ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ | ಕಾಂಗ್ರೆಸ್‌ನಿಂದ ಪವಾರ್‌, ಸಂಗ್ಮಾ, ತಾರಿಖ್ ಉಚ್ಚಾಟನೆ

Published 20 ಮೇ 2024, 21:30 IST
Last Updated 20 ಮೇ 2024, 21:30 IST
ಅಕ್ಷರ ಗಾತ್ರ

ನವದೆಹಲಿ, ಮೇ 20– ಸೋನಿಯಾ ಗಾಂಧಿ ವಿರುದ್ಧ ಬಂಡಾಯ ಎದ್ದಿರುವ ಮೂವರು ಹಿರಿಯ ನಾಯಕರಾದ ಶರದ್‌ ಪವಾರ್‌, ಪಿ.ಎ. ಸಂಗ್ಮಾ ಹಾಗೂ ತಾರಿಖ್‌ ಅನ್ವರ್‌ ಅವರನ್ನು ಇಂದು ರಾತ್ರಿ ಕಾಂಗ್ರೆಸ್ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.

ಇಂದು ಸಂಜೆ 7.30ಕ್ಕೆ ಆರಂಭವಾದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ವಿದೇಶಿ ಪ್ರಜೆ ಎಂಬ ಕಾರಣಕ್ಕೆ ಪ್ರಧಾನಿ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಮಾಡಬಾರದು ಎಂದು ಬಹಿರಂಗವಾಗಿ ಹೇಳುವ ಮೂಲಕ ಕಾಂಗ್ರೆಸ್‌ ಪಕ್ಷವೇ ಅಲ್ಲದೆ ದೇಶದಲ್ಲಿ ಕೋಲಾಹಲಕಾರಿ ಚರ್ಚೆಗೆ ಈ ಮೂವರು ನಾಯಕರು
ಕಾರಣರಾಗಿದ್ದರು.

ಬಿಜೆಪಿ ಪ್ರಣಾಳಿಕೆಯಲ್ಲಿ ವಿದೇಶಿ ಪ್ರಜೆ ವಿವಾದ: ಪ್ರಧಾನಿ

ನವದೆಹಲಿ, ಮೇ 20– ತನ್ನ ಮೊದಲ ನಿಲುವಿಗೆ ವಿರುದ್ಧವಾಗಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವು (ಎನ್‌ಡಿಎ) ವಿದೇಶಿ ಮೂಲದ ಭಾರತದ ನಾಗರಿಕರು ಪ್ರಧಾನಿ, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪ‍ತಿ ಹುದ್ದೆಗಳನ್ನು
ಅಲಂಕರಿಸುವುದನ್ನು ನಿಷೇಧಿಸುವ ಸಲಹೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲು ಆಲೋಚಿಸುತ್ತಿದೆ ಎಂದು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಹೇಳಿದ್ದಾರೆ.

ಈ ಮುನ್ನ ವಾಜಪೇಯಿ ಅವರು, ಆ ರೀತಿಯ ವಿಚಾರವನ್ನು ನಿರಾಕರಿಸಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತದ ನಾಗರಿಕರಾಗಿದ್ದು, ಚುನಾವಣೆಗೆ ಸ್ಪರ್ಧಿಸುವ ಹಾಗೂ ಪ್ರಧಾನಿಯಾಗುವ ಹಕ್ಕು ಆಕೆಗೆ ಇದೆ ಎಂದು ಅಭಿಪ್ರಾಯಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT