ಬೆಂಗಳೂರು, ನೈರುತ್ಯ ರೈಲ್ವೆ ವಲಯವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸುವುದಕ್ಕೆ ವಿರೋಧಿಸುವುದು ಸರಿಯಲ್ಲ, ಈ ವಲಯದ ಕೇಂದ್ರ ಕಚೇರಿಗಳನ್ನು ಹುಬ್ಬಳ್ಳಿ ಮತ್ತು ಬೆಂಗಳೂರು ನಗರಗಳೆರಡರಲ್ಲಿಯೂ ಸ್ಥಾಪಿಸಬೇಕು ಎಂದು ಒತ್ತಾಯಿಸಲು ತಾವು ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಿಯವರಲ್ಲಿಗೆ ಕರೆದೊಯ್ಯಲು ಸಿದ್ಧ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ವಿಧಾನಸಭೆಯಲ್ಲಿ ಇಂದು ಹೇಳಿದರು.

ಶೂನ್ಯವೇಳೆಯಲ್ಲಿ ಕನ್ನಡ ಚಳವಳಿಯ ವಾಟಾಳ್ ನಾಗರಾಜ್ ಅವರು ಪ್ರಸ್ತಾಪಿಸಿದ ನೈರುತ್ಯ ರೈಲ್ವೆ ವಲಯದ ಸ್ಥಳಾಂತರದ ಬಗ್ಗೆ ಸರ್ಕಾರದ ನಿಲುವನ್ನು ಅವರು ಸ್ಪಷ್ಟಪಡಿಸಿದರು.

ಬಿಜೆಪಿ ನೇತೃತ್ವದ ಕೇಂದ್ರದ ಸರ್ಕಾರ ಸುಭದ್ರ: ವಾಜಪೇಯಿ

ನವದೆಹಲಿ, ಸಮ್ಮಿಶ್ರ ಸರ್ಕಾರ ನಡೆಸುವಂತಹ ಸುಲಭವಲ್ಲದ ಕೆಲಸವನ್ನು ತಾವು ಯಶಸ್ವಿಯಾಗಿ ನಿರ್ವಹಿಸುತ್ತಿರುವುದಾಗಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇಂದು ಸಮರ್ಥಿಸಿಕೊಂಡರು.

ಈ ಸರ್ಕಾರ ವರ್ಷ ತುಂಬುವುದರೊಳಗೆ ಬಿದ್ದುಹೋಗುವುದೆಂದು ಬಹಳ ಮಂದಿ ಕನಸು ಕಂಡರು. ಅವರಿಗೆಲ್ಲ ಈಗ ನಿರಾಶೆಯಾಗಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.