ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಮಾಧ್ಯಮ: ಸದ್ಯವೇ ತೀರ್ಮಾನ

ಫಟಾಫಟ್‌
Last Updated 14 ಸೆಪ್ಟೆಂಬರ್ 2019, 3:12 IST
ಅಕ್ಷರ ಗಾತ್ರ

ಭಾಷಾ ಕಲಿಕೆಯೂ ಸೇರಿ ಶಿಕ್ಷಣದ ಗುಣಮಟ್ಟ ಹಾಗೂ ಸರ್ಕಾರಿ ಶಾಲೆ, ಇಂಗ್ಲಿಷ್‌ ಮಾಧ್ಯಮ ಕುರಿತುಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವಎಸ್‌.ಸುರೇಶ್‌ ಕುಮಾರ್ ಅವರ ಫಟಾಫಟ್‌ ಸಂದರ್ಶನ ಇಲ್ಲಿದೆ.

* ಸರ್ಕಾರಿ ಶಾಲೆಗಳಲ್ಲಿ ನಡೆಸುತ್ತಿರುವ ಇಂಗ್ಲಿಷ್‌ ಮಾಧ್ಯಮ ತರಗತಿಗಳನ್ನು ನಿಲ್ಲಿಸಬೇಕು ಎಂದು ಸಾಹಿತಿಗಳು ಒತ್ತಾಯಿಸುತ್ತಿದ್ದಾರೆ. ಸರ್ಕಾರದ ನಿಲುವೇನು?

ಹಿರಿಯ ಸಾಹಿತಿಗಳು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸಿದ್ದಾರೆ. ಇದಕ್ಕೆ ಬರುತ್ತಿರುವ ಪ್ರತಿಕ್ರಿಯೆಯೂ ಜೋರಾಗಿದೆ. ನಮ್ಮ ಮಕ್ಕಳೂ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಕಲಿಯಬೇಕು ಎಂದು ಪೋಷಕರು ಒತ್ತಾಯಿಸುತ್ತಿದ್ದಾರೆ. ಹಿರಿಯರ ಭಾವನೆ ನನಗೆ ಅರ್ಥವಾಗಿದೆ.ಈ ಸಂಬಂಧ ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಆದಷ್ಟು ಬೇಗ ಒಂದು ನಿರ್ಧಾರ ತೆಗೆದುಕೊಳ್ಳುತ್ತೇವೆ.

*ಶಿಕ್ಷಣ ಸಚಿವರಾಗಿ ಈ ಕುರಿತು ನಿಮ್ಮ ನಿಲುವೇನು? ಇಂಗ್ಲಿಷ್‌ ಮಾಧ್ಯಮ ಬೇಕು ಅನ್ನುತ್ತೀರೊ ಬೇಡ ಅನ್ನುತ್ತೀರೊ?

ಒಂದು ಕಡೆ ಇಂಗ್ಲಿಷ್‌ ಮಾಧ್ಯಮದ ತರಗತಿಗಳು ಬೇಡ, ಇದರಿಂದ ಕನ್ನಡ ಭಾಷೆಗೆ ಹಿನ್ನಡೆ ಆಗುತ್ತದೆ ಎಂದು ಕೆಲವರು ದೂರುತ್ತಾರೆ. ಮತ್ತೊಂದು ಕಡೆ, ಇಂಗ್ಲಿಷ್‌ ಮಾಧ್ಯಮ ಬೇಡ ಎಂದು ಪ್ರತಿಪಾದಿಸುವವರು ತಮ್ಮ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿಸಿ, ನಮ್ಮ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮದಿಂದ ವಂಚಿಸುತ್ತಿದ್ದಾರೆ ಎಂದು ಪೋಷಕರು ವಾದಿಸುತ್ತಿದ್ದಾರೆ. ಮಾತೃಭಾಷೆಯಲ್ಲಿ ಕಲಿತರೆ ವಿಷಯಗಳ ಕಲಿಕೆ ಮತ್ತು ಗ್ರಹಿಕೆ ಉತ್ತಮವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಒಟ್ಟಿನಲ್ಲಿ ನಮ್ಮ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವುದು ನನ್ನ ಬಯಕೆ. ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಕಲಿಸಬೇಕು. ಎರಡೂ ವಾದಗಳು ಪ್ರಬಲವಾಗಿರುವುದರಿಂದ ಈ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೂ ನಾವು ಒಂದು ಸರ್ಕಾರವಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

* ಇಂಗ್ಲಿಷ್‌ ಮಾಧ್ಯಮ ತರಗತಿ ಆರಂಭಕ್ಕೆ ಪೂರ್ಣ ಸಿದ್ಧತೆ ಆಗಿತ್ತೆ?

ಹಿಂದಿನ ಸರ್ಕಾರದ ಅವಧಿಯಲ್ಲಿ ಇದನ್ನು ಆರಂಭಿಸುವಾಗ ಇನ್ನಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು. ಅದರಿಂದ ಪೋಷಕರಲ್ಲಿ ಇನ್ನಷ್ಟು ವಿಶ್ವಾಸ ಬರುತ್ತಿತ್ತು. ಸ್ವಲ್ಪಮಟ್ಟಿನ ಸಿದ್ಧತೆ ಕೊರತೆ ಕಾಣುತ್ತದೆ.

* ಭಾಷಾ ಕಲಿಕೆಯೂ ಸೇರಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಏನು ಮಾಡುತ್ತೀರಿ?

ವಿವಿಧ ರಾಜ್ಯಗಳಲ್ಲಿರುವ ಅತ್ಯುತ್ತಮ ಅಂಶಗಳನ್ನು ನಮ್ಮ ರಾಜ್ಯದಲ್ಲಿ ಅಳವಡಿಸುತ್ತೇನೆ. ದೆಹಲಿಯ ಮೊಹಲ್ಲಾ ಶಾಲೆ ಬಗ್ಗೆ ಬಹಳಷ್ಟು ಕೇಳಿದ್ದೇನೆ. ಇತ್ತೀಚೆಗೆ ಶಾಸಕ ಕೆ.ಆರ್‌.ರಮೇಶ್ ಕುಮಾರ್‌ ಅವರೂ ಆ ಬಗ್ಗೆ ಮಾತನಾಡಿರುವ ವಿಡಿಯೊ ನೋಡಿದ್ದೇನೆ. ದೆಹಲಿಗೆ ಭೇಟಿ ನೀಡಿ ಅಲ್ಲಿನ ಸರ್ಕಾರಿ ಶಾಲೆಗಳ ವೈಶಿಷ್ಟ್ಯ ತಿಳಿದುಕೊಳ್ಳುತ್ತೇನೆ. ಕೇರಳದಲ್ಲಿ ಗ್ರಾಮ ಮಟ್ಟದ ಶಾಲೆಗಳಲ್ಲಿ ಸ್ಮಾರ್ಟ್‌ ತರಗತಿಗಳನ್ನು ನಡೆಸುತ್ತಿದ್ದಾರೆ. ಸದ್ಯವೇ ಅಲ್ಲಿಗೆ ಭೇಟಿ ನೀಡಲಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT