ಸರ್ಕಾರ ಸೇರಲು ಜಯಾ ಮಿತ್ರಪಕ್ಷಗಳ ಒಪ್ಪಿಗೆ
ಚೆನ್ನೈ, ಮಾರ್ಚ್ 15 (ಪಿಟಿಐ, ಯುಎನ್‌ಐ)– ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾದರೆ, ಅದರಲ್ಲಿ ತಮಿಳುನಾಡಿನ ಎಐಎಡಿಎಂಕೆ, ಪಿಎಂಕೆ ಹಾಗೂ ತಮಿಳಗ ರಾಜೀವ್ ಕಾಂಗ್ರೆಸ್ (ಟಿಆರ್‌ಸಿ) ಪಕ್ಷಗಳು ಭಾಗವಹಿಸುತ್ತವೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಜಯಲಲಿತಾ ಅವರು ಇಂದು ಇಲ್ಲಿ ಪ್ರಕಟಿಸಿದರು.

ಆದರೆ ಈ ಮುನ್ನ ಜಯಲಲಿತಾ ಮೈತ್ರಿಕೂಟದ ಜನತಾ ಪಕ್ಷದ ನಾಯಕ ಸುಬ್ರಮಣಿಯನ್ ಸ್ವಾಮಿ ಅವರನ್ನು ಸರ್ಕಾರಕ್ಕೆ ಸೇರಿಸಿಕೊಳ್ಳಬೇಕೆಂಬ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈಗ ಸ್ವಾಮಿ ಅವರ ನಿಲುವು ಸದ್ಯಕ್ಕೆ ಗೊತ್ತಾಗಿಲ್ಲ. ಜಯಲಲಿತಾ ಅವರು ಸ್ವಾಮಿ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ.

ಪ್ರಧಾನಮಂತ್ರಿಯಾಗಿ ವಾಜಪೇಯಿ ನೇಮಕ
ನವದೆಹಲಿ, ಮಾರ್ಚ್ 15– ಬಿಜೆಪಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೂತನ ಪ್ರಧಾನಮಂತ್ರಿಯನ್ನಾಗಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಇಂದು ರಾತ್ರಿ ನೇಮಕ ಮಾಡಿದರು.

ವಾಜಪೇಯಿ ಅವರು 19ರಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಪ್ರಮಾಣ ಸ್ವೀಕಾರ ಮಾಡಿದ ಹತ್ತು ದಿನಗಳಲ್ಲಿ ಲೋಕಸಭೆಯ ವಿಶ್ವಾಸಮತವನ್ನು ಕೋರುವಂತೆ ರಾಷ್ಟ್ರಪತಿ ಅವರು ವಾಜಪೇಯಿ ಅವರಿಗೆ ಆದೇಶ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.