ಡಾ.ರಾಜ್‌ಗೆ ಫಾಲ್ಕೆ ಪ್ರಶಸ್ತಿ ಪ್ರದಾನ

ನವದೆಹಲಿ, ಆ. 6– ಭಾರತೀಯ ಚಲನಚಿತ್ರ ರಂಗದ ದಾದಾ ಸಾಹೇಬ್ ಫಾಲ್ಕೆ ಉತ್ತುಂಗ ಪ್ರಶಸ್ತಿಯನ್ನು ಇಂದು ಇಲ್ಲಿನ ವಿಜ್ಞಾನ ಭವನದ ಸಭಾಂಗಣದಲ್ಲಿ ನಡೆದ ವರ್ಣರಂಜಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ರಾಷ್ಟ್ರಪತಿ ಡಾ. ಶಂಕರ ದಯಾಳ್ ಶರ್ಮಾ ಅವರು ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್ ಅವರಿಗೆ ಪ್ರದಾನ ಮಾಡಿ, ಉತ್ತಮ ಚಲನಚಿತ್ರಗಳ ಬೆಳವಣಿಗೆಗೆ ಮತ್ತಷ್ಟು ಕ್ರೀಯಾತ್ಮಕ ಸಂವತ್ಸರಗಳು ಲಭಿಸಲಿ ಎಂದು ಹಾರೈಸಿದರು.

ಪ್ರಚಾರಕ್ಕೆ ರಾವ್ ವಿಮಾನ ಬಳಕೆ: ಕೇಂದ್ರಕ್ಕೆ ನೋಟಿಸ್

ನವದೆಹಲಿ, ಆ.6 (ಪಿಟಿಐ)– ಕಳೆದ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರು ವಾಯುಪಡೆದ ವಿಮಾನ ಬಳಸಿದ ಆರೋಪದ ಸಂಬಂಧ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ನೋಟಿಸು ಜಾರಿ ಮಾಡಿದೆ.

ರಾಷ್ಟ್ರೀಯ ಮುಕ್ತಿಮೋರ್ಚಾದ ಅಧ್ಯಕ್ಷರು ಸಲ್ಲಿಸಿದ ಸಾರ್ವಜನಿಕ
ಹಿತಾಸಕ್ತಿ ರಿಟ್ ಅರ್ಜಿಯ ಸಂಬಂಧ ವಿಭಾಗೀಯ ಪೀಠ ಅ. 28ರ ಒಳಗೆ ಉತ್ತರಿಸುವಂತೆ ಕೇಂದ್ರಕ್ಕೆ ಆದೇಶಿಸಿದೆ. ಮಾಜಿ ಪ್ರಧಾನಿ ವಾಯು ಪಡೆಯ ವಿಮಾನವನ್ನು ಖಾಸಗಿ ಅಥವಾ ರಾಜಕೀಯ ಉದ್ದೇಶಕ್ಕೆ ಬಳಸಿದ್ದರು ಎಂದು ರಕ್ಷಣಾ ಸಚಿವರು ತಿಳಿಸಿದ್ದರು ಎಂದು ಅರ್ಜಿಯಲ್ಲಿ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.