ಇತ್ತೀಚೆಗೆ ಮದುವೆ ಸಮಾರಂಭವೊಂದರಲ್ಲಿ ಭೇಟಿಯಾದ ಪರಿಚಿತರೊಬ್ಬರು ತಮ್ಮ ಬದುಕಿನ ಸಾಧನೆಗಳ ಕುರಿತು ಹೇಳಿಕೊಂಡರು. ನಿವೃತ್ತಿಯ ಅಂಚಿನಲ್ಲಿರುವ ಅವರು ಮಾತಿನ ನಡುವೆ ನನಗೆ ಹೇಳಿದ್ದಿಷ್ಟು- ‘80x40 ಅಳತೆಯ ದೊಡ್ಡ ಸೈಟಿನಲ್ಲಿ ಮೂರಂತಸ್ತಿನ ಮನೆ ಕಟ್ಟಿಸಿದ್ದೀನಿ, ಲಂಚ ಕೊಟ್ಟು ಮಗನಿಗೆ ಸರ್ಕಾರಿ ನೌಕರಿ ಕೊಡಿಸಿದ್ದೀನಿ, ಬೀಗರ ನಿರೀಕ್ಷೆಗಿಂತ ಹೆಚ್ಚು ವರದಕ್ಷಿಣೆ ಕೊಟ್ಟು ಮಗಳ ಮದುವೆ ಮಾಡಿದ್ದೀನಿ, ಹೆಂಡತಿ ಹೆಸರಲ್ಲಿ ಮೂರು ಸೈಟುಗಳಿವೆ, ಊರಿನಲ್ಲಿ ಹತ್ತೆಕರೆ ತೋಟ ಮಾಡಿದ್ದೀನಿ. ಮನೆ ಎದುರು ಎರಡು ದುಬಾರಿ ಬೆಲೆಯ ಕಾರುಗಳಿವೆ. ಅಂತೂ ಬದುಕು ಪರಿಪೂರ್ಣವಾಯಿತು ನೋಡಿ’. ಹೀಗೆ ಹೇಳುವಾಗ ಅವರ ಮುಖದಲ್ಲಿ ಧನ್ಯತೆಯ ಭಾವ ಇತ್ತು.

ಅವರ ಸಾಧನೆ ಕೇಳಿ ದಂಗಾಗಿ ಹೋದೆ. ಮಾತಿನುದ್ದಕ್ಕೂ ಭೌತಿಕ ಸಂಗತಿಗಳೇ ಮುನ್ನೆಲೆಗೆ ಬಂದವು.
ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಶ್ರೀಯುತರು ತಮ್ಮ ಅಕಡೆಮಿಕ್ ಸಾಧನೆ
ಗಳ ಬಗ್ಗೆ ಹೇಳಿಕೊಳ್ಳಬಹುದೆಂದು ಒಂದಿಷ್ಟು ಹೊತ್ತು ಕಾದುಕುಳಿತ ನನಗೆ, ಅವರಿಂದ ಅಂಥ ಯಾವ ಪ್ರತಿಕ್ರಿಯೆಯೂ ಬಾರದಿದ್ದಾಗ ನಿರಾಸೆಯಾಯಿತು. ಬೀಳ್ಕೊಡುವಾಗ, ‘ಸದ್ಯದಲ್ಲೇ ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳು ನನಗೆ ಅಭಿನಂದನಾ ಗ್ರಂಥವನ್ನು ಸಮರ್ಪಿಸುತ್ತಿದ್ದಾರೆ. ಆ ಕಾರ್ಯಕ್ರಮಕ್ಕೆ ಬರಬೇಕು’ ಎಂದು ನನ್ನನ್ನು ಆಹ್ವಾನಿಸಿದರು.

ಬದುಕಿನಲ್ಲಿ ಸಾಧನೆ ಎನ್ನುವುದು ಮನೆ, ಸೈಟು, ಬ್ಯಾಂಕ್ ಬ್ಯಾಲೆನ್ಸ್, ಚಿನ್ನಾಭರಣಗಳ ರೂಪದಲ್ಲಿ ಢಾಳಾಗಿ ಕಾಣಿಸಬೇಕು ಎಂದು ಮನುಷ್ಯರು ಅಪೇಕ್ಷಿಸುತ್ತಿದ್ದಾರೆ. ಅದಕ್ಕೆಂದೇ ಇಲ್ಲಿ ಆಕಾಶದೆತ್ತರಕ್ಕೆ ಮನೆ
ಗಳು ನಿರ್ಮಾಣಗೊಳ್ಳುತ್ತವೆ, ಸೈಟುಗಳ ಬೆಲೆ ಗಗನಕ್ಕೇರುತ್ತದೆ, ಚಿನ್ನಾಭರಣ ಖರೀದಿ ಬಡವರಿಗೆ ಕನಸಿನ ಮಾತಾಗುತ್ತದೆ. ‘ನಾನು ವಸ್ತುಗಳನ್ನು ಪ್ರೀತಿಸುತ್ತೇನೆ, ಮನುಷ್ಯರನ್ನು ಉಪಯೋಗಿಸುತ್ತೇನೆ’ ಎನ್ನುವುದು ಬದುಕಿನ ಧ್ಯೇಯವಾಕ್ಯವಾಗಿದೆ. ಸಮಾಜ ಕೂಡ ಸಾಧಕರನ್ನು ಗುರುತಿಸಿ ಗೌರವಿಸುವಲ್ಲಿ ಎಡವುತ್ತಿದೆ. ಜಾತಿ, ಧರ್ಮ, ಹಣ ಮತ್ತು ತೋಳ್ಬಲದ ಎದುರು ನಿಜವಾದ ಬೌದ್ಧಿಕ ಸಾಧಕರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ.

