ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಭಾನುವಾರ ಸೆಪ್ಟೆಂಬರ್‌ 22 , 1996

Last Updated 21 ಸೆಪ್ಟೆಂಬರ್ 2021, 22:13 IST
ಅಕ್ಷರ ಗಾತ್ರ

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆನರಸಿಂಹ ರಾವ್‌ ರಾಜೀನಾಮೆ
ನವದೆಹಲಿ, ಸೆ. 21 (ಯುಎನ್‌ಐ)– ಲಕ್ಕೂಭಾಯಿ ಪಾಠಕ್‌ ವಂಚನೆ ಪ್ರಕರಣದಲ್ಲಿ ತಮ್ಮನ್ನು ಸಹ ಆರೋಪಿಯನ್ನಾಗಿ ಮಾಡಬಾರದು ಎಂದು ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಪಿ.ವಿ. ನರಸಿಂಹ ರಾವ್‌ ಅವರು ಸಲ್ಲಿಸಿದ್ದ ಅರ್ಜಿಗಳನ್ನು ಸಿಬಿಐ ವಿಶೇಷ ನ್ಯಾಯಾಧೀಶ ಅಜಿತ್‌ ಭಾರಿಹೋಕ್‌ ಅವರು ಇಂದು ತಳ್ಳಿಹಾಕಿದ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾವ್ ರಾಜೀನಾಮೆ ಸಲ್ಲಿಸಿದ್ದಾರೆ.

‘ನಾನು ಸಂಪೂರ್ಣ ಮುಗ್ಧ. ನನ್ನ ಘನತೆಗೆ ಕುಂದು ತರಲು ನನ್ನ ವಿರುದ್ಧ ಸುಳ್ಳು, ನಿರಾಧಾರ ಹಾಗೂ ಕುಚೇಷ್ಟೆಯ ಆರೋಪಗಳನ್ನು ಮಾಡಲಾಗಿದೆ’ ಎಂದು ರಾವ್‌ ಹೇಳಿಕೆ ನೀಡಿದ್ದಾರೆ.

ಮೈಸೂರು ಭೂಹಗರಣ:ಬೊಕ್ಕಸಕ್ಕೆ ₹ 60 ಕೋಟಿ ನಷ್ಟ
ಬೆಂಗಳೂರು, ಸೆ. 21– ಮೈಸೂರು ನಗರದ ಸುತ್ತಮುತ್ತಲಿನ ಜಮೀನನ್ನುನಿವೇಶನಗಳನ್ನಾಗಿ ಮಾಡಿ ವಿವಿಧ ಹಂತಗಳಲ್ಲಿ ನಡೆಸಿರುವ ಅವ್ಯವಹಾರಗಳಿಂದಾಗಿ ಸರ್ಕಾರಕ್ಕೆ ಸುಮಾರು 60 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದ್ದು ಇದರ ಬಗ್ಗೆ ತೀವ್ರ ತನಿಖೆ ನಡೆದಿದ್ದು, ಈಗಾಗಲೇ ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತಿನಲ್ಲಿ ಇಡಲಾಗಿದೆ ಎಂದು ಕಂದಾಯ ಸಚಿವ ರಮೇಶ್‌ ಸಿ. ಜಿಗಜಿಣಗಿ ಅವರು ಇಂದು ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT