ದೇಶದ 80 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಆಜ್ಞೆ

ನವದೆಹಲಿ, ಸೆ. 12 (ಪಿಟಿಐ)– ಎರಡನೇ ಹಂತದಲ್ಲಿ ಶನಿವಾರ ದೇಶದ ವಿವಿಧೆಡೆ ನಡೆದ ಮತದಾನದ ಪೈಕಿ ಒಟ್ಟು 80 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ ನೀಡಿದೆ.

ಆರು ರಾಜ್ಯಗಳಲ್ಲಿ ಈ ಮರು ಮತದಾನ ನಡೆಯಲಿದೆ. ಆಂಧ್ರ ಪ್ರದೇಶದಲ್ಲಿ (22) ಅತಿ ಹೆಚ್ಚು ಮರು ಮತದಾನ ನಡೆದರೆ, ರಾಜಸ್ಥಾನದಲ್ಲಿ 20, ತಮಿಳುನಾಡಿನಲ್ಲಿ 19, ಮಧ್ಯಪ್ರದೇಶದಲ್ಲಿ 14, ಕರ್ನಾಟಕದಲ್ಲಿ ಮೂರು ಹಾಗೂ ಕೇರಳದಲ್ಲಿ ಎರಡು ಕಡೆ ಮರು ಮತದಾನ ನಡೆಯಲಿದೆ. ‘ಈ ಮತಗಟ್ಟೆಗಳಲ್ಲಿ ಅಕ್ರಮ ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ’ ಎಂದು ಚುನಾವಣಾ ಆಯೋಗ ಹೇಳಿದೆ.

ಅಸ್ಥಿರತೆ ಲಾಭ ಪಡೆಯಲು ಪಾಕ್ ಹೊಂಚು: ಅಟಲ್

ಹಜಾರಿಬಾಗ್, ಸೆ. 12 (ಪಿಟಿಐ)– ಕಾರ್ಗಿಲ್ ಬಿಕ್ಕಟ್ಟು ಉದ್ಭವಿಸಲು ಕಾಂಗ್ರೆಸ್ ಪಕ್ಷವೇ ಕಾರಣವೆಂದು ಆಪಾದಿಸಿದ ಪ್ರಧಾನಿ ವಾಜಪೇಯಿ ಅವರು, ಗಡಿಯೊಳಗೆ ಅತಿಕ್ರಮಣ ಮಾಡಿದ ಪಾಕಿಸ್ತಾನವು ಭಾರತದ ನೆಲ ವಶಪಡಿಸಿಕೊಳ್ಳುವ ಹೊಂಚು ಹಾಕಿತ್ತು ಎಂದು ಹೇಳಿದರು.

ಇಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.