`ಬಸವಣ್ಣನವರು ಮಾಂಸಾಹಾರಿಗಳೊಂದಿಗೆ ಊಟ ಮಾಡುವುದನ್ನು ನಿಷೇಧಿಸಿದ್ದಾರೆ' ಎಂದು ಪೇಜಾವರ ಶ್ರೀಗಳು ನೀಡಿದ್ದ ಹೇಳಿಕೆ ಸರಿಯಲ್ಲ ಎಂಬುದನ್ನು `ಸಂಗತ' (ಜೂನ್13)ದಲ್ಲಿ ಚರ್ಚಿಸಿ ಲೇಖನವನ್ನು ಬರೆದಿದ್ದೆ. ಈ ಲೇಖನಕ್ಕೆ ಪೇಜಾವರ ಶ್ರೀಗಳಾದ ವಿಶ್ವೇಶತೀರ್ಥರು `ವಾಚಕರ ವಾಣಿ'ಗೆ ಪತ್ರ (ಜೂನ್ 20) ಬರೆದು ಪ್ರತಿಕ್ರಿಯಿಸ್ದ್ದಿದಾರೆ.

ಅದರಲ್ಲಿ ಬಸವಣ್ಣನವರ ಅಂಕಿತದೊಂದಿಗೆ ವಚನವೊಂದನ್ನು ಉಲ್ಲೇಖಿಸುತ್ತ ಬಸವಣ್ಣನವರು ಮಾಂಸಾಹಾರಿಗಳನ್ನು ಕಟುವಾಗಿ ನಿಂದಿಸಿದ್ದಾರೆ ಎಂದಿದ್ದಾರೆ. ಪೇಜಾವರ ಶ್ರಿಗಳು ನೀಡಿದ ವಚನ ಪ್ರಕ್ಷಿಪ್ತ ವಾದುದೆಂಬುದು ಶತಃಸಿದ್ಧ. ಏಕೆಂದರೆ ಈ ವಚನವು ಈವರೆಗೂ ಪ್ರಕಟವಾದ ಬಸವಣ್ಣನವರ ಯಾವೊಂದು ವಚನ ಸಂಪುಟದ್ಲ್ಲಲೂ ಇಲ್ಲ.

ಬಸವಣ್ಣನವರ ಸಮಗ್ರ ವಚನಗಳನ್ನು ಮೊದಲು ಪ್ರಕಟಿಸಿದ ಫ.ಗು ಹಳಕಟ್ಟಿಯವರ `ವಚನ ಶಾಸ್ತ್ರಸಾರ' ಸಂಗ್ರಹದಲ್ಲಾಗಲಿ, ಆರ್.ಸಿ. ಹಿರೇಮಠರು ಸಂಪಾದಿಸಿರುವ `ಭಕ್ತಿ ಭಂಡಾರಿ ಬಸವಣ್ಣನವರ ವಚನಗಳು' ಕೃತಿಯಲ್ಲಾಗಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಎಂ.ಎಂ ಕಲಬುರ್ಗಿಯವರು ಸಂಪಾದಿಸಿ ಪ್ರಕಟಿಸಿರುವ ಕೃತಿಯಲ್ಲಾಗಲಿ ಈ ವಚನ ಇಲ್ಲ.

ಈ ವಚನದಲ್ಲಿ ಉಲ್ಲೇಖಿತವಾಗಿರುವ `ಕಿಂ ಮಾಂಸಂ ಕಾ ಶಿವೇ ಭಕ್ತಿಃ' ಎಂಬ ಶ್ಲೋಕವು ಬಸವಣ್ಣನವರ ಯಾವುದೇ ವಚನದಲ್ಲಿ ಕಂಡುಬರುವುದಿಲ್ಲ. ನಾನು ಈ ವಚನ ಕುರಿತು ನಾಡಿನ ಹಲವು ವಿದ್ವಾಂಸರಲ್ಲಿ ಚರ್ಚಿಸಿದೆ. ಸಮಗ್ರ ಸಂಪುಟಗಳನ್ನು ಮತ್ತೆ ಮತ್ತೆ ತಿರುವಿ ಹಾಕಿದೆ. `ಶೂನ್ಯ ಸಂಪಾದನೆ'ಗಳನ್ನು ಜಾಲಾಡಿದೆ. ಎಲ್ಲಿಯೂ ಸ್ವಾಮೀಜಿಗಳು ನೀಡಿದ ವಚನ ಸಿಗಲೇ ಇಲ್ಲ.

ಅಷ್ಟೇ ಏಕೆ ವಿದ್ವಾಂಸರೊಬ್ಬರು ಮೊಬೈಲ್ ಮೂಲಕ ನೇರವಾಗಿ ಸ್ವಾಮೀಜಿಗಳನ್ನೆ ಸಂಪರ್ಕಿಸಲು ಪ್ರಯತ್ನಪಟ್ಟರು. ಅವರ ಖಾಸಗಿ ಸಹಾಯಕರು ಮೊಬೈಲಿನಲ್ಲಿ ಮಾತಾಡುತ್ತ ನಾವು ವಚನದ ಮೂಲ ಕೇಳಿದಾಗ ಹಾರಿಕೆಯ ಉತ್ತರ ಕೊಟ್ಟರು.' ನಮ್ಮಂದಿಗೆ ಮುಖತಃ ಭೇಟಿಯಾದರೆ ಇನ್ನೂ ಹೆಚ್ಚಿನ ವಚನಗಳನ್ನು ತೋರಿಸುತ್ತೇನೆ' ಎಂದು ಸ್ವಾಮೀಜಿಯವರು ಪತ್ರದಲ್ಲಿ ಬರೆದಿರುವುದರಿಂದ `ದಯವಿಟ್ಟು ಸ್ವಾಮೀಜಿಗಳೊಂದಿಗೆ ಮಾತಾಡಲು ಅವಕಾಶ ಕೊಡಿ' ಎಂದು ಕೇಳಿಕೊಂಡರೂ ಅವರು ನಿರಾಕರಿಸಿದರು.

ಸ್ವಾಮೀಜಿಯವರು ತಾವು ಉದ್ಧರಿಸಿರುವ ವಚನಕ್ಕೆ ಆಧಾರ ನೀಡಬೇಕಿತ್ತಲ್ಲವೆ? ಸ್ವಾಮೀಜಿಗಳು ನೀಡಿದ ವಚನದಲ್ಲಿ ಬಳಕೆಯಾದ ಭಾಷೆಯೂ ವಚನಕಾರರದಲ್ಲ. ಅಲ್ಲಿ ಕಾಣಿಸಿಕೊಂಡಿರುವ `ಹಿಂದೆ, ಬಿಡದಿದ್ದವರು, ತತ್ತ, ಕಾಣಿ' ಮುಂತಾದ ಶಬ್ದಪ್ರಯೋಗ ಮಧ್ಯಕಾಲೀನ ಕನ್ನಡದಲ್ಲಿ ಇಲ್ಲ. ಬಸವಾದಿ ಶರಣರು `ಬಿಡದಿದ್ದವರು' ಎಂಬ `ಉ'ಕಾರಾಂತ ಕ್ರಿಯಾಪದಗಳನ್ನು ಬಳಸಿದ್ದಿಲ್ಲ. ಅವರು ಸಾಮಾನ್ಯವಾಗಿ `ಬಿಡದಿದ್ದವರ, ನೋಡದವರ' ಎಂಬ `ಅ'ಕಾರಾಂತ ಪದಗಳನ್ನು ಬಳಸಿದ್ದುಂಟು.

ಮಧ್ಯಕಾಲೀನ `ಅ'ಕಾರಾಂತ ಧಾತುಗಳೆಲ್ಲ `ಉ'ಕಾರಾಂತಗಳಾಗಿ ಪಲ್ಲಟಗೊಂಡದ್ದು ಹೊಸಗನ್ನಡದಲ್ಲಿ ಮಾತ್ರ ಕಾಣಿಸುವುದುಂಟು. ಅದರಂತೆ ಅವರು `ಕಾಣಾ, ಕಂಡಾ , ಕೇಳಯ್ಯೊ ನೋಡಯ್ಯೊ' ಎಂಬ ದೀರ್ಘೀಕರಣ ಪ್ರಯೋಗ ಬಳಸಿದ್ದಾರೆ ಹೊರತು ಅವರ ವಚನಗಳಲ್ಲಿ ಎಲ್ಲಿಯೂ `ಕಾಣಿ' ಎಂಬ ಪ್ರಯೋಗವಿಲ್ಲ.

ಅದರಂತೆ `ಹಿಂದೆ, ತತ್ತ ` ಎಂಬ ಪದಗಳು ಕೂಡಾ ವಚನದ ಭಾಷೆಗೆ ಸಲ್ಲುವುದಿಲ್ಲ. ಹೀಗಾಗಿ ಶ್ರಿಗಳು ನೀಡಿದ ವಚನವು ಅನ್ಯಸೃಷ್ಟಿ ಎಂಬುದು ವಚನ ಸಾಹಿತ್ಯ ಓದಿದ ಯಾರಿಗಾದರೂ ಮೇಲ್ಪದರಿಗೆ ಅನಿಸದೆ ಇರದು. ಅಷ್ಟಕ್ಕೂ ಪಂಕ್ತಿಭೇದವನ್ನು ಸಮರ್ಥಿಸಿಕೊಳ್ಳಲು ವೃಥಾ ಬಸವಣ್ಣನವರನ್ನು ಎಳೆದು ತರುತ್ತಿರುವುದೇಕೆ? ಇಂಥ ಪ್ರವೃತ್ತಿಯನ್ನು ಅಂದೇ ಕಂಡಿದ್ದ ಬಸವಣ್ಣ

ಏನಯ್ಯೊ ವಿಪ್ರರು ನುಡಿದಂತೆ ನಡೆಯರು. ಇದೆಂತಯ್ಯೊ
ತಮಗೊಂದು ಬಟ್ಟೆ, ಶಾಸ್ತ್ರಕೊಂದು ಬಟ್ಟೆ
ಕೂಡಲಸಂಗಮದೇವಯ್ಯೊ, ಹೊಲೆಯರ ಬಸುರಲ್ಲಿ
ವಿಪ್ರರು ಹುಟ್ಟಿ ಗೋಮಾಂಸ ತಿಂಬರೆಂಬುದಕ್ಕೆ ಇದೆ ದೃಷ್ಟ.
(ಸಮಗ್ರ ವಚನ ಸಂಪುಟ 1 ಪು ಸಂ 143 ವ ಸಂ 575) ಎಂದು ಖಾರವಾಗಿ ಬರೆದಿದ್ದಾರೆ.

ತಾವು ಬಾಯಿ ಚಟಕ್ಕಾಗಿ ಮಾಂಸ ಭಂಜಿಸಿಯೂ ಹೊಟ್ಟೆಪಾಡಿಗಾಗಿ ಅನಿವಾರ್ಯತೆಯಿಂದಾಗಿ ಮಾಂಸಾಹಾರಿಗಳಾಗಿದ್ದವರನ್ನು ಅನಾಚಾರಿಗಳೆಂದು ಜರೆಯುತ್ತಿದ್ದ ವೈದಿಕರನ್ನು ಕಂಡ ಬಸವಣ್ಣ ಮತ್ತೂ ಮುಂದುವರೆದು

ವಿಷ್ಣು ವರಾಹಾವತಾರದಲ್ಲಿ ಹಂದಿಯಂತಿಂಬುದಾವಾಚಾರವೋ?
ವಿಷ್ಣು ಮತ್ಸ್ಯಾವತಾರದಲ್ಲಿ ಮೀನು ತಿಂಬುದಾವಾಚಾರವೋ?
ವಿಷ್ಣು ಕೂರ್ಮಾವತಾರದಲ್ಲಿ ಆಮೆಯ ತಿಂಬುದಾವಾಚಾರವೋ
ವಿಷ್ಣು ಹರಿಣಾವತಾರದಲ್ಲಿ ಎರಳೆಯ ತಿಂಬುದಾವಾಚಾರವೋ?
ಇಂತಿವನೆಲ್ಲ ಅರಿಯದೆ ತಿಂದರು.
ಅರಿದರಿದು ನಾಲ್ಕು ವೇದ, ಹದಿನೆಂಟು ಪುರಾಣ, ಹದಿನಾರು ಶಾಸ್ತ್ರ
ಇಪ್ಪತ್ತೆಂಟು ಆಗಮ ಇಂತಿವೆಲ್ಲನೋದಿ, ಕೇಳಿ ಹೋಮವನಿಕ್ಕಿ ಹೋತನ ಕೊಂದು ತಿಂಬುವದಾವಾಚಾರದೊಳಗೋ?
ಇಂತೀ ಶ್ರುತಿಗಳ ವಿಧಿಯ ಜಗವೆಲ್ಲ ನೋಡಿರೆ.
ನಮ್ಮ ಕೂಡಲಸಂಗಮದೇವಂಗೆ
ಅಧಿದೇವತೆಗಳ ಸರಿಯೆಂಬವರ ಬಾಯಲ್ಲಿ ಸುರಿಯವೆ ಬಾಲಹುಳಗಳು?
(ಸಮಗ್ರ ವಚನ ಸಂಪುಟ 1 ಪು ಸಂ 378 ವ ಸಂ 1362)
ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂಥ ನೂರಾರು ವಚನಗಳನ್ನು ಬಸವಾದಿ ಶರಣರು ಬರೆದು ವೈದಿಕರ ಆಷಾಢಭೂತಿತನವನ್ನು ಬಯಲಿಗೆಳೆದಿದ್ದಾರೆ.

ಹೀಗಿರುವಾಗಲೂ ಪೇಜಾವರ ಶ್ರಿಗಳು ತಮ್ಮ ಆಚರಣೆಗಳನ್ನು ಸಮರ್ಥಿಸಿಕೊಳ್ಳಲು ಬಸವಣ್ಣ ಮತ್ತು ಅವರ ಸಮಕಾಲೀನರು ಹೇಳದಿರುವ ಸಂಗತಿಗಳನ್ನು ಅವರ ತಲೆಗೆ ಕಟ್ಟುವುದು ಎಷ್ಟು ಸರಿ?

ಯಾವ ಕಾಲಕ್ಕಾದರೂ ಮಾನವರು ಉಭಯಾಹಾರಿಗಳಾಗಿದ್ದರೆ ಹೊರತು ಶುದ್ಧ ಮಾಂಸ ಅಥವಾ ಸಸ್ಯಾಹಾರಿಗಳಾಗಿದ್ದಿಲ್ಲ. ಇದಕ್ಕೆ ಕಾರಣ ಸಸ್ಯಸಂಕುಲದ ಉಪಲಬ್ಧಿ ಮತ್ತು ಸಾಮರ್ಥ್ಯದ್ದು. ಭೂಮಿ ಮೇಲೆ ಬೆಳೆಯುತ್ತಿರುವ ಒಟ್ಟು 1.50 ಲಕ್ಷ ಸಸ್ಯ ಪ್ರಭೇದಗಳಲ್ಲಿ ಕೇವಲ 50 ಸಾವಿರ ಸಸ್ಯಗಳು ಮಾತ್ರ ತಿನ್ನಲು ಯೋಗ್ಯವಾಗಿವೆ. ಶೇ 80 ರಷ್ಟು ಸಸ್ಯಗಳು ವಿಷಕಾರಿ ಮತ್ತು ಪ್ರಾಣಾಪಾಯ ಒಡ್ಡುತ್ತವೆ.

ಇದಕ್ಕೆ ವ್ಯತಿರಿಕ್ತವಾಗಿ ಸುಮಾರು 84ಲಕ್ಷದಷ್ಟಿರುವ ಜೀವಸಂಕುಲದಲ್ಲಿ ಕೆಲವು ಸಾವಿರದಷ್ಟು ಬಿಟ್ಟರೆ ಉಳಿದೆಲ್ಲವೂ ತಿನ್ನಲು ಯೋಗ್ಯವಾಗಿವೆ. ಆದ್ದರಿಂದಲೇ ಭೂಮಿ ಮೇಲೆ ಬದುಕುತ್ತಿರುವ ಮಾನವರಲ್ಲಿ ಶೇ 96ರಷ್ಟು ಉಭಯಾಹಾರಿಗಳಾಗಿದ್ದರೆ, ಶೇ 4ರಷ್ಟು ಮಾತ್ರ ಶುದ್ಧ ಸಸ್ಯಾಹಾರಿಗಳಾಗಿದ್ದಾರೆ. ಈ ತಥ್ಯವನ್ನು ಉಪೇಕ್ಷಿಸಿಯೂ ಯಾವುದೇ ಧರ್ಮವು ಮಾಂಸಾಹಾರವನ್ನು ನಿಷೇಧಿಸಿ ಅದನ್ನೊಂದು ತತ್ವವಾಗಿಸಿದ್ದರೆ ಅದು ಆ ಧರ್ಮದ ಮಿತಿಯೇ ಹೊರತು ಅನುಕರಣೀಯವಲ್ಲ.

ಬಸವಾದಿ ವಚನಕಾರರದ್ದು ಸಮೂಹ ಸೃಷ್ಟಿ. ಇಡೀ ವಚನ ಸಾಹಿತ್ಯ ಜನಪರ ಚಳವಳಿಯೊಂದರ ಉಪಉತ್ಪತ್ತಿ ಯಾಗಿಯೇ ಕಾಣಿಸಿಕೊಂಡಿದೆ. ಹೀಗಾಗಿ ವಚನಕಾರರಲ್ಲಿ ಪರಸ್ಪರ ಭಿನ್ನಾಭಿಪ್ರಾಯ, ಕಾಲಮಿತಿ, ದ್ವಂದ್ವ, ವೈರುಧ್ಯ ಇವೆಲ್ಲವೂ ಇವೆ. ಈ ಮುಕ್ತತೆಯೇ ವಚನ ಸಾಹಿತ್ಯದ ಶಕ್ತಿಯೂ ಆಗಿದೆ.

ವಚನಸಾಹಿತ್ಯ ಸರ್ವಕಾಲಕ್ಕೂ ಪ್ರಶ್ನಾತೀತ ವೆಂದು ಯಾರೂ ಭಾವಿಸಬೇಕಾಗಿಲ್ಲ. ಆದರೆ ಅವರು ಹೇಳಿಯೇ ಇರದಿದ್ದ ಸಂಗತಿಗಳನ್ನು ಅವರ ತಲೆಗೆ ಕಟ್ಟುವ ಹವ್ಯಾಸ ಒಳ್ಳೆಯದಲ್ಲ. ಒಂದು ಸುಳ್ಳು ಮುಚ್ಚಿಕೊಳ್ಳಲು ಹೋಗಿ ಇನ್ನೊಂದು ಸುಳ್ಳು ಸೃಷ್ಟಿಸುವುದು ಎಷ್ಟರಮಟ್ಟಿಗೆ ಸಮಂಜಸ?
-ಡಾ.ಮೀನಾಕ್ಷಿ ಬಾಳಿ . ಗುಲ್ಬರ್ಗ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.