‘ಧರ್ಮಕಾರಣ’ ಮತ್ತೆ ಮುಟ್ಟುಗೋಲು

ಬೆಂಗಳೂರು ಜೂನ್ 27– ಹನ್ನೆರಡನೇ ಶತಮಾನದ ಶರಣರ ಕ್ರಾಂತಿ ಕಾಲದ ವಸ್ತು ಆಧರಿಸಿದ ಡಾ.ಪಿ.ವಿ.ನಾರಾಯಣ ಅವರ ಕಾದಂಬರಿ ‘ಧರ್ಮ ಕಾರಣ’ ಕೃತಿಯನ್ನು ಮತ್ತೆ ಮುಟ್ಟುಗೋಲು ಹಾಕಿಕೊಂಡು ಸರ್ಕಾರ ಮರು ಆದೇಶ ಹೊರಡಿಸಿದೆ.

ಈ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೊರಡಿಸಿದ್ದ ಆದೇಶವನ್ನು ನಿನ್ನೆ ಬೆಳಿಗ್ಗೆ ಹಿಂತೆಗೆದುಕೊಂಡು ಆದೇಶ ಹೊರಡಿಸಿದ ಸರ್ಕಾರ, ಸಂಜೆ ಗೃಹ ಇಲಾಖೆಯ ಹೆಸರಿನಲ್ಲಿ ಮರು ಆದೇಶ ಹೊರಡಿಸಿ ಕಾದಂಬರಿಯನ್ನು ಮುಟ್ಟುಗೋಲು ಮಾಡಿಕೊಂಡಿದೆ.

ಕಾವೇರಿ: ಕೇಂದ್ರ ಸೂಚನೆಗೆ ರಾಜ್ಯ ತಿರಸ್ಕಾರ

ಬೆಂಗಳೂರು, ಜೂನ್ 27– ಕಾವೇರಿ ನೀರು ಹಂಚಿಕೆ ಕುರಿತು ನ್ಯಾಯಮಂಡಳಿ ನೀಡಿರುವ ಮಧ್ಯಂತರ ಆದೇಶದ ಜಾರಿಗೆ ಕೇಂದ್ರ ಸರ್ಕಾರ ಪ್ರಸ್ತಾವನೆ ‘ಅಗತ್ಯವಿಲ್ಲ’ ಎಂದು ರಾಜ್ಯ ಸರ್ಕಾರ ಅದನ್ನು ಇಂದು ಇಲ್ಲಿ ಸಾರಾಸಗಟಾಗಿ ತಿರಸ್ಕರಿಸಿದೆ.

ಅಧಿಸೂಚನೆಯ ಪ್ರಕಾರ ಕಾವೇರಿ ನದಿ ಪ್ರಾಧಿಕಾರ ರಚಿಸುವ ಅಗತ್ಯವಿಲ್ಲ ಎಂದು ಬಾರಿ ನೀರಾವರಿ ಸಚಿವ ಕೆ.ಎನ್.ನಾಗೇಗೌಡ ಅವರು ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.