ಬೌದ್ಧಿಕವೆಂದು ಪರಿಗಣಿತವಾಗಿರುವ ಕ್ಷೇತ್ರಗಳಲ್ಲೂ ಭೌತಿಕ ಸಾಧನೆಯ ವ್ಯಾಮೋಹ ಕಾಡುತ್ತಿದೆ. 95 ಪುಸ್ತಕ
ಗಳನ್ನು ಪ್ರಕಟಿಸಿರುವ ಸಾಹಿತಿ ಮಿತ್ರರೊಬ್ಬರಿಗೆ ತಮ್ಮ ಈ ಸಾಹಿತ್ಯದ ಸಾಧನೆ ನೂರನ್ನು ಮುಟ್ಟಲಿ ಎನ್ನುವ ಆಸೆ. ಈ ಸಂಖ್ಯಾತ್ಮಕ ಸಾಧನೆ ಎದುರು ಗುಣಾತ್ಮಕತೆ ಮೂಲೆಗುಂಪಾಗಿದೆ. ದೈಹಿಕ ವಯೋಮಾನವನ್ನೇ ಮಾನದಂಡವಾಗಿ ಇಟ್ಟುಕೊಂಡು ಅಭಿನಂದನೆಗೆ ಒಳಗಾಗಲು ಹಪಹಪಿಸುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಅನೇಕ ಪ್ರಕಾಶನ ಸಂಸ್ಥೆಗಳು ಪ್ರತಿವರ್ಷ ಸಾಮೂಹಿಕ ವಿವಾಹದ ರೀತಿ ನೂರು, ಇನ್ನೂರು ಪುಸ್ತಕಗಳನ್ನು ಪ್ರಕಟಿಸುತ್ತಿವೆ. ಈ ಎಷ್ಟೋ ಪುಸ್ತಕಗಳು ಸಾರ್ವಜನಿಕ ಗ್ರಂಥಾಲಯಗಳ ಅಲ್ಮೆರಾಗಳಿಗೆ ಶೋಭೆ ತರುತ್ತಿವೆಯೇ ವಿನಾ ಓದುಗನ ಏಕಾಂತಕ್ಕೆ ಲಗ್ಗೆ ಇಡುತ್ತಿಲ್ಲ. ಹಾಡುಗಾರ ಕಣ್ಮುಚ್ಚಿ ಮೈಮರೆತು ಹಾಡಿದರೆ ಅದು ತಾದಾತ್ಮ್ಯ ಅನಿಸಿಕೊಳ್ಳುತ್ತದೆ. ಪ್ರೇಕ್ಷಕರನ್ನು ಆಕರ್ಷಿಸಲೆಂದು ಕಣ್ಬಿಟ್ಟು ಆಂಗಿಕ ಅಭಿನಯಕ್ಕೆ
ಇಳಿದರೆ ಆಗ ಸಂಗೀತ ಎನ್ನುವುದು ಭೌತಿಕ ಪ್ರದರ್ಶನವಾಗಿ ಪರಿಣಮಿಸುತ್ತದೆ.

ಶಿಕ್ಷಣ ಕ್ಷೇತ್ರ ಕೂಡ ಇಂದು ಈ ಭೌತಿಕ ಸಾಧನೆಯ ವ್ಯಾಮೋಹದಿಂದ ಕಲುಷಿತಗೊಂಡಿದೆ. ಓದು, ಬೋಧನೆ, ಸಂಶೋಧನೆಯಂತಹ ಬೌದ್ಧಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಾದ ಶಿಕ್ಷಕರು ಹಣಕಾಸಿನ ಲೇವಾದೇವಿಯಂತಹ ವಹಿವಾಟುಗಳಲ್ಲಿ ನಿರತರಾಗಿದ್ದಾರೆ. ಪ್ರಾಧ್ಯಾಪಕರ ಸಂಶೋಧನಾ ಬರವಣಿಗೆ ಕೂಡ ಹುದ್ದೆ ಮತ್ತು ವೇತನ ಬಡ್ತಿಯಂತಹ ಭೌತಿಕ ಪ್ರಗತಿಗೆ ಸಿಮೀತವಾಗುತ್ತಿರುವುದು ದುರದೃಷ್ಟಕರ.

ಬದುಕಿನ ಕ್ಷಣಿಕತೆಯ ಅರಿವಿಲ್ಲದೆ, ಚಿರಂಜೀವಿತ್ವದ ಭಾವನೆಯನ್ನು ಅಂತರ್ಗತಗೊಳಿಸಿಕೊಂಡು, ಬದುಕು ಶಾಶ್ವತ ಎನ್ನುವಂತೆ ಇಂದಿನ ಮನುಷ್ಯ ವರ್ತಿಸುತ್ತಿದ್ದಾನೆ. ಆತ್ಮಾವಲೋಕನಕ್ಕಾಗಲೀ ಆತ್ಮವಿಮರ್ಶೆಗಾಗಲೀ ಇಳಿಯುವಷ್ಟು ವ್ಯವಧಾನ ಇಂದಿನವರಿಗೆ ಇಲ್ಲ. ಪರಿಣಾಮವಾಗಿ, ಬದುಕಿನ ಪ್ರಗತಿ- ಸಾಧನೆ ಎನ್ನುವುದು ನಗ, ನಾಣ್ಯ, ಮನೆ, ತೋಟದಂತಹ ಭೌತಿಕ ವಸ್ತುಗಳ ರೂಪದಲ್ಲೇ ಗೋಚರಿಸುತ್ತಿದೆ.

ಯಶವಂತ ಚಿತ್ತಾಲರು ಅಸ್ತಿತ್ವವಾದಿ ದಾರ್ಶನಿಕ ಮಾರ್ಟಿನ್ ಹೈಡೆಗರ್ ಸಿದ್ಧಾಂತವನ್ನು ವಿವರಿಸುತ್ತ, ‘ಮನುಷ್ಯ ತನ್ನ ಅಸ್ತಿತ್ವದ ಅಸಂಖ್ಯ ಸಾಧ್ಯತೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಾಗ ತನ್ನ ಸಾವು ಕೂಡ ಈ ಎಲ್ಲ ಸಾಧ್ಯತೆಗಳಲ್ಲಿ ಒಂದು ಮಾತ್ರವಲ್ಲ, ಎಲ್ಲ ಸಾಧ್ಯತೆಗಳಲ್ಲಿ ಇದೊಂದೇ ನಿಶ್ಚಿತವಾದದ್ದು ಎಂಬುದನ್ನು ಮನ
ಗಾಣುತ್ತಾನೆ. ತನ್ನ ಸಾವನ್ನು ತಾನೇ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ಯಾವಾಗ ಬರುತ್ತದೋ ಆಗ ಮಾತ್ರ ಎಲ್ಲವನ್ನೂ ನಿಚ್ಚಳವಾಗಿ, ಸ್ವಚ್ಛವಾಗಿ ನೋಡುವ ದೃಷ್ಟಿಯುಳ್ಳವನಾಗುತ್ತಾನೆ. ಇಂಥ ದೃಷ್ಟಿಯ ಮೂಲಕವೇ ಲಕ್ಷ್ಯಕ್ಕೆ ಬರುವ ತನ್ನ ಬದುಕಿನ ಅಪರಿಪೂರ್ಣತೆ, ಕುಂದುಕೊರತೆಗಳ ಕುರಿತು ತೀವ್ರ ಅಸಮಾ
ಧಾನಕ್ಕೆ, ಪಾಪಪ್ರಜ್ಞೆಗೆ ಒಳಗಾಗುತ್ತಾನೆ. ಮನುಷ್ಯನ ಪ್ರಜ್ಞೆಯ ಬೆಳವಣಿಗೆಯಲ್ಲಿ ಸಾವಿಗೆ ಅತ್ಯಂತ ಮಹತ್ವದ ಸ್ಥಾನವಿದ್ದುದನ್ನು ಹೈಡೆಗರ್‌ನ ದರ್ಶನ ಗುರುತಿಸುತ್ತದೆ’ ಎಂದಿದ್ದಾರೆ.

ಹೈಡೆಗರ್ ಪ್ರಕಾರ, ಬದುಕಿನ ಅಪರಿಪೂರ್ಣತೆ ಎನ್ನುವುದು ಭೌತಿಕವಲ್ಲ. ಆತ ಹೇಳುವುದು ಸಾವಿನ ಪ್ರಜ್ಞೆಯಿರುವ ಮನುಷ್ಯ ತನ್ನ ಬದುಕಿನ ಬೌದ್ಧಿಕ ಅಪರಿಪೂರ್ಣತೆ ಕುರಿತು ಚಿಂತಿಸುತ್ತಾನೆ ಎಂದು. ದುರದೃಷ್ಟವೆಂದರೆ, ಬಹಿರಂಗದ ಬದುಕಿಗೆ ಆದ್ಯತೆ ನೀಡುತ್ತಿರುವ ಮನುಷ್ಯ ತನ್ನ ಅಂತರಂಗದ ಪಿಸುಧ್ವನಿಯನ್ನು ಕೇಳಿಸಿಕೊಳ್ಳದಷ್ಟು ಅಸಂವೇದಿ ಆಗುತ್ತಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.