ನಿಸರ್ಗ ಎಲ್ಲರಿಗೂ ಸಮಾನ ಅವಕಾಶ ನೀಡಿದೆ. ಅಲ್ಲಿ ಬಡತನ ಶ್ರೀಮಂತಿಕೆ ಎಂಬುದಿಲ್ಲ. ಸೂರ್ಯ ಶ್ರೀಮಂತನ ಮನೆಗೆ ಹೆಚ್ಚು ಬೆಳಕು, ಬಡವನ ಮನೆಗೆ ಕಡಿಮೆ ಬೆಳಕು ನೀಡುವುದಿಲ್ಲ. ನಮ್ಮ ದೃಷ್ಟಿಯಲ್ಲಿ ಬಂಗ್ಲೆ ಶ್ರೀಮಂತಿಕೆ, ಆಶ್ರಯ ಮನೆ ಬಡತನ. ಆದರೆ ಸೂರ್ಯನ ದೃಷ್ಟಿಯಲ್ಲಿ ಬಡತನವೂ ಇಲ್ಲ, ಶ್ರೀಮಂತಿಕೆಯೂ ಇಲ್ಲ. ಆಕಾಶದಲ್ಲಿ ಮೇಘಗಳು ತೇಲಿ ಬರುತ್ತಿರುತ್ತವೆ. ‘ನಮ್ಮ ಜಾತಿಯ ಹೊಲದ ಮೇಲೆ ಮಳೆ ಸುರಿಸಿ’ ಎನ್ನಲು ಆಗುತ್ತದೇನು? ಹಾಗೆ ಹೇಳಿದರೆ, ಆಗ ಮೋಡ ‘ನೀವು ಕೆಳಗೆ ನಿಂತು ನೋಡುವವರಿಗೆ ಮಾತ್ರ ಆ ಜಾತಿ ಈ ಜಾತಿ ಅಂತ ಕಾಣುತ್ತದೆ. ನಾವು ಮೇಲೆ ನಿಂತು ನೋಡುವವರಿಗೆ ಕೆಳಗೆ ಇದ್ದವರೆಲ್ಲಾ ಭೂಮಿ ತಾಯಿಯ ಮಕ್ಕಳು ಎನ್ನುವುದಷ್ಟೇ ಕಾಣುತ್ತದೆ’ ಎಂದು ಹೇಳುತ್ತದೆ. ನೀರು, ಗಾಳಿ, ಬೆಳಕು, ಬಯಲು ಎಲ್ಲರಿಗೂ ಸಮಾನವಾಗಿ ಕರುಣಿಸಿದರೂ ಇಲ್ಲಿ ಒಬ್ಬ ಬುದ್ಧನಾಗುತ್ತಾನೆ. ಇನ್ನೊಬ್ಬ ಯಾಕೆ ಬಿದ್ದ? ಯಾಕೆ ಒಬ್ಬ ವಿಜ್ಞಾನಿ, ಇನ್ನೊಬ್ಬ ಯಾಕೆ ಅಜ್ಞಾನಿ? ಇದು ವೈಪರೀತ್ಯ ಯಾಕಾತು? ಒಂದೇ ತರಗತಿ, ಒಂದೇ ವಿಷಯ, ಒಂದೇ ಶಿಕ್ಷಕ. ಆದರೂ ಒಬ್ಬ ಮೊದಲನೇ ಸ್ಥಾನ ಗಳಿಸುತ್ತಾನೆ, ಇನ್ನೊಬ್ಬ ಫೇಲ್ ಆಗುತ್ತಾನೆ ಯಾಕೆ?

ಮನುಷ್ಯನಿಗೆ ಎರಡು ಪ್ರವೃತ್ತಿಗಳು. ಒಂದು ಸಹಜ ಪ್ರವೃತ್ತಿ, ಇನ್ನೊಂದು ಪ್ರಯತ್ನ ಪ್ರವೃತ್ತಿ. ನಮಗೆ ಬಾಲ್ಯ ಇರುತ್ತದೆ. ನಾವು ಯುವಕರಾಗಲು ಏನೂ ಪ್ರಯತ್ನ ಪಡೋದು ಬೇಡ. ಹಾಗೆಯೇ ಮುದುಕರಾಗಲೂ ಯಾವ ಪ್ರಯತ್ನವೂ ಬೇಡ. ಸಾವಾಗಲೂ ಯಾವ ಪ್ರಯತ್ನ ಇಲ್ಲ. ಇದು ಮನುಷ್ಯನ ಸಹಜ ಪ್ರವೃತ್ತಿ. ಇದನ್ನು
ತಡೆಯಲು ಸಾಧ್ಯವಿಲ್ಲ. ಮುಪ್ಪಾಗುವುದನ್ನು ತಡೆಯಲು ಸಾಧ್ಯವಿಲ್ಲ. ಇದು ನೈಸರ್ಗಿಕ ಕ್ರಿಯೆ. ಈಗ ಕೆಲವರಿಗೆ ಕಣ್ಣು ಕಾಣಿಸುವುದಿಲ್ಲ. ಕಣ್ಣಿದ್ದವರಿಗೆ ಜಗತ್ತು ಕಾಣುತ್ತದೆ. ಆದರೆ ತಮಗೆ ಏನು ಬೇಕು ಎನ್ನುವುದು ಗೊತ್ತಾಗುವುದಿಲ್ಲ. ಆದರೆ ಕಣ್ಣಿಲ್ಲದವರಿಗೆ ಜಗತ್ತೇ ಕಾಣದು. ಆದರೆ ತಮಗೆ ಏನು ಬೇಕು ಎನ್ನುವುದು ಕಾಣುತ್ತದೆ. ಇದು ಪ್ರಯತ್ನ ಪ್ರವೃತ್ತಿ. ಪ್ರಯತ್ನದಿಂದ ಜನ ಏನನ್ನಾದರೂ ಸಾಧಿಸಬಹುದು. ಎರಡು ಮಕ್ಕಳ ತಾಯಿಯಾಗಿದ್ದ ಮೇರಿ ಕೋಮ್ ಒಲಿಂಪಿಕ್ ಪದಕ ಪಡೆದಳು. ಇದು ಪ್ರಯತ್ನದ ಫಲ. ಸಂಪತ್ತು ಗಳಿಸುವುದು ಸಾಧನೆಯಲ್ಲ. ಸತತ ಪ್ರಯತ್ನದ ಮೂಲಕ ಸಾಧನೆ ಮಾಡುವುದೇ ಸಂಪತ್ತಾಗಬೇಕು.

ಯಾವ ವಿದ್ಯಾರ್ಥಿಗೆ ಪರೀಕ್ಷೆಯಲ್ಲಿ ನಪಾಸಾಗಬೇಕು ಎಂಬ ಬಯಕೆ ಇದೆ? ಯಾವ ವ್ಯಾಪಾರಿಗೆ ತನಗೆ ನಷ್ಟ ಆಗಬೇಕು ಎಂಬ ಬಯಕೆ ಇದೆ? ಎಲ್ಲರಿಗೂ ಬಯಕೆ ಇದೆ. ಆದರೂ ನಾವು ಅಂದುಕೊಂಡಿದ್ದು ಆಗುವುದಿಲ್ಲವಲ್ಲ ಯಾಕೆ? ಎಲ್ಲಿ ದೋಷವಿದೆ? ದೋಷ ಹೊರಗಿಲ್ಲ. ನಮ್ಮ ಒಳಗೆಯೇ ಇದೆ. ನಮಗೆ ಯಶಸ್ಸು ಗಳಿಸುವ ಇಚ್ಛೆ ಇದ್ದರೂ ಒಳಗಿರುವ ಚಂಚಲ ಮನಸ್ಸು ಯಾವುದನ್ನೂ ಮಾಡಲು ಕೊಡುವುದಿಲ್ಲ. ಆ ದೋಷದಿಂದ ಸಾಧನೆ ಮಾಡಲು ಆಗುವುದಿಲ್ಲ. ಗಾಳಿಯನ್ನು ಕಟ್ಟಿ ಹಿಡಿಯಬಹುದು, ಆದರೆ ಮನಸ್ಸನ್ನು ಕಟ್ಟಿ ನಿಲ್ಲಿಸಲು ಆಗುವುದಿಲ್ಲ. ಬೆಳಿಗ್ಗೆ ಬೇಗ ಎದ್ದು ಓದಬೇಕು ಅಂತ ಅಲಾರಂ ಇಟ್ಟಿರುತ್ತಾರೆ. ಅಲಾರಾಂ ಆದಾಗ ಇನ್ನು ಐದು ನಿಮಿಷ ಮಲಗೋಣ ಎಂದು ಮಲಗಿದರೆ ಏಳೋವಾಗ 8 ಗಂಟೆ ಆಗಿರತ್ತದೆ. ಅಲಾರಾಂ ಇಡು ಅಂತ ಹೇಳಿದ್ದೂ ಮನಸ್ಸು. ಮತ್ತೆ ಮಲಗು ಅಂತ ಹೇಳಿದ್ದೂ ಮನಸ್ಸು. ಈ ಮನಸ್ಸಿನ ಮೇಲೆ ನಿಯಂತ್ರಣ ಇರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.