ನವದೆಹಲಿ, ಆಗಸ್ಟ್ 11– ಶರದ್ ಯಾದವ್ ನೇತೃತ್ವದ ಜನತಾದಳ (ಯು) ಜತೆ ಚುನಾವಣೆ ಹೊಂದಾಣಿಕೆ
ಮಾಡಿಕೊಳ್ಳಬೇಕೆಂಬ ಲೋಕಶಕ್ತಿಯ ನಾಯಕ ರಾಮಕೃಷ್ಣ ಹೆಗಡೆ ಅವರ ಮನವಿಯನ್ನು ಬಿಜೆಪಿ ಇಂದು ಸ್ಪಷ್ಟವಾಗಿ ತಿರಸ್ಕರಿಸಿದ್ದರಿಂದ, ಬಿಜೆಪಿ, ಲೋಕಶಕ್ತಿ ಮತ್ತು ಸಮತಾ ಪಕ್ಷದ ನಡುವಣ ಹೊಂದಾಣಿಕೆಗೆ ತೀವ್ರ ಅಪಾಯ ಎದುರಾಗಿದೆ.

ಜನತಾದಳ (ಯು)ಗೆ ರಾಷ್ಟ್ರೀಯ ಜನತಾಂತ್ರಿಕ ಮೈತ್ರಿಕೂಟಕ್ಕೆ ಪ್ರವೇಶ ನೀಡುವ ಬಗೆಗೆ ಯಾವುದೇ ತೀರ್ಮಾನ ಆಗಿಲ್ಲ ಎಂದು, ರಾಮಕೃಷ್ಣ ಹೆಗಡೆ ಅವರು ತಮ್ಮ ಬಳಿ ಬಂದು ಮಾತುಕತೆ ನಡೆಸಿದ
ನಂತರ, ಕುಶಭಾವು ಠಾಕರೆ ಅವರು ತಿಳಿಸಿದ್ದಾರೆ.

ಭಾರತದ ಹೆಲಿಕಾಪ್ಟರಿನತ್ತ ಪಾಕ್ ಕ್ಷಿಪಣಿ: ತಪ್ಪಿದ ಗುರಿ

ನವದೆಹಲಿ, ಆಗಸ್ಟ್ 11 (ಪಿಟಿಐ)– ಪಾಕ್ ವಿಮಾನವನ್ನು ಭಾರತದ ಮಿಗ್ ವಿಮಾನಗಳು ಹೊಡೆದು ಉರುಳಿಸಿದ ಸ್ಥಳಕ್ಕೆ ಪತ್ರಕರ್ತರನ್ನು ಒಯ್ಯುತ್ತಿದ್ದ ಹೆಲಿಕಾಪ್ಟರಿನತ್ತ ಪಾಕಿಸ್ತಾನವು ಇಂದು ಕ್ಷಿಪಣಿಯೊಂದನ್ನು ಹಾರಿಸಿತು. ಆದರೆ ಕ್ಷಿಪಣಿ ಗುರಿ ತಪ್ಪಿದ್ದು ಯಾರಿಗೂ ಅಪಾಯವಾಗಿಲ್ಲ.

ಭಾರತದ ಅಧಿಕಾರಿಗಳು ಹಾಗೂ ಪತ್ರಕರ್ತರು ನಾಲಿಯಾ ವಾಯುನೆಲೆಯಿಂದ ಮೂರು ಹೆಲಿಕಾಪ್ಟರುಗಳಲ್ಲಿ ಕಚ್‌ನ ಖಾರಿ ಕೊಲ್ಲಿಯತ್ತ ಹೋಗುತ್ತಿದ್ದಾಗ ಪಾಕ್ ಪಡೆಗಳು ಭೂಮಿಯಿಂದ ಆಕಾಶಕ್ಕೆ ಹೊಡೆಯುವ ಕ್ಷಿಪಣಿಯನ್ನು ಹಾರಿಸಿದವು.

ಕ್ಷಿಪಣಿಯು ಹೆಲಿಕಾಪ್ಟರಿನಿಂದ ಕೆಲವು ನೂರು ಮೀಟರ್ ದೂರದಲ್ಲಿ ಹಾರಿಹೋಯಿತು. ಹೆಲಿಕಾಪ್ಟರ್ ಗಡಿಯಿಂದ 4 ಕಿ.ಮೀ. ಒಳಗಿದ್ದಾಗ ಈ ದಾಳಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.