ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ, 16 ಫೆಬ್ರುವರಿ 1996

Last Updated 15 ಫೆಬ್ರುವರಿ 2021, 18:00 IST
ಅಕ್ಷರ ಗಾತ್ರ

ಕನ್ನಡ ಚಿತ್ರಪ್ರದರ್ಶನ ಕಡ್ಡಾಯ ಚಿತ್ರಮಂದಿರ ಟಿಕೆಟ್ ದರ ಬಾಡಿಗೆ ದರ ಇಳಿಕೆ
ಬೆಂಗಳೂರು, ಫೆ. 15–
ಪ್ರದರ್ಶಕರು ಹಾಗೂ ನಿರ್ಮಾಪಕ–ನಿರ್ದೇಶಕರ ನಡುವಿನ ಭಿನ್ನಾಭಿಪ್ರಾಯದಿಂದ ಕನ್ನಡ ಚಲನಚಿತ್ರರಂಗದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಅಂತ್ಯಗೊಂಡಿದೆ.

ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ನಡೆದ ತ್ರಿಪಕ್ಷೀಯ ಸಭೆಯಲ್ಲಿ, ಕನ್ನಡ ಚಿತ್ರಗಳಿಗೆ ಆದ್ಯತೆ, ಚಿತ್ರಮಂದಿರಗಳ ಪ್ರವೇಶ ದರ ಹಾಗೂ ಬಾಡಿಗೆ ದರ ಇಳಿತ, ಆರು ತಿಂಗಳ ಕಾಲ ಕನ್ನಡ ಚಿತ್ರಗಳ ಕಡ್ಡಾಯ ಪ್ರದರ್ಶನ ಕುರಿತಾದ ಪ್ರಮುಖ ಬೇಡಿಕೆಗಳ ಬಗ್ಗೆ ಇಂದುಚರ್ಚೆ ನಡೆದು, ಅಂತಿಮವಾಗಿ ಸರ್ವಸಮ್ಮತ ತೀರ್ಮಾನವನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಚಿತ್ರೋದ್ಯಮದ ಪಾರ್ವತಮ್ಮ ರಾಜ್‌ಕುಮಾರ್, ಕೆ.ಎಸ್.ಎಲ್. ಸ್ವಾಮಿ (ರವಿ), ಡಾ. ರಾಜ್‌ಕುಮಾರ್, ಸಂಸದೀಯ ವ್ಯವಹಾರಗಳ ಸಚಿವ ಎಂ.ಸಿ. ನಾಣಯ್ಯ ಮೊದಲಾದವರು ಪಾಲ್ಗೊಂಡಿದ್ದರು.

ಬೆಳಗಾವಿ, ಮಂಗಳೂರಿಗೆ ಶೀಘ್ರ ಪೊಲೀಸ್ ಕಮಿಷನರ್ ನೇಮಕ
ಬೆಂಗಳೂರು, ಫೆ. 15–
ಬೆಳಗಾವಿ ಮತ್ತು ಮಂಗಳೂರು ನಗರಗಳು ಬೃಹತ್ತಾಗಿ ಬೆಳೆದಿರುವ ಹಿನ್ನೆಲೆಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ಈ ಎರಡೂ ನಗರಗಳಿಗೆ ಅತಿ ಶೀಘ್ರದಲ್ಲಿಯೇ ಪೊಲೀಸ್ ಕಮಿಷನರ್‌ಗಳನ್ನು ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡ ಅವರು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT