ಮತಾಂತರ: ರಾಷ್ಟ್ರೀಯ ಚರ್ಚೆಗೆ ಪ್ರಧಾನಿ ವಾಜಪೇಯಿ ಸಲಹೆ
ಅಹ್ವಾ (ದಾಂಗ್ ಜಿಲ್ಲೆ), ಜ. 10- ಪ್ರಧಾನಿ ಎ.ಬಿ.ವಾಜಪೇಯಿ ಅವರು ಇಂದು ದೇಶದ ಎಲ್ಲ ಕೋಮಿನ ಜನರಿಗೂ ಸಂಪೂರ್ಣ ರಕ್ಷಣೆಯ ಭರವಸೆಯನ್ನು ನೀಡಿದರಲ್ಲದೆ ಮತಾಂತರದ ವಿಷಯವಾಗಿ ರಾಷ್ಟ್ರೀಯ ಚರ್ಚೆ ನಡೆಯಬೇಕು ಎಂದು ಕರೆ ನೀಡಿದರು.
ಕೋಮು ಹಿಂಸಾಚಾರ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಅವರು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದರು.
ಈ ಜಿಲ್ಲೆಯಲ್ಲಿ ಹಿಂದೂಗಳು ಹಾಗೂ ಕ್ರೈಸ್ತರ ನಡುವೆ ಘರ್ಷಣೆ ನಡೆದ ಕೆಲವು ಸ್ಥಳಗಳ ಭೇಟಿಯ ನಂತರ ಇಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ದೇಶದ ಜಾತ್ಯತೀತ ಸ್ವರೂಪವನ್ನು ರಕ್ಷಿಸಲಾಗುವುದು
ಎಂದು ಭರವಸೆ ನೀಡಿದರು.
‘ಯಾವುದೇ ಕೋಮಿನ ಯಾವನೇ ವ್ಯಕ್ತಿ ಅಥವಾ ಸಂಸ್ಥೆಯು ಇನ್ನೊಂದು ಕೋಮಿನವರ ಮೇಲೆ ನಡೆಸುವ ಹಿಂಸಾಚಾರವನ್ನು ರಾಜ್ಯ ಸರ್ಕಾರಗಳು ಸಹಿಸದೆ ಮಟ್ಟಹಾಕಬೇಕು’ ಎಂದು ಅವರು ಕರೆ ನೀಡಿದರು.