ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮವಸ್ತ್ರಕ್ಕಾಗಿ ಸರ್ಕಾರದ ವಿರುದ್ಧ ಹೋರಾಟ: ಬಾಲಕನ ಪರ ಕೋರ್ಟ್ ಆದೇಶ

ಕೋರ್ಟ್‌ ಆದೇಶ ಖುಷಿ ನೀಡಿದೆ
Last Updated 30 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಸಕಾಲದಲ್ಲಿ ಸಮವಸ್ತ್ರ ನೀಡದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿ ಜಯಗಳಿಸಿರುವ 8 ವರ್ಷದ ಬಾಲಕನೇ ಮಂಜುನಾಥ ದೇವಪ್ಪ ಹರಿಜನ . ಈತನ ಊರುಕೊಪ್ಪಳ ಜಿಲ್ಲೆಯಕಿನ್ನಾಳ...

**

* ಶಾಲಾ ಸಮವಸ್ತ್ರವನ್ನು ಸರ್ಕಾರ ಏಕೆ ನೀಡಿರಲಿಲ್ಲ?

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ನಮ್ಮ ಶಾಲೆಯ ಹುಡುಗರಿಗೆ ಎರಡು ಜೊತೆಸಮವಸ್ತ್ರದ ಬದಲಿಗೆ ಈ ಸಾರಿ ಒಂದೇ ಜೊತೆ ನೀಡಿದ್ದರು. ಅದು, ಹೆಚ್ಚು ಬಳಕೆಯಿಂದ ಹರಿದು ಹೋಗುವ ಸ್ಥಿತಿ ತಲುಪಿತ್ತು. ಅದನ್ನು ಹಾಕಿಕೊಂಡು ಶಾಲೆಗೆ ಹೋಗುವಾಗ ನನಗೆ ನೋವಾಗುತ್ತಿತ್ತು. ಮುಜುಗರವೂ ಆಗುತ್ತಿತ್ತು. ಈ ಬಗ್ಗೆ ನಾವು ಸರ್ಕಾರದ ಮೇಲೆ ಯಾಕೆ ಕಂಪ್ಲೇಟ್‌ ಕೊಡಬಾರದು ಎಂದು ಅಪ್ಪನನ್ನು ಕೇಳಿದೆ. ಅವರು, ಅದರಲ್ಲಿ ಏನೂ ತಪ್ಪಿಲ್ಲಕೊಡಬಹುದು ಎಂದರು.

* ನ್ಯಾಯಾಲಯಕ್ಕೆ ಮೊರೆ ಹೋಗಿದ್ದು ಹೇಗೆ?

ಶಿಕ್ಷಕರನ್ನು ಮೇಲಿಂದ ಮೇಲೆ ಸಮವಸ್ತ್ರ ಕೇಳುತ್ತಿದ್ದೆ, ಅವರು ಇನ್ನೂ ಬಂದಿಲ್ಲ ಎನ್ನುತ್ತಲೇ ಇದ್ದರು. ನನ್ನ ಗೆಳೆಯರು ಸಹ ಹರಿದ ಅಂಗಿ ಹಾಕಿಕೊಂಡು ಬರುವುದನ್ನು ನೋಡಿ ಬೇಸರವಾಗುತ್ತಿತ್ತು. ಅಪ್ಪ ಕೂಡ ಅನೇಕ ಬಾರಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕೇಳಿದರೂ ಕೊಡಲಿಲ್ಲ. ನಂತರ, ವಕೀಲರ ಸಲಹೆ ಪಡೆದು ಅಪ್ಪ ನನ್ನ ಮೂಲಕವೇ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿಸಿದರು.

* ಕೋರ್ಟ್‌ ತೀರ್ಪಿನ ಬಗ್ಗೆ ಏನನಿಸುತ್ತಿದೆ?

ಸಮವಸ್ತ್ರ ನೀಡದ ಸರ್ಕಾರಕ್ಕೆ ಕೋರ್ಟ್ ಚಾಟಿ ಬೀಸಿದೆಯಂತೆ. ಆರ್‌ಟಿಇ ಕಾಯ್ದೆ ವ್ಯಾಪ್ತಿಗೆ ಒಳಪಡುವ ಶಾಲಾ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ನೀಡಲು ತಿಳಿಸಿದೆ. ನಾನು ಅಪ್ಪನ ಜೊತೆ ಕೋರ್ಟ್‌ಗೆ ಹೋದಾಗ ಜಡ್ಜ್‌ ಸಾಹೇಬರು, ಯಾವ ಊರು, ಅಪ್ಪ ಏನು ಕೆಲಸ ಮಾಡುತ್ತಾರೆ ಎಂದೆಲ್ಲ ಕೇಳಿ ಪ್ರೀತಿಯಿಂದ ಮಾತನಾಡಿಸಿದರು. ನನಗೆ ಗುಡ್‌ ಅಂದರು. ಅಲ್ಲಿಯೇ ಇದ್ದ ಯಾರಿಗೋ ಬೈದು, ಮಕ್ಕಳಿಗೆ ಸಾಲ ಮಾಡಿಯಾದರೂ ಸಮವಸ್ತ್ರ ನೀಡಿ ಎಂದರು.

* ನಿನ್ನ ಸ್ನೇಹಿತರು ಏನಂತಾರೆ?

ಕೋರ್ಟ್‌ ಆದೇಶದಿಂದ ಟಿ.ವಿ, ಪೇಪರ್‌ನಲ್ಲಿ ಕೂಡ ನಾನು ಬಂದಿದ್ದೀನಿ. ಅದನ್ನು ನೋಡಿ ನನ್ನ ಗೆಳೆಯರು ‘ನಮಗೆ ಬಟ್ಟೆ ಕೊಡಿಸಿದ್ದೀಯ, ಬಹಳ ಸಂತೋಷವಾಗಿದೆ’ ಎಂದರು. ನಮ್ಮ ಶಾಲೆ ಶಿಕ್ಷಕರು ನನ್ನ ಬಗ್ಗೆ ಹೆಮ್ಮೆಪಡುತ್ತಾರೆ. ಜನರೆಲ್ಲ ಮಾತನಾಡಿಸುತ್ತಾರೆ. ಮಕ್ಕಳಿಗೆ ಬಟ್ಟೆ ಕೊಡಿ ಎಂದು ಹೇಳಿದ ಕೋರ್ಟ್‌ಗೆ ಥ್ಯಾಂಕ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT