ಭೂ ಕಾಯ್ದೆ ತಿದ್ದುಪಡಿ: ರಾಜ್ಯ ಸರ್ಕಾರಕ್ಕೆ ಕೋರ್ಟ್ ನೋಟಿಸ್

ನವದೆಹಲಿ, ನ. 30– ಕರ್ನಾಟಕದ ವಿವಾದಾತ್ಮಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಲ್ಲಿ ಮೀನು ಸಾಕಣೆಯನ್ನು ಕೃಷಿಯ ವ್ಯಾಪ್ತಿಗೆ ಒಳಪಡಿಸಿದ ಕಲಂನ ಕ್ರಮಬದ್ಧತೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಮೀನು ಸಾಕಣೆಯನ್ನು ಕೃಷಿ ಎಂದು ತಿದ್ದುಪಡಿ ಕಾಯ್ದೆಯಲ್ಲಿ ವ್ಯಾಖ್ಯಾನಿಸಲಾಗಿದೆ. ಇದು, ಜೀವಿ, ಬದುಕು ಮತ್ತು ಪರಿಸರ ಕುರಿತ ಸಂವಿಧಾನದ 14, 19 ಮತ್ತು 21ನೇ ಕಲಂಗಳ ಉಲ್ಲಂಘನೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರೊ. ಎಂ.ಡಿ.ನಂಜುಂಡಸ್ವಾಮಿ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.

ವಲಸೆ ನಿಯಂತ್ರಣಕ್ಕೆ ‘ಲಕ್ಷ್ಮಣ ರೇಖೆ’

ಬೆಂಗಳೂರು, ನ. 30– ಹೊರ ರಾಜ್ಯಗಳಿಂದ ಬೆಂಗಳೂರಿಗೆ ಧಾವಿಸುತ್ತಿರುವವರ ವಲಸೆಯನ್ನು ನಿಯಂತ್ರಿಸುವುದಕ್ಕಾಗಿ ‘ಲಕ್ಷ್ಮಣ ರೇಖೆ’ ಎಳೆಯಲು ತಾವು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡರು ಇಂದು ಇಲ್ಲಿ ಪ್ರಕಟಿಸಿದರು.

ಬೆಂಗಳೂರಿನಲ್ಲಿ ಇರುವವರಿಗೆಲ್ಲರಿಗೂ ಮನೆ ಇಲ್ಲವೇ ನಿವೇಶನ ಸಿಗುವುದು ಖಚಿತ ಎಂಬ ಹಿನ್ನೆಲೆಯಲ್ಲಿ ಈ ನಗರಕ್ಕೆ ಬರುವವರ ಪ್ರಮಾಣ ಏಕಾಏಕಿಯಾಗಿ ಹೆಚ್ಚುವ ಅಪಾಯವಿದೆ. ಆದರೆ, ಈ ಆಸೆಯಿಂದ ಇಂದು, ನಾಳೆ ಬಂದವರಿಗೆಲ್ಲಾ ಇಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗದು. ಅದಕ್ಕೆ ಒಂದು ಮಿತಿಯನ್ನು ವಿಧಿಸಲೇಬೇಕಾಗಿದೆ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.