ಬೆಂಗಳೂರು, ಸೆ. 8– ನಗರದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವಸುಂದರಿ ಸ್ಪರ್ಧೆಗೆ ವಿರೋಧಿಸುತ್ತಿರುವವರನ್ನು ತೀವ್ರ ವಾಗಿ ಖಂಡಿಸಿದ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಸರ್ಕಾರ ಈ ವಿರೋಧವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.

ಕರ್ನಾಟಕ ಸಹಕಾರಿ ಚಲನಚಿತ್ರ ಮತ್ತು ಲಲಿತಕಲಾ ಮಹಾಮಂಡಳಿ ಏರ್ಪಡಿಸಿದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ವಿರೋಧಿಸುತ್ತಿರುವವರನ್ನು ತರಾಟೆಗೆ ತೆಗೆದುಕೊಂಡ ಅವರು, ‘ವಿಶ್ವಸುಂದರಿ ಸ್ಪರ್ಧೆ ಹಿಂದೂ ಸಂಸ್ಕೃತಿಗೆ ಅವಮಾನ ಎಂದು ಕೆಲವರು ವಿರೋಧಿಸು ತ್ತಿದ್ದಾರೆ. ಮಹಾಭಾರತದ ದ್ರೌಪದಿಯ ಸೀರೆ ಯನ್ನು ಸೆಳೆದಾಗ ಭಾರತದ ಸಂಸ್ಕೃತಿ ಎಲ್ಲಿ ಹೋಗಿತ್ತು. ರಾಮಾಯಣದಲ್ಲಿ ರಾವಣ ಸೀತೆ ಯನ್ನು ಅಪಹರಿಸಿದಾಗ ಈ ಸಂಸ್ಕೃತಿ ಎಲ್ಲಿ ಅಡಗಿತ್ತು’ ಎಂದು ಪ್ರಶ್ನೆಗಳ ಸುರಿಮಳೆಗರೆದರು.

‘ವಿಶ್ವಸುಂದರಿ ಸ್ಪರ್ಧೆ ನಡೆಸುವುದರಲ್ಲಿ ತಪ್ಪೇನಿದೆ? ಇದಕ್ಕಾಗಿ ಸರ್ಕಾರ ಯಾವುದೇ ವೆಚ್ಚವನ್ನೂ ಮಾಡುತ್ತಿಲ್ಲ. ಇದರಿಂದ ರಾಜ್ಯಕ್ಕೆ ಜಗತ್ತಿನ ಹಲವಾರು ಉದ್ಯಮಿಗಳು ಬರುತ್ತಾರೆ. ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ದಕ್ಕುತ್ತದೆ. 150 ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಇದರಿಂದ ರಾಜ್ಯಕ್ಕೆ ಸಾಕಷ್ಟು ಲಾಭವಾಗಲಿದೆ’ ಎಂದರು.

ಭಯೋತ್ಪಾದನೆ: ಪಾಕ್‌ಗೆ ದೇವೇಗೌಡರ ಎಚ್ಚರಿಕೆ

ಕಿಶನ್‌ಗಂಜ್ (ಬಿಹಾರ), ಸೆ. 8 (ಪಿಟಿಐ)– ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾದೀತೆಂದು ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.