ಅಡುಗೆ ಮನೆಯ ಲೈಟರ್ನಿಂದ ಹಿಡಿದು ಸಂಕೀರ್ಣ ವೈದ್ಯಕೀಯ ಚಿಕಿತ್ಸೆಗಳವರೆಗೆ ವಿಜ್ಞಾನದ ಅಳವಡಿಕೆ ಇದೆ. ಬದುಕಿನ ಎಲ್ಲಾ ರಂಗಗಳಲ್ಲೂ ಆಧುನಿಕ ತಂತ್ರಜ್ಞಾನ ಆಧಾರಿತ ಸಲಕರಣೆಗಳ ಬಳಕೆ ವ್ಯಾಪಕವಾಗಿದೆ. ಈ ವೈಜ್ಞಾನಿಕ ಪ್ರಗತಿಗಳಲ್ಲಿ ಮೂಲ ವಿಜ್ಞಾನದ ತತ್ವ ಮತ್ತು ಕ್ರಮಗಳಲ್ಲದೆ, ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರವೂ ಕಾಣಿಸುತ್ತಿದೆ.

‘ಕ್ವಾಂಟಮ್ ಮೆಕ್ಯಾನಿಕ್ಸ್’ನ 100 ವರ್ಷಗಳನ್ನು ಆಚರಿಸಲು ಮತ್ತು ಅದರ ಅನ್ವಯಗಳ ಬಗ್ಗೆ ಅರಿವು ಮೂಡಿಸಲು 2025 ಅನ್ನು ‘ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನದ ಅಂತರರಾಷ್ಟ್ರೀಯ ವರ್ಷ’ ಎಂದು ಘೋಷಿಸಲಾಗಿದೆ. ಅಂದಹಾಗೆ, ಕ್ವಾಂಟಮ್ ತಂತ್ರಜ್ಞಾನ ಎಂದರೆ ಏನು? ಮೂಲ ವಿಜ್ಞಾನಕ್ಕಿಂತ ಇದು ಹೇಗೆ ಭಿನ್ನ?

ಕ್ವಾಂಟಮ್ ವಿಜ್ಞಾನವು ಮೂಲ ವಿಜ್ಞಾನದ ಒಂದು ಭಾಗ; 20ನೇ ಶತಮಾನದ ಆರಂಭದಲ್ಲಿ ರೂಪುಗೊಂಡ ಒಂದು ಸಂಕೀರ್ಣ ವೈಜ್ಞಾನಿಕ ಕ್ಷೇತ್ರ. ಇದು ಸಾಂಪ್ರದಾಯಿಕ ಭೌತ ವಿಜ್ಞಾನವು ವಿವರಿಸದ ಪರಮಾಣು ಮತ್ತು ಉಪ– ಪರಮಾಣು ಮಟ್ಟದಲ್ಲಿ ಕಣಗಳ ವರ್ತನೆಯನ್ನು ಅರ್ಥ ಮಾಡಿಸುತ್ತದೆ. ಕ್ವಾಂಟಮ್ ವಿಜ್ಞಾನವನ್ನು ಅತಿ ಚಿಕ್ಕ ಕಣಗಳ ವಿಚಿತ್ರ ಲೋಕ ಎನ್ನಬಹುದು. ಪರಮಾಣುಗಳು, ಎಲೆಕ್ಟ್ರಾನ್
ಗಳು ಮತ್ತು ಫೋಟಾನ್ಗಳಂತಹ ಅತಿ ಚಿಕ್ಕ ಕಣಗಳು ಒಂದೇ ಸಮಯದಲ್ಲಿ ಎರಡು ಸ್ಥಳಗಳಲ್ಲಿ ಇದ್ದಂತೆ ಭಾಸವಾಗುತ್ತವೆ! ವಿಪರೀತ ದೂರದಲ್ಲಿದ್ದರೂ ಒಂದಕ್ಕೊಂದು ಅದೃಶ್ಯ ಸಂಪರ್ಕದಲ್ಲಿರುತ್ತವೆ ಮತ್ತು ಅವುಗಳನ್ನು ಅಳೆದಾಗ ಮಾತ್ರ ನೈಜ ರೂಪವನ್ನು ಪ್ರಕಟಪಡಿಸುತ್ತವೆ.

ಕ್ವಾಂಟಮ್ ವಿಜ್ಞಾನವು ಐದು ಪ್ರಮುಖ ಪರಿಕಲ್ಪನೆ ಗಳ ಮೇಲೆ ರೂಪುಗೊಂಡಿದೆ. ಅವುಗಳೆಂದರೆ: ಶಕ್ತಿಯು ನಿರಂತರವಾಗಿ ಹರಿಯುವುದಿಲ್ಲ, ಬದಲಿಗೆ ನಿರ್ದಿಷ್ಟ ‘ಕ್ವಾಂಟಾ’ ಅಥವಾ ಪ್ಯಾಕೆಟ್ಗಳಲ್ಲಿ ಇರುತ್ತದೆ. ಫೋಟಾನ್ ಮತ್ತು ಎಲೆಕ್ಟ್ರಾನ್ಗಳಂತಹ ಉಪ– ಪರಮಾಣು ಕಣಗಳು ಕೆಲವೊಮ್ಮೆ ತರಂಗದಂತೆ, ಕೆಲವೊಮ್ಮೆ ಕಣದಂತೆ ವರ್ತಿಸುತ್ತವೆ. ಒಂದು ಕ್ವಾಂಟಮ್ ಕಣವು ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಿತಿ ಮತ್ತು ಶಕ್ತಿಗಳಲ್ಲಿ ಇರಬಲ್ಲ ಸಾಮರ್ಥ್ಯ ಪಡೆದಿರುತ್ತದೆ. ಎರಡು ಅಥವಾ ಹೆಚ್ಚು ಕ್ವಾಂಟಮ್ ಕಣಗಳು ಎಷ್ಟೇ ದೂರವಿದ್ದರೂ, ಪರಸ್ಪರ ಸಂಬಂಧ ಹೊಂದಿರುತ್ತವೆ ಮತ್ತು ಒಂದು ಕಣದ ನಿರ್ದಿಷ್ಟ ಸ್ಥಾನ ಮತ್ತು ವೇಗವನ್ನು ಏಕಕಾಲದಲ್ಲಿ ನಿಖರವಾಗಿ ಅಳೆಯಲು ಸಾಧ್ಯವಿಲ್ಲ.

ಸ್ಮಾರ್ಟ್ಫೋನ್, ಟಿ.ವಿ., ಎಲ್ಇಡಿ ದೀಪಗಳಲ್ಲಿರುವ ಸೆಮಿಕಂಡಕ್ಟರ್ಗಳು ಕ್ವಾಂಟಮ್ ಮೆಕ್ಯಾನಿಕ್ಸ್ನ ತತ್ವಗಳನ್ನು ಆಧರಿಸಿ ಕೆಲಸ ಮಾಡುತ್ತವೆ. ಸಿಲಿಕಾನ್ ಚಿಪ್ಗಳಲ್ಲಿ ಎಲೆಕ್ಟ್ರಾನ್ಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ಕ್ವಾಂಟಮ್ ವಿಜ್ಞಾನ ವಿವರಿಸುತ್ತದೆ. ‘ಕ್ಯು ಎಲ್ಇಡಿ’ ಟಿ.ವಿಗಳು, ಕ್ವಾಂಟಮ್ ಡಾಟ್ಗಳೆಂಬ ಅತಿಸಣ್ಣ ಸೆಮಿಕಂಡಕ್ಟರ್ ನ್ಯಾನೊ ಕಣಗಳನ್ನು ಬಳಸುತ್ತವೆ. ಈ ಕಣಗಳು ತಮ್ಮ ಗಾತ್ರಕ್ಕನುಗುಣವಾಗಿ ವಿಭಿನ್ನ ಬಣ್ಣಗಳ ಬೆಳಕನ್ನು ಹೊರಸೂಸುತ್ತವೆ. ಇದರಿಂದಾಗಿ ಪರದೆ ಮೇಲೆ ಹೆಚ್ಚು ಪ್ರಕಾಶಮಾನವಾದ ಮತ್ತು ನಿಖರವಾದ ಬಣ್ಣಗಳು ಮೂಡುತ್ತವೆ.

ವೈದ್ಯಕೀಯ ಕ್ಷೇತ್ರದಲ್ಲಿ ಎಂಆರ್ಐ ಯಂತ್ರಗಳು ಮಾನವ ದೇಹದ ಒಳಗಿನ ವಿವರವಾದ ಚಿತ್ರಗಳನ್ನು ಪಡೆಯಲು ಕ್ವಾಂಟಮ್ ವಿಜ್ಞಾನದ ತತ್ವಗಳನ್ನು ಬಳಸುತ್ತವೆ. ಈಗ ಅಭಿವೃದ್ಧಿ ಪಡಿಸಲಾಗು ತ್ತಿರುವ ಹೆಚ್ಚು ಸೂಕ್ಷ್ಮವಾದ ಕ್ವಾಂಟಮ್ ಸಂವೇದಕಗಳು ದೇಹದೊಳಗಾಗುವ ಅತಿಸಣ್ಣ ಜೈವಿಕ ಬದಲಾವಣೆ, ಮರೆಗುಳಿತನ (ಅಲ್ಝೀಮರ್ಸ್), ಪಾರ್ಕಿನ್ಸನ್ ರೀತಿಯ ನರರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ನೆರವಾಗಲಿವೆ. ಕೃಷಿ ಕ್ಷೇತ್ರದಲ್ಲಿ, ಸೂಕ್ಷ್ಮ ಹವಾಮಾನ ಮಾದರಿಗಳನ್ನು ಊಹಿಸಲು, ಮಣ್ಣಿನ ಪೋಷಕಾಂಶಗಳ ಬಳಕೆಯನ್ನು ಉತ್ತಮಗೊಳಿಸಲು, ಹೊಸ ರೋಗನಿರೋಧಕ ಬೆಳೆ ತಳಿಗಳನ್ನು ವಿನ್ಯಾಸಗೊಳಿಸಲು ಮತ್ತು ಕೃಷಿ ನಿರ್ವಹಣೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತವೆ.

ಸೈಬರ್ ಸೆಕ್ಯುರಿಟಿ, ಆನ್ಲೈನ್ ಬ್ಯಾಂಕಿಂಗ್,ಇ–ಮೇಲ್ ಸಂವಹನ ಮತ್ತು ಇತರ ಡಿಜಿಟಲ್ ಡೇಟಾವನ್ನು ರಕ್ಷಿಸಲು ಬಳಸುವ ಎನ್ಕ್ರಿಪ್ಷನ್ (ಗೌಪ್ಯ ಸಂಕೇತೀಕರಣ) ವಿಧಾನಗಳನ್ನು ಸಮರ್ಥವಾಗಿ ನಿಭಾಯಿಸಲು, ‘ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್’ ತಂತ್ರಜ್ಞಾನದಲ್ಲಿ, ಮಾಹಿತಿಯನ್ನು ಎನ್ಕ್ರಿಪ್ಟ್ ಮಾಡಲು ಬಳಸುವ ‘ಕೀ’ಯನ್ನು ಕ್ವಾಂಟಮ್ ಕಣಗಳ ರೂಪದಲ್ಲಿ ರವಾನಿಸಲಾಗುತ್ತದೆ. ಯಾರಾದರೂ ಈ ಕೀಲಿಯನ್ನು ಕದಿಯಲು ಪ್ರಯತ್ನಿಸಿದರೆ, ಕ್ವಾಂಟಮ್ ಭೌತ ವಿಜ್ಞಾನದ ನಿಯಮಗಳ ಪ್ರಕಾರ ಕಣಗಳ ಸ್ಥಿತಿ ಬದಲಾಗುತ್ತದೆ ಮತ್ತು ಕಳ್ಳತನ ತಕ್ಷಣವೇ ಪತ್ತೆಯಾಗುತ್ತದೆ. ಇದು ಹ್ಯಾಕಿಂಗ್ ಅಥವಾ ಕದ್ದಾಲಿಕೆಯನ್ನು ತಡೆಯುತ್ತದೆ ಮತ್ತು ಡೇಟಾ ಸಂವಹನವನ್ನು ಅಭೇದ್ಯವನ್ನಾಗಿಸುತ್ತದೆ. ಡಿಜಿಟಲ್ ಯುಗದಲ್ಲಿ ನಮ್ಮ ದೈನಂದಿನ ಚಟುವಟಿಕೆಗಳಿಗೆ ಅತಿಹೆಚ್ಚು ಭದ್ರತೆ ಸಿಗುತ್ತದೆ.

ಕ್ವಾಂಟಮ್ ಕಂಪ್ಯೂಟರ್ಗಳು ಅತ್ಯಂತ ಸಂಕೀರ್ಣ ಗಣನೆಗಳನ್ನು ಕೆಲವೇ ಸೆಕೆಂಡ್ಗಳಲ್ಲಿ ನಿರ್ವಹಿಸುತ್ತವೆ. ಇದರಿಂದಾಗಿ, ಹೊಸ ಮತ್ತು ಹೆಚ್ಚು ಪರಿಣಾಮಕಾರಿ ಔಷಧಗಳ ವಿನ್ಯಾಸ, ಕಡಿಮೆ ಇಂಧನದಲ್ಲಿ ಹೆಚ್ಚು ದೂರ ಚಲಿಸುವ ವಾಹನ ಬ್ಯಾಟರಿ ಅಭಿವೃದ್ಧಿ, ಹವಾಮಾನ ಮಾದರಿಗಳನ್ನು ಹೆಚ್ಚು ನಿಖರವಾಗಿ ಊಹಿಸುವುದು, ವಾಹನಗಳು ಸರಾಗವಾಗಿ ಓಡಾಡಲು ದಟ್ಟಣೆ ಇಲ್ಲದ ಮಾರ್ಗಗಳನ್ನು ನಿರ್ಧರಿಸುವುದು, ವಿದ್ಯುತ್ ಗ್ರಿಡ್ಗಳನ್ನು ಹೆಚ್ಚು ದಕ್ಷವಾಗಿಸುವುದು, ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿ ಆಗಿಸುವುದು ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ಅಪಾಯಗಳನ್ನು ನಿರ್ವಹಿಸಲು ಅಗತ್ಯವಾದ ಮುನ್ಸೂಚನೆ, ಮುನ್ನೆಚ್ಚರಿಕೆ ಸಾಧ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.