ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಬುಧವಾರ 7.1.1998

Last Updated 6 ಜನವರಿ 2023, 19:45 IST
ಅಕ್ಷರ ಗಾತ್ರ

ಲಖನೌ ಸಮೀಪ ರೈಲು ದುರಂತ:51 ಸಾವು

ನವದೆಹಲಿ, ಜ. 6 (ಯುಎನ್ಐ, ಪಿಟಿಐ)– ರೋಜಾ– ಲಖನೌ ಪ್ರದೇಶದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ರೈಲು ದುರಂತದಲ್ಲಿ ಸತ್ತವರ ಸಂಖ್ಯೆ 51ಕ್ಕೆ ಏರಿದೆ.

ಈ ಘಟನೆಯಲ್ಲಿ 14 ಮಂದಿ ಪ್ರಯಾಣಿ ಕರು ತೀವ್ರವಾಗಿ ಗಾಯಗೊಂಡಿದ್ದು, ಇತರ 48 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮುರಾದಾಬಾದ್ ವಿಭಾಗದ ಕರನಾ ರೈಲು ನಿಲ್ದಾಣದ ಬಳಿ ದುರಂತ ಸಂಭವಿಸಿತು. ಈ ಪ್ರದೇಶದಲ್ಲಿ ದಟ್ಟವಾಗಿ ಮಂಜು ಕವಿದಿದ್ದರಿಂದ ರೈಲ್ವೆ ಸಿಗ್ನಲ್‌ಗಳನ್ನು ಗ್ರಹಿ ಸಲು ಚಾಲಕನಿಗೆ ಸಾಧ್ಯವಾಗಲಿಲ್ಲ. ಇದು ದುರಂತಕ್ಕೆ ಕಾರಣವಾಯಿತು ಎನ್ನಲಾಗಿದೆ.

ಕೆ.ಪಿ.ಎಸ್. ಗಿಲ್‌ಗೆ ಶಿಕ್ಷೆ ಕಾಯಂ

ಚಂಡಿಗಢ, ಜ. 6 (ಪಿಟಿಐ)– ಐಎಎಸ್ ಅಧಿಕಾರಿ ರೂಪನ್ ಡಿಯೋಲ್ ಬಜಾಜ್ ಅವರ ಜತೆ ಮಾಜಿ ಹಿರಿಯ ಪೊಲೀಸ್ ಅಧಿಕಾರಿ ಕೆ.ಪಿ.ಎಸ್. ಗಿಲ್ ಅವರು ಅಸಭ್ಯ ವಾಗಿ ವರ್ತಿಸಿದರು ಎನ್ನಲಾದ ಪ್ರಕರಣವನ್ನು ಚಂಡಿಗಢ ಕೋರ್ಟ್ ಇಂದು ಎತ್ತಿಹಿಡಿಯಿತು.

ಗಿಲ್ ಅವರು ಬಜಾಜ್ ಅವರಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಈ ಹಿಂದೆ ಕೆಳ ಕೋರ್ಟ್ ನೀಡಿದ್ದ ತೀರ್ಪನ್ನು ಚಂಡಿಗಢ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ಅಮರ್ ದತ್ತ ಅವರು ಊರ್ಜಿತಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT