ಮಂದಿರ ನಿರ್ಮಾಣ ಇಲ್ಲ: ವಾಜಪೇಯಿ ಘೋಷಣೆ

ನವದೆಹಲಿ, ಡಿ. 14 (ಯುಎನ್ಐ)– ರಾಮಮಂದಿರ ನಿರ್ಮಾಣ ವಿಚಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಕೂಟದ (ಎನ್ಡಿಎ) ಕಾರ್ಯಸೂಚಿಯನ್ನು ಉತ್ತರ ಪ್ರದೇಶ ಸರ್ಕಾರವೂ ಅನುಸರಿಸಲಿದೆ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರಾತ್ರಿ ಸ್ಪಷ್ಟಪಡಿಸಿದ್ದಾರೆ.

ಮಂದಿರ ನಿರ್ಮಾಣದ ಪ್ರಸ್ತಾವವು ತಮ್ಮ ಸರ್ಕಾರದ ಮುಂದಿಲ್ಲವೆಂದು ಉತ್ತರ ಪ್ರದೇಶ ಮುಖ್ಯಮಂತ್ರಿ ರಾಂ ಪ್ರಕಾಶ್ ಗುಪ್ತಾ ತಿಳಿಸಿರುವುದಾಗಿ ಪ್ರಧಾನಿ ಯವರು ಹೇಳಿದ್ದಾರೆ. ಈ ಮೂಲಕ, ಕಳೆದೆರಡು ದಿನಗಳಿಂದ ಲೋಕಸಭೆ ತಲ್ಲಣ ಗೊಳಿಸಿದ್ದ ರಾಮ ಮಂದಿರ ನಿರ್ಮಾಣ ಕುರಿತಾದ ವಿವಾದಕ್ಕೆ ತೆರೆ ಬಿದ್ದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.