ಸೋಮವಾರ, ಸೆಪ್ಟೆಂಬರ್ 27, 2021
22 °C

ಮಂಗಳವಾರ, 3–5–1994

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣೆ ಮುಂದೂಡಿಕೆಗೆ ಪ್ರತಿಪಕ್ಷದ ಉಗ್ರ ಟೀಕೆ
ಬೆಂಗಳೂರು, ಮೇ 2– ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆಯನ್ನು ಮುಂದೂಡಿದ ರಾಜ್ಯ ಸರ್ಕಾರದ ಕ್ರಮವನ್ನು ಪ್ರತಿಪಕ್ಷದ ನಾಯಕರು ಇಂದು ಇಲ್ಲಿ ಕಟುವಾಗಿ ಟೀಕಿಸಿದರು. ಕಳೆದ ನಾಲ್ಕು ವರ್ಷಗಳ ನಿಷ್ಕ್ರಿಯ ಆಡಳಿತದ ಫಲವಾಗಿ ಕಾಡುತ್ತಿರುವ ಭೀಕರ ಸೋಲಿನ ಭಯದಿಂದ, ಜನರನ್ನು ಎದುರಿಸಲು ಹೆದರಿ ಸರ್ಕಾರ ಹೇಡಿತನ ಪ್ರದರ್ಶಿಸಿದೆ ಎಂದು ಅವರೆಲ್ಲರ ಒಕ್ಕೊರಲಿನ ಆರೋಪ.

ಚುನಾವಣೆಯ ದಿನಾಂಕ ಘೋಷಣೆ– ಮುಂದೂಡಿಕೆ– ಮತ್ತೊಂದು ದಿನಾಂಕ ಪ್ರಕಟಣೆ– ಚಿನ್ನಪ್ಪ ರೆಡ್ಡಿ ವರದಿ ಜಾರಿ– ತಡೆಯಾಜ್ಞೆ ತರಲು ಹೂಡಿದ ತಂತ್ರ– ಸುಗ್ರೀವಾಜ್ಞೆ ಮೂಲಕ ಅನಿರ್ದಿಷ್ಟ ಕಾಲ ಚುನಾವಣೆ ಮುಂದೂಡಿಕೆ– ಹೀಗೆ ಈ ಘಟನೆಗಳ ಸರಣಿ ಸರ್ಕಾರ ಜನರೊಡನೆ ಕಣ್ಣಾಮುಚ್ಚಾಲೆಯಾಡಿ ಅವರನ್ನು ಮೋಸಗೊಳಿಸಿದೆ ಎಂಬುದಕ್ಕೆ ಸಾಕ್ಷಿ ಎಂದು ವಿರೋಧಿ ನಾಯಕರು ಹೇಳಿದ್ದಾರೆ.

ರೋರಿಕ್ ದಂಪತಿಗಳ ರೂ. 20 ಕೋಟಿ ಆಸ್ತಿ ಲೂಟಿ
ಬೆಂಗಳೂರು, ಮೇ 2– ವಿಶ್ವವಿಖ್ಯಾತ ಕಲಾವಿದ ರೋರಿಕ್ ಹಾಗೂ ಭಾರತ ಚಲನಚಿತ್ರ ರಂಗದ ಮಿನುಗು ತಾರೆ ದೇವಿಕಾ ರಾಣಿ ಅವರ ತಾತಗುಣಿ ಎಸ್ಟೇಟ್‌ನಲ್ಲಿದ್ದ ಸುಮಾರು 20 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಮೂಲ್ಯ ಕಲಾಕೃತಿಗಳು, ವಜ್ರ, ಬಂಗಾರ, ಬೆಳ್ಳಿ ಆಭರಣಗಳು ಕಣ್ಮರೆಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.