ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ ಈ ದಿನ: ಸಿಯಾಚಿನ್‌ ವಶಕ್ಕೆ ಪಾಕ್‌ ಹಠಾತ್‌ ಯತ್ನ ವಿಫಲ

Published 28 ಜೂನ್ 2024, 19:46 IST
Last Updated 28 ಜೂನ್ 2024, 19:46 IST
ಅಕ್ಷರ ಗಾತ್ರ

ಸಿಯಾಚಿನ್‌ ವಶಕ್ಕೆ ಪಾಕ್‌ ಹಠಾತ್‌ ಯತ್ನ ವಿಫಲ

ನವದೆಹಲಿ, ಜೂನ್‌ 28– ಕಾರ್ಗಿಲ್‌ ಪ್ರದೇಶದ ನಂತರ ಈಗ ಸಿಯಾಚಿನ್‌ ಕಡೆಗೆ ಕಣ್ಣಿಟ್ಟಿರುವ ಪಾಕಿಸ್ತಾನ ಸೇನೆ, ದಕ್ಷಿಣ ಸಿಯಾಚಿನ್‌ ಹಿಮಪಾತ ಪ್ರದೇಶದ ಇಳಿಜಾರು ನೆಲವನ್ನು ಆಕ್ರಮಿಸಿಕೊಳ್ಳಲು ನಿನ್ನೆ ನಡೆಸಿದ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.

ಪಾಕಿಸ್ತಾನದ ಸೇನೆಯು ಈ ಪ್ರದೇಶಕ್ಕೆ 26ರಂದು ದಾಳಿ ಇಟ್ಟಿತಾದರೂ ಎತ್ತರದ ಪರ್ವತ ಶಿಖರದಲ್ಲಿ ಸಮರ ನಡೆಸಲು ವಿಶೇಷ ತರಬೇತಿ ಹೊಂದಿರುವ ಭಾರತೀಯ ಕಮಾಂಡೊಗಳು ಪ್ರತಿದಾಳಿ ನಡೆಸಿ ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿಸಿದರು.

ಪ್ರಾಥಮಿಕ ಶಿಕ್ಷಕರ ಪ್ರತಿಭಟನೆ

ಬೆಂಗಳೂರು, ಜೂನ್‌ 28– ಐದನೇ ವೇತನ ಆಯೋಗದ ವೇತನ ತಾರತಮ್ಯವನ್ನು ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿ ರಾಜ್ಯದ ವಿವಿಧ ಭಾಗಗಳಿಂದ ನಗರಕ್ಕೆ ಬಂದಿದ್ದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರು ಬೃಹತ್‌ ಪ್ರತಿಭಟನಾ ರ‍್ಯಾಲಿ ನಡೆಸಿದರು.

ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ, ಚಿಕ್ಕಲಾಲ್‌ಬಾಗ್‌ನಿಂದ ಮೆರವಣಿಗೆಯಲ್ಲಿ ಹೊರಟ ಹಲವು ಹತ್ತು ಸಾವಿರ ಸಂಖ್ಯೆಯ ಶಿಕ್ಷಕರು ಮಲ್ಲೇಶ್ವರಂ ಆಟದ ಮೈದಾನದಲ್ಲಿ ಸಭೆ ಸೇರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT