ಸೋಮವಾರ, ಆಗಸ್ಟ್ 3, 2020
23 °C
ಫಟಾಫಟ್‌

ಮನೆ ಬಾಗಿಲಿಗೆ ಮದ್ಯ ಇಲ್ಲ ಅದಕ್ಕೆ ಅವಕಾಶವೂ ಇಲ್ಲ!

ಎಚ್.ನಾಗೇಶ್‌, ಅಬಕಾರಿ ಸಚಿವ Updated:

ಅಕ್ಷರ ಗಾತ್ರ : | |

Prajavani

‘ಮನೆ ಬಾಗಿಲಿಗೇ ಮದ್ಯ’ ಮಾತು ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಅಬಕಾರಿ ಸಚಿವ ಎಚ್‌.ನಾಗೇಶ್‌ ಅವರ ಫಟಾಫಟ್‌ ಸಂದರ್ಶನದ ಮಾತುಗಳು ಇಲ್ಲಿವೆ...

* ಮನೆ ಬಾಗಿಲಿಗೇ ಮದ್ಯ ಬರುತ್ತದೆ ಎಂಬ ಖುಷಿಯಲ್ಲಿದ್ದ ಪಾನಪ್ರಿಯರಿಗೆ ನಿರಾಸೆ ಮಾಡಿಬಿಟ್ರಲ್ಲ ನೀವು... 

ಆನ್‌ಲೈನ್‌ ವ್ಯವಸ್ಥೆ ಮೂಲಕ ಮದ್ಯ ಪೂರೈಸುವ ಚಿಂತನೆ ಈ ಹಿಂದೆ ಇತ್ತು. ಕೆಲವು ರಾಜ್ಯಗಳಲ್ಲಿ ಈ ವ್ಯವಸ್ಥೆ ಇದೆ ಎಂದು ಕೇಳಿದ್ದೇನೆ. ಈ ವಿಷಯವಾಗಿ ಉನ್ನತ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದಷ್ಟೇ ಹೇಳಿದ್ದೆ. ನನ್ನ ಹೇಳಿಕೆಯನ್ನು ತಿರುಚಿ, ಮನೆ ಮನೆಗೆ ಮದ್ಯ ಪೂರೈಸಲಾಗುತ್ತದೆ ಎಂಬಂತೆ ಸುದ್ದಿ ಮಾಡಲಾಯಿತು.

* ಬೆಂಗಳೂರಿನಲ್ಲಿ ಆನ್‌ಲೈನ್‌ ವ್ಯವಸ್ಥೆ ಮೂಲಕ ಮದ್ಯ ಸರಬರಾಜಾಗುತ್ತಿದೆಯಂತೆ...

ಈ ಬಗ್ಗೆ ದೂರು ಬಂದಿದೆ. ಅದೆಲ್ಲ ಅನಧಿಕೃತ ವ್ಯವಹಾರ. ಇದಕ್ಕೆ ಯಾರು ಅನುಮತಿ ನೀಡಿದ್ದಾರೋ ಗೊತ್ತಿಲ್ಲ. ಪರಿಶೀಲಿಸುತ್ತಿದ್ದೇನೆ.

* ಮನೆ ಬಾಗಿಲಿಗೆ ಮದ್ಯ ಪೂರೈಸುವುದರಿಂದ ಸರ್ಕಾರಕ್ಕೆ ವರಮಾನ ಜಾಸ್ತಿಯಾಗುತ್ತದೆಯೇ? 

ಇಲ್ಲ, ಮನೆಯಲ್ಲಿ ಹೆಣ್ಣುಮಕ್ಕಳು ನೋಡುತ್ತಿರುತ್ತಾರೆ ಎಂಬ ಕಾರಣಕ್ಕೆ ಕಡಿಮೆ ಕುಡಿಯುತ್ತಾರೆ. ಹಾಗೆಂದು, ಮನೆ ಬಾಗಿಲಿಗೆ ಮದ್ಯ ಪೂರೈಸುವ ಪ್ರಸ್ತಾವ ಸದ್ಯಕ್ಕೆ ಇಲ್ಲವೇ ಇಲ್ಲ. ಮುಖ್ಯಮಂತ್ರಿ ಬಳಿ ಚರ್ಚಿಸುವವರೆಗೆ ಈ ಬಗ್ಗೆ ಹೇಳಿಕೆ ನೀಡುವ ಅಧಿಕಾರವೂ ನನಗೆ ಇಲ್ಲ. 

* ಕುಡಿದು ವಾಹನ ಚಲಾಯಿಸಿದರೆ ಹಾಕುವ ದಂಡದ ಪ್ರಮಾಣ ವಿಪರೀತ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಮನೆ ಬಾಗಿಲಿಗೇ ಮದ್ಯ ಬಂದಿದ್ದರೆ ಅನುಕೂಲವಾಗುತ್ತಿತ್ತೇನೋ?

ಹೊರಗೆ ಹೋಗಿ ಮಿತಿಮೀರಿ ಕುಡಿಯುವವರು ಕೆಲವೊಮ್ಮೆ ರಸ್ತೆಯಲ್ಲಿ ಬಿದ್ದು ತೊಂದರೆಗೀಡಾಗುತ್ತಿದ್ದರು. ಅಪಘಾತಗಳು ಹೆಚ್ಚಾಗುತ್ತಿದ್ದವು. ಮನೆಯಲ್ಲಿ ಕುಡಿದರೆ ಸುರಕ್ಷಿತವಾಗಿರುತ್ತಾರೆ. ಆದರೆ, ಈ ಮಾತನ್ನು ಮನೆ ಬಾಗಿಲಿಗೆ ಮದ್ಯ ಪೂರೈಸುವ ವ್ಯವಸ್ಥೆಗೆ ನನ್ನ ಸಮರ್ಥನೆ ಎಂದು ಭಾವಿಸಬಾರದು.

* ಆಧಾರ್‌ ಗುರುತಿನ ಚೀಟಿ ಇಲ್ಲದವರು, ಮದ್ಯಪಾನ ಮಾಡಲು ಜೊತೆಗೊಬ್ಬರನ್ನು ಕರೆದೊಯ್ಯುವ ಪರಿಸ್ಥಿತಿ ಬರಲಿದೆಯೇ? 

ಪರಿಸರ ಹೋರಾಟಗಾರರ ಸಮಿತಿಯೊಂದು ಇಂತಹ ಸಲಹೆ ನೀಡಿತ್ತು. ಆದರೆ, ಈ ಸಲಹೆ ಅನುಷ್ಠಾನಯೋಗ್ಯವಲ್ಲ.

ಅಬಕಾರಿ ಇಲಾಖೆಯ ಸೂಕ್ಷ್ಮಗಳನ್ನು ಬಹು ಬೇಗ ಅರ್ಥೈಸಿಕೊಂಡಿದ್ದೀರಿ ಎಂಬ ಮಾತಿದೆ... 

ಈ ಮಾತನ್ನು ನೀವು ‘ನೆಗೆಟಿವ್‌’ ನೆಲೆಯಲ್ಲಿ ಹೇಳುತ್ತಿದ್ದೀರೋ, ‘‍ಪಾಸಿಟಿವ್‌’ ಆಗಿಯೋ ಗೊತ್ತಿಲ್ಲ. ಆದರೆ, ಮೊದಲಿನಿಂದಲೂ ನಾನು ಆಡಳಿತ ವರ್ಗದಲ್ಲಿ (ಬೆಸ್ಕಾಂ ತಾಂತ್ರಿಕ ನಿರ್ದೇಶಕರಾಗಿದ್ದರು) ಇದ್ದುದರಿಂದ ಇಲಾಖೆಯನ್ನು ಬೇಗ ಅರಿಯಲು ಸಾಧ್ಯವಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು