ಮಾಮೂಲು ಸ್ಥಿತಿಗೆ ಮಂಗಳೂರು, ಸುರತ್ಕಲ್

ಮಂಗಳೂರು, ಜ. 4– ಕಳೆದ ಆರು ದಿನಗಳಿಂದ ಗಲಭೆಪೀಡಿತವಾಗಿರುವ ಸುರತ್ಕಲ್ ಮತ್ತು ಮಂಗಳೂರು ನಗರದಲ್ಲಿ ಇಂದು ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಬಂಟ್ವಾಳ ಪರಿಸರದಲ್ಲಿ ಕೆಲವು ಕಡೆ ಹಿಂಸಾಚಾರ ನಡೆದಿರುವುದು ಬಿಟ್ಟರೆ ಒಟ್ಟಾರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಎಲ್ಲ ಕಡೆಗಳಲ್ಲಿ ಪೊಲೀಸ್ ಬಂದೋಬಸ್ತನ್ನು ಬಿಗಿಗೊಳಿ
ಸಲಾಗಿದೆ.

ಸುರತ್ಕಲ್ ಪ್ರದೇಶದ ಕಾಟಿಪಳ್ಳ, ಕೃಷ್ಣಾಪುರದಲ್ಲಿ ನಿನ್ನೆ ಕರ್ಫ್ಯೂ ಸಡಿಲಿಸಿದಾಗ ಗುಂಪು ಘರ್ಷಣೆಗಳಾಗಿ ಇರಿತದ ಪ್ರಕರಣ ನಡೆದಿರುವುದರಿಂದ, ಇಂದು ಬೆಳಿಗ್ಗೆ ಅವೆರಡೂ ಸ್ಥಳಗಳಲ್ಲಿ ಕರ್ಫ್ಯೂ ಸಡಿಲಿಸಲಿಲ್ಲ. ಆದರೆ ಸುರತ್ಕಲ್‌ನ ಉಳಿದ ಕಡೆಗಳಲ್ಲಿ ನಾಲ್ಕು ಗಂಟೆಗಳ ಕಾಲ ಮಾತ್ರ ಕರ್ಫ್ಯೂ ಸಡಿಲಿಸ
ಲಾಗಿದ್ದು ಯಾವುದೇ ಘಟನೆ ನಡೆದಿಲ್ಲ.

ಸರ್ಕಾರ: ಬಿಜೆಪಿ ನಿಯಂತ್ರಣ ಇಲ್ಲ ಕುಶಭಾವು ಠಾಕ್ರೆ

ಬೆಂಗಳೂರು, ಜ. 4– ಬಿಜೆಪಿ ನೇತೃತ್ವದ ಸರ್ಕಾರದ ಕಾರ್ಯವೈಖರಿಯನ್ನು ‘ಹಿಂದಿನ ಸೀಟಿನಲ್ಲಿ ಕುಳಿತು ನಿಯಂತ್ರಿಸುವ ಕೆಲಸವನ್ನು’ ತಮ್ಮ ಪಕ್ಷ ಮಾಡುತ್ತಿಲ್ಲವೆಂದು ಬಿಜೆಪಿ ಅಧ್ಯಕ್ಷ ಕುಶಭಾವು ಠಾಕ್ರೆ ಇಂದು ಇಲ್ಲಿ
ಸ್ಪಷ್ಟಪಡಿಸಿದರು.

ಅದೇ ವೇಳೆ, ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಪಕ್ಷದ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ ಎಂದೂ ಅವರು ಹೇಳಿದರು.

ಇಲ್ಲಿ ಮುಕ್ತಾಯಗೊಂಡ ಎರಡು ದಿನಗಳ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾವೇಶದ ನಂತರ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.