ಚಂದ್ರಪುರ (ಮಹಾರಾಷ್ಟ್ರ), ಆ. 30 (ಪಿಟಿಐ): ಕಾರ್ಗಿಲ್ ಹೋರಾಟಕ್ಕೆ ಮುನ್ನ ಆದ ಬೇಹುಗಾರಿಕೆ ವೈಫಲ್ಯಕ್ಕಾಗಿ ಸರ್ಕಾರವು ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಒತ್ತಾಯಿಸಿದರು.
ವೈಫಲ್ಯದಿಂದಾಗಿ ನೂರಾರು ಮಂದಿ ಧೀರ ಸೈನಿಕರು ಜೀವದ ಬೆಲೆ ತೆರಬೇಕಾಗಿ ಬಂದಿತೆಂದು ಅವರು ಸ್ಮರಿಸಿದರು.
‘ನಿರ್ಲಕ್ಷ್ಯ ಹಾಗೂ ವೈಫಲ್ಯಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ನಾಚಿಕೆಯಿಂದ ತಲೆತಗ್ಗಿಸ
ಬೇಕು. ಇದರಿಂದ ಕಾರ್ಗಿಲ್‌ನಲ್ಲಿ ಯುದ್ಧಕ್ಕೆ ಸಮಾನವಾದ ಪರಿಸ್ಥಿತಿ ಉಂಟಾಯಿತು’ ಎಂದು ಸೋನಿಯಾ ಟೀಕಿಸಿದರು.
ಆಸ್ತಿ ವಿವರ ನೀಡದ ಸಚಿವರ ರಾಜೀನಾಮೆ
ಬೆಂಗಳೂರು, ಆ. 30– ಗೃಹ ಖಾತೆಯ ಸಹಾಯಕ ಸಚಿವ ಅಶ್ವತ್ಥನಾರಾಯಣ ರೆಡ್ಡಿ ಮತ್ತು ಭಾರಿ ನೀರಾವರಿ ಖಾತೆಯ ಸಹಾಯಕ ಸಚಿವ ನಾಗಪ್ಪ ಸಾಲೋನಿ ಅವರು ಹೈಕೋರ್ಟ್ ನಿರ್ದೇಶನದಂತೆ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಲೋಕಾಯುಕ್ತಕ್ಕೆ ಸೂಕ್ತ ಕಾಲದಲ್ಲಿ ತಮ್ಮ ಆಸ್ತಿಗಳ ವಿವರ ನೀಡಿಲ್ಲ ಎಂಬ ಕಾರಣಕ್ಕಾಗಿ ಈ ಇಬ್ಬರು ಸಚಿವರು ಮೂರು ದಿನಗಳೊಳಗೆ ರಾಜೀನಾಮೆ ನೀಡಬೇಕು ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಅದರಂತೆ ಈ ಸಚಿವರು ಸಲ್ಲಿಸಿರುವ ರಾಜೀನಾಮೆ ತಮಗೆ ತಲುಪಿದೆ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಇಂದು ಸುದ್ದಿಗಾರರಿಗೆ ತಿಳಿಸಿದರು.