ್ನಾಗಿ ನೇಮಕ ಮಾಡಿಕೊಳ್ಳಲು ಭಾರತದಿಂದ ಕನ್ಯೆಯರನ್ನು ಹಣಕೊಟ್ಟು ಆಮದು ಮಾಡಿಕೊಳ್ಳಲಾಗುತ್ತಿದೆಯೆಂಬ ವರದಿಯನ್ನು ವ್ಯಾಟಿಕನ್‌ ಸ್ಪಷ್ಟವಾಗಿ ನಿರಾಕರಿಸಿದೆ. ಕೇರಳದಿಂದ 1,200 ಹುಡುಗಿಯರನ್ನು ಕೊಂಡುಕೊಳ್ಳಲಾಗಿದೆಯೆಂಬ ‘ಸಂಡೇ ಟೈಮ್ಸ್‌’ ವರದಿಯಿಂದ ಭಾನುವಾರ ವ್ಯಾಟಿಕನ್‌ನಲ್ಲಿ ತೀವ್ರ ಚರ್ಚೆಗಳು ನಡೆದವು. ಈ ಪತ್ರಿಕೆಯ ವರದಿ ಸತ್ಯಕ್ಕೆ ವಿರುದ್ಧವಾಗಿದೆ ಅಥವಾ ಉತ್ಪ್ರೇಕ್ಷೆಯಿಂದ ಕೂಡಿದೆಯೆಂದು ಪ್ರಕಟಣೆ ತಿಳಿಸಿದೆ.

ಎಂ.ಎಸ್‌. ಸುಬ್ಬುಲಕ್ಷ್ಮಿ ಅನಧಿಕೃತ ಸಾಂಸ್ಕೃತಿಕ ರಾಯಭಾರಿ: ಗಿರಿ

ಹೈದರಾಬಾದ್‌, ಆ. 24– ವಿಶ್ವವಿಖ್ಯಾತ ಸಂಗೀತ ವಿದುಷಿ ಶ್ರೀಮತಿ ಎಂ.ಎಸ್‌.ಸುಬ್ಬುಲಕ್ಷ್ಮಿ ಅವರು ‘ವಿಶ್ವದ ಅನೇಕ ದೇಶಗಳಿಗೆ ನಮ್ಮ ಅನಧಿಕೃತ ಸಾಂಸ್ಕೃತಿಕ ರಾಯಭಾರಿ’ ಎಂದು ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರು ಇಂದು ಇಲ್ಲಿ ಹೇಳಿದರು.

ಶ್ರೀಮತಿ ಸುಬ್ಬುಲಕ್ಷ್ಮಿ ಅವರ ‘ಶ್ರೀ ವಿಷ್ಣು ಸಹಸ್ರನಾಮ’ ಮತ್ತು ‘ಭಜಗೋವಿಂದಂ’ ಗ್ರಾಮಾಫೋನ್‌ ರೆಕಾರ್ಡುಗಳನ್ನು ರಾಷ್ಟ್ರಪತಿ ಇಲ್ಲಿನ ಸಮಾರಂಭವೊಂದರಲ್ಲಿ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT