ಚುನಾವಣೆಗೆ 500 ಕೋಟಿ ರೂ. ವೆಚ್ಚ

ನವದೆಹಲಿ, ಮಾರ್ಚ್ 31 (ಪಿಟಿಐ)– ಅಭ್ಯರ್ಥಿಗಳು ತಮ್ಮ ಚುನಾವಣಾ ವೆಚ್ಚಕ್ಕೆ ಮಿತಿ ಹೇರಿಕೊಳ್ಳಲಿ, ಬಿಡಲಿ. ಭಾರತೀಯ ತೆರಿಗೆದಾರ ಮಾತ್ರ ಈ ಬೇಸಿಗೆಯಲ್ಲಿ ನಡೆಯಲಿರುವ ಚುನಾವಣೆಗಳಿಗೆ ತನ್ನ ಕಾಣಿಕೆಯನ್ನಂತೂ ಸಲ್ಲಿಸಲೇಬೇಕು. ಇದು ಸಾರ್ವಜನಿಕ ಬೊಕ್ಕಸಕ್ಕೆ ಸುಮಾರು ರೂ 500 ಕೋಟಿಯಷ್ಟು ಹೊರೆ ಹಾಕಲಿದೆ ಎಂದು ಅಂದಾಜಿಸಲಾಗಿದೆ.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಚಕ್ರಗಳ ಚಾಲನೆಯ ವೆಚ್ಚ 1952ರಿಂದಲೂ ಪ್ರತಿವರ್ಷ ಹೆಚ್ಚುತ್ತಲೇ ನಡೆದಿದೆ ಎಂಬು ದನ್ನು ಚುನಾವಣಾ ಆಯೋಗದ ಅಂಕಿ ಅಂಶಗಳು ದೃಢಪಡಿಸಿವೆ. ಈವರೆಗೆ ನಡೆದಿರುವ ಚುನಾವಣೆಗಳಲ್ಲಿ 1991ರ ಚುನಾವಣೆ ಅತ್ಯಂತ ದುಬಾರಿಯದು. ಈ ಸಂದರ್ಭದಲ್ಲಿ ಸರ್ಕಾರ ಸುಮಾರು 400 ಕೋಟಿ ರೂಪಾಯಿಗಳನ್ನು ವ್ಯಯಿಸಿತ್ತು.

ತಮಿಳುನಾಡಿನಲ್ಲಿ ಕಾಂಗೈ ಇಬ್ಭಾಗ ಡಿಎಂಕೆ ಜತೆ ಭಿನ್ನ ಬಣ ಮೈತ್ರಿ

ಮದ್ರಾಸ್, ಮಾರ್ಚ್ 31 (ಯು ಎನ್ಐ)– ಆಡಳಿತಾರೂಢ ಎಐಎಡಿಎಂಕೆ ಜೊತೆ ತಮಿಳುನಾಡಿನ ಕಾಂಗೈ ಸಮಿತಿಯು ಮೈತ್ರಿ ಮಾಡಿಕೊಳ್ಳಬೇಕು ಎಂಬ ಹೈಕಮಾಂಡ್‌ನ ಆದೇಶವನ್ನು ಧಿಕ್ಕರಿಸಿ, ಕಾಂಗೈನ ಹಿರಿಯ ನಾಯಕ ಜಿ.ಕೆ.ಮೂಪನಾರ್ ಅವರು ಡಿಎಂಕೆಯೊಂದಿಗೆ ಸ್ಥಾನ ಹೊಂದಾಣಿಕೆಗೆ ನಿರ್ಧರಿಸಿರುವುದರಿಂದ ಕಾಂಗೈ ಇಬ್ಭಾಗ ಆಗಿದೆ. ಒಂದು ವರ್ಷದಲ್ಲಿ ಕಾಂಗೈ ವಿಭಜನೆ ಆಗುತ್ತಿರುವುದು ಇದು 2ನೇ ಸಲ.

ಡಿಎಂಕೆ ಹಾಗೂ ಮೂಪನಾರ್ ಬಣದ ಮೈತ್ರಿಗೆ ಚಿತ್ರನಟ ರಜನೀಕಾಂತ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.