‘ಯುರೋಪಿನಲ್ಲಿ ಮೈ ಬಣ್ಣದ ಆಧಾರದಲ್ಲಿ ತಾರತಮ್ಯ ಮಾಡುವ ವಿದ್ಯಮಾನವನ್ನು ರೇಸಿಸಂ ಎಂದು ವಿಶ್ಲೇಷಿಸಲಾಗುತ್ತದೆ. ಈ ಪರಿಭಾಷೆ ಬಳಸಿದ ಮಾತ್ರಕ್ಕೆ ಅಲ್ಲಿನ ಬಿಳಿಯರು, ಬಳಸಿದ ವ್ಯಕ್ತಿಯ ಮೇಲೆ ದೂರು ದಾಖಲಿಸುವುದು ಎಷ್ಟು ಹಾಸ್ಯಾಸ್ಪದ!’ ಎಂದು ಕಿರಣ್ ಎಂ. ಗಾಜನೂರು ಹೇಳಿದ್ದಾರೆ (ಚರ್ಚೆ, ಜೂನ್ 25). ಆದರೆ ಬಿಳಿ ಮೈಬಣ್ಣದ ಸಾಮಾನ್ಯ ವ್ಯಕ್ತಿಯೊಬ್ಬನ ಮನಸ್ಸು ನೋಯಿಸುವಂತಹ ಯಾವುದೇ ಸ್ಪಷ್ಟವಾದ ಅಂಶ ರೇಸಿಸಂ ಎಂಬ ಪರಿಭಾಷೆಯಲ್ಲಿ ಇಲ್ಲ. ಆದರೆ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ನಡುವೆ ತುಂಬಾ ತೆಳುವಾದ ಗೆರೆ ಇದೆ. ಯಾರಾದರೂ ಬ್ರಾಹ್ಮಣ್ಯವನ್ನು ಟೀಕಿಸಿದರೆ ಸಾಮಾನ್ಯ ಬ್ರಾಹ್ಮಣನೊಬ್ಬನಿಗೆ ತನ್ನನ್ನೇ ಟೀಕಿಸುತ್ತಿದ್ದಾರೆ ಎಂದು ಭಾಸವಾಗುವ ಸಾಧ್ಯತೆಯಿದೆ. ‘ಬ್ರಾಹ್ಮಣ್ಯ’ವನ್ನು ವಿಶಾಲ ಅರ್ಥದಲ್ಲಿ ಗ್ರಹಿಸುವ ಬೌದ್ಧಿಕ ಶಿಸ್ತು ಅವನಿಗೆ ಇರಲಾರದು. ಆದ್ದರಿಂದ ಆತ ನೊಂದುಕೊಳ್ಳಬಹುದು. ಕಾನೂನಿನ ಪರಿಭಾಷೆಯಲ್ಲಿ ಇದಕ್ಕೆ innuendo (ವ್ಯಂಗ್ಯೋಕ್ತಿ) ಮತ್ತು insinuation (ಪರೋಕ್ಷ ಪ್ರಚೋದನೆ ಅಥವಾ ಆಕ್ಷೇಪ) ಎನ್ನುತ್ತಾರೆ.

ಬ್ರಾಹ್ಮಣ್ಯ ಎಂಬ ಪರಿಭಾಷೆ ಜಾತಿ ಸೂಚಕವಾಗಿರುವುದೇ ಗೊಂದಲಕ್ಕೆ ಕಾರಣ. ಆದ್ದರಿಂದ ಅಸಮಾನತೆ ಮತ್ತು ತಾರತಮ್ಯಕ್ಕೆ ಬ್ರಾಹ್ಮಣ್ಯದ ಬದಲು ಯಾವುದಾದರೂ ಪರ್ಯಾಯವಾದ ಪದವನ್ನು ಮೇಧಾವಿಗಳೂ ಸಮಾಜಶಾಸ್ತ್ರಜ್ಞರೂ ಹುಡುಕಬೇಕು.
-ಸಿ.ರುದ್ರಪ್ಪ, ಬೆಂಗಳೂರು

ಜಾತಿವಿನಾಶವೇ ಪರಿಹಾರ
ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಮತ್ತು ನಟ ಚೇತನ್ ಅವರು ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ ಬೇರೆ ಬೇರೆ ಎಂದಿರುವುದನ್ನು ಒಪ್ಪದ ಗ.ನಾ.ಭಟ್ಟ (ಚರ್ಚೆ, ಜೂನ್ 22), ಎರಡಕ್ಕೂ ಅವಿನಾಭಾವ ಸಂಬಂಧವಿದೆ ಎಂದಿದ್ದಾರೆ. ಈ ಮೂಲಕ ಎಲ್ಲಾ ಜಾತಿ ತಾರತಮ್ಯಗಳು ಮತ್ತು ಅಸ್ಪೃಶ್ಯತೆಗೆ ನಾವೇ ಹೊಣೆಗಾರರು ಎಂದು ಒಪ್ಪಿಕೊಂಡಿದ್ದಾರೆ. ಜಾತಿ ವರ್ಣ ಅಲ್ಲ, ವರ್ಣ ಜಾತಿ ಅಲ್ಲ ಎಂದು ವಾದಿಸಿದ್ದಾರೆ. ಆದರೆ ಆಪ್ತೆ ಅವರ ಸಂಸ್ಕೃತ– ಇಂಗ್ಲಿಷ್ ನಿಘಂಟಿನಲ್ಲಿ ವರ್ಣಕ್ಕೆ ಜಾತಿ ಎಂದು ಅರ್ಥ ಇದೆ. ಆದ್ದರಿಂದ ಭಟ್ಟರ ವಾದ ಕುತರ್ಕವಾಗುತ್ತದೆ.

ಪುರಾಣ ಕಾಲದಲ್ಲಿ ಶೂದ್ರರೂ ಬ್ರಾಹ್ಮಣರಾಗಿದ್ದಾರೆ ಎಂದು ಅವರು ಕೆಲವು ನಿದರ್ಶನಗಳನ್ನು ಕೊಟ್ಟಿದ್ದಾರೆ. ಆದರೆ ನಮ್ಮ ಕಾಲದಲ್ಲಿ 20ನೇ ಶತಮಾನದಲ್ಲಿ ಡಾ. ಅಂಬೇಡ್ಕರ್ ಇದ್ದರು. ಅವರದು ಪೂರ್ಣ ಪರಿಶುದ್ಧ ಪುಣ್ಯ ಜೀವನವಾಗಿತ್ತು. ಅವರ ವಿದ್ವತ್ತು ಮತ್ತು ಜ್ಞಾನದ ಎತ್ತರ ಹೋಲಿಕೆಗೆ ನಿಲುಕುವಂತಹದ್ದಲ್ಲ. ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ಪ್ರಪಂಚದ ಅತ್ಯಂತ ದೊಡ್ಡ ವಿದ್ವನ್ಮಣಿಗಳನ್ನು ಪಟ್ಟಿ ಮಾಡುವಾಗ ಇಟ್ಟ ಮೊತ್ತಮೊದಲ ಹೆಸರೇ ಡಾ. ಅಂಬೇಡ್ಕರ್ ಅವರದು. ಆದರೆ ಭಾರತದವರಿಗೆ ಅಂಬೇಡ್ಕರ್ ಜಾತಿ ಕಾಣಿಸಿತೇ ಹೊರತು ಅವರ ಜ್ಞಾನ ಗೋಚರಿಸಲಿಲ್ಲ. ಹಾಗಾಗಿ ಅಂಥ ವಿಶ್ವಜ್ಞಾನಿಯನ್ನು ಬ್ರಾಹ್ಮಣ ಅಂತ ಏಕೆ ಗುರುತಿಸಲಿಲ್ಲ?

ಪರಮಜ್ಞಾನಿ ಕನಕದಾಸರನ್ನು ಇನ್ನೂ ಏಕೆ ಉಡುಪಿಯ ಮಠದ ಹೊರಗೇ ನಿಲ್ಲಿಸಿದ್ದಾರೆ? ಈ ಎರಡು ಉದಾಹರಣೆಗಳು ಸಾಕು. ಭಟ್ಟರು ಕೂದಲು ಸೀಳುವ ಕೆಲಸ ಮಾಡಿದ್ದಾರೆ. ಕಾರಣ: ಅವರು ಬಸವಣ್ಣ ಮತ್ತು ಪರಮಹಂಸರ ಹಾಗೆ ಬ್ರಾಹ್ಮಣ ಅಥವಾ ಬ್ರಾಹ್ಮಣ್ಯದಿಂದ ಹೊರಗೆ ಬಂದಿಲ್ಲ. ಆದ್ದರಿಂದಲೇ ಮಹಾಜ್ಞಾನಿ ಅಂಬೇಡ್ಕರ್ ಹೇಳಿದ್ದು: ‘ಬ್ರಾಹ್ಮಣಿಕೆಯೇ ಹಿಂದೂ ಧರ್ಮವನ್ನು ಹಾಳುಮಾಡಿರುವ ವಿಷ’ (Annihilation of Caste, P.101, ಜಲಂಧರ್, 1975). ಮೇಲು ಕೀಳು ಭಾವನೆಗಳು ಎಲ್ಲಾ ಜಾತಿಗಳನ್ನೂ ಕೊಳಕು ಮಾಡಿಬಿಟ್ಟಿವೆ. ಇದಕ್ಕೆ ಜಾತಿವಿನಾಶ ಒಂದೇ ಪರಿಹಾರ.
-ಕೆ.ಎಸ್.ಭಗವಾನ್, ಮೈಸೂರು

ವಿಶ್ಲೇಷಣೆ ನಡೆಯಲಿ
ಇಂದು ಬ್ರಾಹ್ಮಣ ಎನ್ನುವುದು ಹುಟ್ಟಿನಿಂದ ಬರುವ ಜಾತಿ ಸೂಚಕವೇ ಹೊರತು ವರ್ಣ ಸೂಚಕವಲ್ಲ. ಬ್ರಾಹ್ಮಣರಲ್ಲಿ ಇರುವ ಬಹಳ ಕಡಿಮೆ ಸಂಖ್ಯೆಯ ಪುರೋಹಿತರು ಮಾತ್ರ ಆ ವರ್ಣಕ್ಕೆ ಸೇರುವವರಾಗಬಹುದು ಅಷ್ಟೆ. ಎಂದೋ ಪ್ರಾಚೀನ ಕಾಲದಲ್ಲಿ ಬಹುಶಃ ಅನ್ವಯಿಸಬಹುದಾಗಿದ್ದ ಬ್ರಾಹ್ಮಣ, ಬ್ರಾಹ್ಮಣ್ಯ ಪದಗಳ ಅರ್ಥವನ್ನೇ ಪ್ರಸ್ತುತ ಕಾಲಮಾನಕ್ಕೆ ಅನ್ವಯಿಸಿಕೊಂಡು ಚರ್ಚಿಸುವುದು ಉಚಿತವೆ?

ಬ್ರಾಹ್ಮಣ ಎಂದರೆ ಬ್ರಹ್ಮಜ್ಞಾನವನ್ನು ಪಡೆದವನು ಎಂದು ಕೆಲವರು, ಬ್ರಹ್ಮಜಿಜ್ಞಾಸೆಯಲ್ಲಿ ತೊಡಗಿಸಿಕೊಂಡಿರುವವನು ಎಂದು ಕೆಲವರು ಅರ್ಥವಿವರಣೆ ಮಾಡುತ್ತಾರೆ. ಅದು ಹೌದಾದರೆ ಈಗಿನ ನಮ್ಮ ಸಮಾಜದಲ್ಲಿ ಬ್ರಾಹ್ಮಣರು ಎಂದು ಗುರುತಿಸಲ್ಪಡುತ್ತಿರುವವರಲ್ಲಿ ಇಂತಹವರು ಎಷ್ಟು ಜನ ಸಿಗುತ್ತಾರೆ? ಕಂಡ ಕಂಡವರೆಲ್ಲ ವೇದ, ಉಪನಿಷತ್ತುಗಳನ್ನು ಬ್ರಹ್ಮಾಸ್ತ್ರಗಳನ್ನಾಗಿ ಬಳಸುತ್ತಿರುವಾಗ ದಲಿತರ ಪರವಾಗಿ ಚಿಂತಿಸುವವರು ಅಂಬೇಡ್ಕರ್ ಅವರನ್ನು, ಅವರ ವಿಚಾರಧಾರೆಗಳನ್ನು ಯಾಕೆ ಉಲ್ಲೇಖಿಸಬಾರದು? ಅಂಬೇಡ್ಕರ್ ಅವರು ಇಂದು ನಮ್ಮೆಲ್ಲರ ಅಸ್ತ್ರವಾಗಬೇಕಾಗಿದೆ.

ಇಂದು ವೇದೋಪನಿಷತ್ತುಗಳನ್ನು ಯಥೋಚಿತವಾಗಿ ವಿಶ್ಲೇಷಣೆ ಮಾಡುವವರೇ ಇಲ್ಲವಾಗಿದೆ. ಹೀಗಾಗಿ ಅಲ್ಲಮ ಪ್ರಭುಗಳ ‘ವೇದವೆಂಬುದು ಓದಿನ ಮಾತು, ಶಾಸ್ತ್ರವೆಂಬುದು ಸಂತೆಯ ಸುದ್ದಿ, ಪುರಾಣವೆಂಬುದು ಪುಂಡರಗೋಷ್ಠಿ...’ ಎಂಬ ವಚನವು ಪ್ರಸ್ತುತ ಸಂದರ್ಭಕ್ಕೆ ಬಹಳ ಮುಖ್ಯವಾದ ಚಿಂತನೆಯಾಗಿ ಕಂಡುಬರುತ್ತದೆ. ಬ್ರಾಹ್ಮಣ್ಯದ ಸಂಕೋಲೆಗೆ ಸಿಲುಕಿ ನರಳುತ್ತಿರುವ ಭಾರತೀಯರ (ಬ್ರಾಹ್ಮಣರನ್ನೂ ಸೇರಿಸಿಕೊಂಡು) ಪಾಲಿಗೆ ಸಮಾನತೆ ಹಾಗೂ ಮುಕ್ತ ವಾತಾವರಣ ಗಗನಕುಸುಮವೇ ಆದೀತು ಎಂದು ಭಾವಿಸಲಿಕ್ಕೆ ಗ.ನಾ.ಭಟ್ಟರ ಲೇಖನವೂ ಕಾರಣವಾಗಿ ಕಂಡುಬರುತ್ತದೆ ಎಂದು ಹೇಳಲು ವಿಷಾದವಾಗುತ್ತದೆ.
-ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.