ಬೆಳಗಾಂವದಾಗ ‘ಸಕ್ರಿ’ ಬ್ಯಾನಿ!

7

ಬೆಳಗಾಂವದಾಗ ‘ಸಕ್ರಿ’ ಬ್ಯಾನಿ!

Published:
Updated:
Deccan Herald

ಮೊನ್ನಿ–ಮೊನ್ನಿ ಬೆಳಗಾಂವದಾಗ ಸಕ್ರಿ ಬ್ಯಾನಿ ಮಿತಿ ಮೀರಿ ಪೇಶಂಟ್‌ಗೋಳ್‌, ‘ನಮ್ಮ ಏರಿಯಾದಾಗಿನ ‘ಶುಗರ್’ ಡಾಕ್ಟರಗೋಳ್‌ ನಮಗ ಕರೆಕ್ಟ್ ‘ಟ್ರೀಟ್‌ಮೆಂಟ್’ ಕೊಡವಲ್ಲರು’ ಅಂತ ಧರಣಾ ಕುಂತಿದ್ರು.

ಅದರಾಗ ಎಷ್ಟೋ ಮಂದಿಗಿ ಸಕ್ರಿ ಬ್ಯಾನಿ ಹೆಚ್ಚ ಆಗಿ ಕಣ್ಣ, ಕಾಲ ಕಳಕೊಂಡು ಬಾಯ ಬಡಕೊಂಡ್ರೂ ಲೋಕಲ್ ಡಾಕ್ಟರ್ಸ್ ‘ಕ್ಯಾರೇ’ ಅನ್ನಲಿಲ್ಲಾ. ‘ಚೀಫ್ ಸರ್ಜನ್’ ಬೆಂಗಳೂರದಾಗ ‘ಮಲಕೊಂಡಿದ್ರು’!

ಅಷ್ಟರಾಗ ಒಬ್ಬಾಕಿ ಹೆಣ್ಣಮಗಳು ಯಪ್ಪಾ... ‘ಚೀಫ್ ಸರ್ಜನ್’ ಎಲ್ಲಿ ಮಲಕೊಂಡಿ? ನನ್ ಗಂಡ, ಅಪ್ಪ ಇಬ್ರಿಗೂ ‘ಶುಗರ್’ ಹೆಚ್ಚ ಆಗೇತಿ... ಅಂತ ಕಣ್ಣೀರ ಹಾಕಿದ್ಳು. ಆಗ ಎಚ್ಚೆದ್ದ ‘ಚೀಫ್ ಸರ್ಜನ್’, ‘ಬೇ, ನಾ ಈಗರ ಚಾರ್ಜ್ ತಗೊಂಡೀನಿ. ನನಗಿಂತ ಮೊದಲ ಇದ್ದ ಡಾಕ್ಟರನ್ನ ನೀ ಕೇಳಬೇಕಿತ್ತು. ಆಗ ನೀ ಎಲ್ಲಿದ್ದೆ ತಾಯಿ?’ ಅಂತ ಹೊಳ್ಳಿ ಕೇಳಿದ್ರು! ಅವರ ಮಾತು ಗ್ಯಾಂಗ್ರಿನ್ ಮ್ಯಾಗ ಬರಿ ಎಳದಾಂಗ ಆತು. ಶುಗರ್ ಪೇಶಂಟ್‌ಗೋಳ್‌ ಲಬಾ.. ಲಬಾ.. ಹೊಯ್ಕೊಂಡ್ರು.

ಈ ವ್ಯಾಳೇದಾಗ, ಗೋಕಾಕ ಡಾಕ್ಟರ್‌ ಮಾತ ಮೀರಿ ಬೆಂಗಳೂರಿಂದ ಡಾ.ಡಿಕ್ಸಿಕುಮಾರ್ ಓಡಿ ಬಂದ್ರು... ಪೇಶಂಟ್‌ಗೋಳ್‌ಗೆ ಮಂತ್ರಾ ಹಾಕಿ ಗುಳಗಿ ಕೊಟ್ರು. ‘ಬೆಳಗಾಂವದಾಗ ಡಿಸೆಂಬರ್ 10ರಿಂದ ‘ಹೆಲ್ತ್‌ ಕ್ಯಾಂಪ್’ ಶುರು ಮಾಡ್ತೇವಿ. ಆವಾಗ ನಿಮ್ಮ ‘ಸಕ್ರಿ ಬ್ಯಾನಿ’ ಕಡಿಮಿ ಮಾಡ್ತೇವಿ’ ಅಂತ ಭರೋಸಾ ಕೊಟ್ರು.

ಇದನ್ನೆಲ್ಲಾ ನೋಡಕೊಂತ ಕುಂತಿದ್ದ ‘ಮಾಜಿ ಚೀಫ್ ಸರ್ಜನ್’ ಯಡ್ಡೂದಾದಾ, ‘ಇವರು ಅದೆಂಗ್ ‘ಹೆಲ್ತ್‌ ಕ್ಯಾಂಪ್’ ಮಾಡ್ತಾರ ನೋಡುನು. ಇದೇ ಹತ್ತಕ್ಕೆ ರಾಜ್ಯದ ಎಲ್ಲಾ ‘ಶುಗರ್ ಪೇಶಂಟ್‌’ಗೋಳ್‌ನ ಬೆಳಗಾಂವದಾಗ ಜಮಾ ಮಾಡ್ರಿ. ‘ಗದ್ದಲ’ ಭರಪೂರ ಆಗಬೇಕ... ‘ಹೆಲ್ತ್‌ ಕ್ಯಾಂಪ್’ ಫೇಲ್ ಆಗಬೇಕ’ ಅಂತ ಹೇಳಿ ತಮ್ಮ ಮಂದಿಗಿ ಫರ್ಮಾನ ಹೊರಡಿಸಿದ್ರು.

ಅಲ್ಲೇ ಮೂಲ್ಯಾಗ ಕುಂತ ಡಾಕ್ಟರ್ ‘ಗುರಾನಿ’, ಇದೆಲ್ಲಾ ಬ್ಯಾಡಾ ಅಂತ ‘ಕತ್ತಿ’ ಝಳಪಿಸಿದ್ರೂ ಯಡ್ಡೂದಾದಾ ಆ ಕಡೆ ನೋಡ್ಲೇ ಇಲ್ಲಾ!

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !