ಎಂಜಿನಿಯರುಗಳ ಬಡ್ತಿಗೆ ‘ಪ್ರತಿಭೆ’ ಮಾನದಂಡ

ಬೆಂಗಳೂರು, ಮೇ 13– ಎಂಜಿನಿಯರು ಗಳಿಗೆ ಬಡ್ತಿ ನೀಡುವಾಗ ಸೇವಾ ಹಿರಿತನವೊಂದನ್ನೇ ಪರಿಗಣಿಸುವುದು ಅಸಾಧ್ಯ. ಪ್ರತಿಭೆಯೇ ಬಡ್ತಿಗೆ ಅಳತೆಗೋಲು ಎಂದು ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಇಂದು ಇಲ್ಲಿ ಹೇಳಿದರು.

ಎಂಜಿನಿಯರುಗಳ ಸಂಘಟನೆಗಳ ದಕ್ಷಿಣ ಭಾರತೀಯ ಒಕ್ಕೂಟದ ಒಂದು ದಿನದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ತರುಣ ಎಂಜಿನಿಯರ್‌ಗಳು ಬಹಳ ಬುದ್ಧಿವಂತ
ರಿದ್ದು, ಬಡ್ತಿ ನೀಡುವಾಗ ಅವರಿಗೆ ಅವಕಾಶ ಕೊಡುವುದು ಸಮಂಜಸ ಎಂದು ಸೂಚ್ಯವಾಗಿ ಹೇಳಿದರು.

ಅಮೆರಿಕದ ಚೆಲ್ಸಿ ಸ್ಮಿತ್ ವಿಶ್ವಸುಂದರಿ

ವಿಂಡ್‌ಹಾಕ್, ಮೇ 13 (ರಾಯಿಟರ್ಸ್)– ಅಮೆರಿಕದ ಚೆಲ್ಸಿ ಸ್ಮಿತ್ ಅವರು ಇಲ್ಲಿ ನಡೆದ ವರ್ಣರಂಜಿತ ಸ್ಪರ್ಧೆಗಳಲ್ಲಿ 1995ರ ವಿಶ್ವಸುಂದರಿಯಾಗಿ ಆಯ್ಕೆಯಾದರು.

ಭಾರತದ ಮನ್‌ಪ್ರೀತ್ ಬ್ರಾರ್ ಅವರು ಎರಡನೇ ಸ್ಥಾನ ಗಳಿಸಿದರೆ, ಕೆನಡಾದ ಲಾನಾ ಬುಷ್‌ಬರ್ಗರ್ ಮೂರನೇ ಸ್ಥಾನ ಪಡೆದರು.

ಕಳೆದ ವರ್ಷದ ವಿಶ್ವಸುಂದರಿ ಭಾರತದ ಸುಸ್ಮಿತಾ ಸೇನ್ ಅವರು ಸ್ಮಿತ್ ಅವರಿಗೆ ಕಿರೀಟಧಾರಣೆ ಮಾಡಿದರು. ಆಫ್ರಿಕಾ ಖಂಡದ ದೇಶವೊಂದರಲ್ಲಿ ವಿಶ್ವಸುಂದರಿ ಸ್ಪರ್ಧೆ ನಡೆದದ್ದು ಇದೇ ಮೊದಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.