ಗುರುವಾರ , ಸೆಪ್ಟೆಂಬರ್ 23, 2021
24 °C

ಶನಿವಾರ ಆಗಸ್ಟ್‌ 10, 1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೃತ್ತಿಶಿಕ್ಷಣ ಪ್ರವೇಶ ಶುಲ್ಕ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ, ಆಗಸ್ಟ್‌ 9– ಕರ್ನಾಟಕ ಸರ್ಕಾರವು ವೃತ್ತಿಶಿಕ್ಷಣದ ಪ್ರವೇಶ ಶುಲ್ಕಕ್ಕೆ ಸಂಬಂಧಿಸಿದಂತೆ ರೂಪಿಸಿದ್ದ ಕೆಲವು ನಿಯಮಗಳನ್ನು ಕಳೆದ ವರ್ಷದ ಆಗಸ್ಟ್‌ 11ರಂದು ರದ್ದು ಮಾಡಿ ತಾನು ಮಾಡಿದ ಕೆಲವು ಮಾರ್ಪಾಡನ್ನು ಈಗಲೂ ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್‌ ಇಂದು ಸರ್ಕಾರಕ್ಕೆ ಆಜ್ಞಾಪಿಸಿತು.

ಅನಿವಾಸಿ ಭಾರತೀಯರಿಗೆ ನೀಡುವ ಕೋಟಾವನ್ನು ಹೆಚ್ಚಿಸಬೇಕು. ಈಗಿನ ಪ್ರವೇಶ ಶುಲ್ಕವನ್ನು ಅಧಿಕಗೊಳಿಸಬೇಕು ಮತ್ತು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ನ್ಯಾಯಾಲಯವು ಮಾಡಿರುವ ಪ್ರವೇಶ ಶುಲ್ಕ ನೀತಿಯಲ್ಲಿ ಮಾರ್ಪಾಡು ಮಾಡಬೇಕು ಎಂದು ಟಿಎಂಎ ಫೌಂಡೇಶನ್‌, ವೆಂಕಟೇಶ್ವರ ಶಿಕ್ಷಣ ಸಂಸ್ಥೆ ಮತ್ತು ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ಆಡಳಿತ ವರ್ಗಗಳ ಸಮಿತಿ ಮುಂತಾದ ಸಂಸ್ಥೆಗಳು, 1995ರ ಆಗಸ್ಟ್‌ 11ರ ಆಜ್ಞೆಯನ್ನು ಪ್ರಶ್ನಿಸಿದ್ದವು.

ಭಾರತ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಸಚಿನ್‌

ಕಲ್ಕತ್ತ, ಆಗಸ್ಟ್‌ 9– ಮಹಮದ್‌ ಅಜರುದ್ದೀನ್‌ ಅವರ ಬದಲು ಸಚಿನ್‌ ತೆಂಡೂಲ್ಕರ್‌ ಈಗ ಭಾರತ ಕ್ರಿಕೆಟ್‌ ತಂಡದ ಕ್ಯಾಪ್ಟನ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು